ಬೆಂಗಳೂರು: ಕನ್ನಡಿಗ ಕೆಎಲ್ ರಾಹುಲ್ ಲಾಕ್ಡೌನ್ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸಹ ಆಟಗಾರರೊಂದಿಗೆ ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಳ್ಳುವ ರಾಹುಲ್, ಬಗೆ ಬಗೆಯ ಫೋಟೋಗಳನ್ನು ಪ್ರಕಟಿಸುತ್ತಾರೆ. ಸೋಮವಾರವಷ್ಟೇ ತಮ್ಮ ಕೈಯಲ್ಲಿ ಮುಖಮುಚ್ಚಿಕೊಂಡ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ ರಾಹುಲ್, ಕ್ಯಾಪ್ಶನ್ಗಾಗಿ ಯೋಚಿಸುತ್ತಿರುವೆ ಎಂದು ಬರೆದುಕೊಂಡಿದ್ದರು. ಇದಕ್ಕೆ ಹಲವು ಹಾಲಿ-ಮಾಜಿ ಆಟಗಾರರು ಬಗೆ ಬಗೆ ರೀತಿ ಪ್ರತಿಕ್ರಿಯಸಿದ್ದರೆ, ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಮತ್ತೋರ್ವ ಕ್ರಿಕೆಟಿಗನ ಸಲಹೆ ಪಡೆಯುವಂತೆ ಕಾಲೆಳೆದಿದ್ದಾರೆ.
ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ನಿರ್ವಹಣೆ ಮೂಲಕ ರಾಹುಲ್ ಗಮನಸೆಳೆದಿದ್ದರು. 5 ಟಿ20 ಪಂದ್ಯಗಳಿಂದ 224 ರನ್ಗಳಿಸಿದ್ದರೆ, 3 ಪಂದ್ಯಗಳ ಏಕದಿನ ಸರಣಿಯಲ್ಲಿ 204 ರನ್ ಪೇರಿಸಿದ್ದರು. ಜತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಿದ್ದರು. ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ಐಪಿಎಲ್ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ.