ಕ್ರೀಡೆ

ಒಂದು ಸಿಕ್ಸರ್ ಭಾರತಕ್ಕೆ 2011ರ​ ವಿಶ್ವಕಪ್​ ಗೆಲ್ಲಿಸಲಿಲ್ಲ ಎಂಬ ಗಂಭೀರ್​ ಹೇಳಿಕೆಗೆ ತೀರುಗೇಟು ನೀಡಿದ ಭಾರತದ ಮಾಜಿ ಆಟಗಾರ| World Cup

World Cup: 2011ರ ಒಂಡೇ ವಿಶ್ವಕಪ್​ನ್ನು ಕೇವಲ ಧೋನಿಯ ಒಂದು ಸಿಕ್ಸರ್​ನಿಂದ ಗೆಲ್ಲಲಿಲ್ಲ ಎಂದು ಹೇಳಿದ್ದ ಗೌತಮ್ ಗಂಭೀರ್ ಮಾತಿಗೆ ಭಾರತ ತಂಡದ ಮಾಜಿ ಆಟಗಾರ ಪ್ರತಿಕ್ರಿಯಿಸಿದ್ದು, ಆ ಒಂದು ಸಿಕ್ಸರ್​ ನಂತರವೇ ಭಾರತ ವಿಶ್ವಕಪ್​ ಗೆದ್ದಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ನಿರೂಪಕ ಶುಭಂಕರ್ ಮಿಶ್ರಾ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ರೈನಾ, ಭಾರತದ ವಿಶ್ವಕಪ್ ಗೆಲುವಿಗೆ ಸಹಾಯಕ ಸಿಬ್ಬಂದಿ ಮತ್ತು ಅಭಿಮಾನಿಗಳು ಸೇರಿದಂತೆ ಪ್ರಯಾಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಕಾರಣ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ರೈನಾ, ಯಾರೇ ಏನೇ ಹೇಳಿದರೂ ಭಾರತ ತಂಡ ವಿಶ್ವಕಪ್ ಗೆದ್ದಿತು. ಈ ವಿಶ್ವಕಪ್ ಭಾರತ ತಂಡಕ್ಕಾಗಿ, ನಮಗಾಗಿ ಪ್ರಾರ್ಥಿಸಿದವರಿಗಾಗಿ ಮತ್ತು 6 ವಿಶ್ವಕಪ್ ಆಡಿದ ಆದರಲ್ಲಿ ಒಂದನ್ನೂ ಗೆಲ್ಲದ ಸಚಿನ್​ಗಾಗಿ ಎಂದು ಎಲ್ಲಾ ಆಟಗಾರರಿಗೆ ತಿಳಿದಿದೆ. ಇದು ನಮ್ಮ ಕೋಚ್, ಸಹಾಯಕ ಸಿಬ್ಬಂದಿ, ಮಾಣೆಕ್ ಕಾಕಾ, ತರಬೇತುದಾರರು, ವೈದ್ಯರು, ನಾಯಕ, ಉಪನಾಯಕ ಮತ್ತು ನಮ್ಮ ಬಾಲ್ಯದ ತರಬೇತುದಾರರಿಗಾಗಿ ಎಂದು ರೈನಾ ಹೇಳಿದ್ದಾರೆ.

ಅಲ್ಲದೆ, ಟೂರ್ನಿ ಉದ್ದಕ್ಕೂ ಯುವರಾಜ್ ಸಿಂಗ್ ನೀಡಿದ ಕೊಡುಗೆಗಳನ್ನು ಕಡೆಗಣಿಸಲಾಗುವುದಿಲ್ಲ ಎಂದು ರೈನಾ ಸೂಚಿಸಿದರು. ವಿಶ್ವಕಪ್​ನಲ್ಲಿ ಮೂರು ವಿಭಾಗಗಳಲ್ಲಿಯೂ ಪ್ರಮುಖ ಪಾತ್ರ ವಹಿಸಿದರು ಹಾಗೂ ಮೆನ್​ ಆಫ್​ ದಿ ಟೂರ್ನಮೆಂಟ್‌ನ ಪ್ರಶಸ್ತಿ ಪಡೆದರು ಎಂದು ಯುವಿಯನ್ನು ರೈನಾ ಶ್ಲಾಘಿಸಿದರು.

ಸಂಪೂರ್ಣ ಟೂರ್ನಮೆಂಟ್ ಚೆನ್ನಾಗಿತ್ತು, ಆದರೆ ನಾವು ಯುವರಾಜ್ ಸಿಂಗ್​ರಿಂದಾಗಿ ಟೂರ್ನಮೆಂಟ್ ಗೆದ್ದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಯುವಿ ಬ್ಯಾಟಿಂಗ್ ಮಾಡಿದ ರೀತಿ, ಫೀಲ್ಡಿಂಗ್ ಮಾಡಿದ ರೀತಿ ನಂತರ, ಯುವಿಗೆ ಕ್ಯಾನ್ಸರ್ ಇದೆ ಎಂದು ನಮಗೆ ತಿಳಿಯಿತು. ಆ ವ್ಯಕ್ತಿಗೆ ಹ್ಯಾಟ್ಸ್ ಆಫ್ ಎಂದು ತಿಳಿಸಿದರು.(ಏಜೆನ್ಸೀಸ್)