ಪ್ಯಾರಿಸ್: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಫ್ರೆಂಚ್ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತನ್ನ ಅದ್ಭುತ ನಿರ್ವಹಣೆ ಮುಂದುವರಿಸಿದ್ದು, ಮಹಿಳಾ ಸಿಂಗಲ್ಸ್ನಲ್ಲಿ ಸೆಮಿಫೈನಲ್ಗೇರಿದ್ದಾರೆ. ಯುವ ತಾರೆ ಅಶ್ಮಿತಾ ಚಲಿಹಾ ಕ್ವಾರ್ಟರ್ಫೈನಲ್ನಲ್ಲಿ ನಿರಾಸೆ ಅನುಭವಿಸಿದರು.ಶುಕ್ರವಾರ ನಡೆದ ಎಂಟರಟ್ಟದ ಪಂದ್ಯದಲ್ಲಿ ವಿಶ್ವ ನಂ.11 ಪಿವಿ ಸಿಂಧು 21&13,21&14 ನೇರ ಗೇಮ್ಗಳಿಂದ ಚೀನಾ ತೈಪೆಯ ಚಿಯು ಪಿನ್ ಚಿಯಾನ್ ವಿರುದ್ಧ 39 ನಿಮಿಷಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಂಡರು.
31 ವರ್ಷದ ಸಿಂಧು ಫ್ರೆಂಚ್ ಓಪನ್ ಟೂರ್ನಿಯಲ್ಲಿ 2017, 2021ರ ಆವೃತ್ತಿಯ ನಂತರ ಅಂತಿಮ 4ರ ಟ್ಟಕ್ಕೇರಿದ್ದು, ಜಪಾನ್ ಹಿನಾ ಅಕೇಚಿ ಎದುರು ಫೈನಲ್ ಸ್ಥಾನಕ್ಕಾಗಿ ಸೆಣಸಲಿದ್ದಾರೆ.ಸಿಂಧು ಟೂರ್ನಿಯಲ್ಲಿ ಸವಾಲು ಜೀವಂತವಿರಿಸಿರುವ ಏಕೈಕ ಭಾರತೀಯ ಷಟ್ಲರ್ ಆಗಿದ್ದಾರೆ. ಇನ್ನೊಂದು ಕ್ವಾರ್ಟರ್ಫೈನಲ್ನಲ್ಲಿ ಅಶ್ಮಿತಾ ಚಲಿಹಾ 10-21, 21-17, 16-21 ಮೂರು ಗೇಮ್ಗಳ ಹೋರಾಟದಲ್ಲಿ ಜಪಾನ್ನ ನೊಜೊಮಿ ಒಕುಹರಾ ಎದುರು ಪರಾಭವಗೊಂಡರು.