ಪ್ಯಾರಿಸ್: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಫ್ರೆಂಚ್ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ನಲ್ಲಿ ಫೈನಲ್ಗೇರಿದ್ದು, 28 ವರ್ಷದ ನಂತರ ಭಾರತೀಯರು ಪ್ರಶಸ್ತಿ ಜಯಿಸುವ ನಿರೀಕ್ಷೆ ಹರಡಿದೆ. 31 ವರ್ಷದ ಪಿವಿ ಸಿಂಧು ಶನಿವಾರ ನಡೆದ ಸೆಮಿಫೈನಲ್ನಲ್ಲಿ ಜಪಾನ್ನ ಹಿನಾ ಅಕೆಚಿ ಎದುರು 21-10, 20-22, 21-16 ಮೂರು ಗೇಮ್ಗಳ ಕಠಿಣ ಹೋರಾಟದಲ್ಲಿ ಗೆಲುವು ಒಲಿಸಿಕೊಂಡರು.
1 ಗಂಟೆ 13 ನಿಮಿಷಗಳ ಕಾದಾಟದಲ್ಲಿ ಮೇಲುಗೈ ಸಾಧಿಸಿ ವಿಶ್ವ ನಂ.11 ಸಿಂಧು ಹಾಲಿ ವರ್ಷ ಸೂಪರ್-750 ಟೂರ್ನಿಯಲ್ಲಿ ಫೈನಲ್ಗೇರಿದ ಎರಡನೇ ದೃಷ್ಟಾಂತ ಇದಾಗಿದೆ. ಇದಕ್ಕೆ ಮುನ್ನ ಜುಲೈನಲ್ಲಿ ಜಪಾನ್ ಓಪನ್ ಸೂಪರ್ ಪ್ರಶಸ್ತಿ ಜಯಿಸಿದ್ದರು. ಫೈನಲ್ಗೇರಿರುವುದಕ್ಕೆ ಹರ್ಷವ್ಯಕ್ತಪಡಿಸಿರುವ ಸಿಂಧು, ಇನ್ನೂ ಕೆಲಸ ಮುಗಿದಿಲ್ಲ. ಇನ್ನೂಂದು ಪಂದ್ಯಕ್ಕೆ ಸಿದ್ಧಳಾಗಬೇಕಿದೆ ಎಂದು ಪಂದ್ಯ ನಂತರ ನುಡಿದರು.
ಫೈನಲ್ನಲ್ಲಿ ವಿಶ್ವ ನಂ.1 ಹಾಗೂ ಕೊರಿಯಾದ ಆನ್ ಸೆ ಯಂಗ್ ವಿರುದ್ಧ ಸೆಣಸಲಿದ್ದಾರೆ.
1998ರಲ್ಲಿ ಅಪರ್ಣಾ ಪೊಪಟ್ ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಕೊನೆಯ ಮಹಿಳಾ ಷಟ್ಲರ್ ಎನಿಸಿದ್ದು, 28 ವರ್ಷಗಳ ಭಾರತೀಯರ ಪ್ರಶಸ್ತಿ ಬರ ನೀಗಿಸುವ ಅವಕಾಶ ಸಿಂಧು ಮುಂದಿದೆ.