ಕ್ರೀಡೆ

ಬಿಗ್​ಬಾಸ್​ ಓಟಿಟಿ-2 ಶೋನಲ್ಲಿ ಕಾಣಿಸಿಕೊಂಡ ಅಜಯ್​ ಜಡೇಜಾ; ಹೊಸ ಅನುಭವ ಎಂದ ಮಾಜಿ ಕ್ರಿಕೆಟಿಗ

ನವದೆಹಲಿ: ಟೀ ಇಂಡಿಯಾ ಕ್ರಿಕೆಟಿಗರು ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿರುವು ಹೊಸದೇನಲ್ಲ. ಸಾಕಷ್ಟು ಕ್ರಿಕೆಟ್ ತಾರೆಯಲ್ಲಿ ವಿವಿಧ ಭಾಷೆಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನ ಒಟಿಟಿಯ 2ನೇ ಸೀಸನ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಪ್ಯಾನಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ.

ಬಿಗ್​ಬಾಸ್ ಒಟಿಟಿ ಸೀಸನ್​ನಲ್ಲಿ ಪ್ಯಾನಲಿಸ್ಟ್ ಇರಲಿದ್ದು, ಅಜಯ್ ಜಡೇಜಾ ಜತೆಗೆ ನಟಿ ಸನ್ನಿ ಲಿಯೋನ್, ಬಿಗ್​ ಬಾಸ್ ಸೀಸನ್ 16ರ ವಿಜೇತ ಎಂ.ಸಿ.ಸ್ಟಾನ್ ಮತ್ತು ಸಂದೀಪ್ ಸಿಂಕದ್ ಇರಲಿದ್ದಾರೆ. ಈ ಬಗ್ಗೆ ಮಾತನಾಡುತ್ತಾ, 'ಭಾರತದ ಅತೀ ದೊಡ್ಡ ರಿಯಾಲಿಟಿ ಶೋನ ಭಾಗವಾಗಲು ಉತ್ಸುಕನಾಗಿದ್ದೇನೆ. ಕ್ರಿಕೆಟ್ ಮತ್ತು ಸಿನಿಮಾ ಬೇರೆ ಬೇರೆ ಕ್ಷೇತ್ರ. ರಿಯಾಲಿಟಿ ಶೋ ಭಿನ್ನವಾಗಿದ್ದು ಹೊಸ ಅನುಭವ' ಎಂದು ಅಜಯ್ ಜಡೇಜಾ ಹೇಳಿಕೊಂಡಿದ್ದಾರೆ.

ಪ್ಯಾನಲಿಸ್ಟ್​ಗಳ ಪಾತ್ರವೇನು?

ಸ್ಪರ್ಧಿಗಳ ಮಾತು ಹಾಗೂ ನಡವಳಿಕೆಯ ಕಾರಣದಿಂದ ಮೊದಲ ಹಿಂದಿ ಒಟಿಟಿ ಬಿಗ್​ಬಾಸ್ ಸೀಸನ್ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ಸ್ಪರ್ಧಿಗಳ ಅಸಭ್ಯ ವರ್ತನೆಗೆ ಕಡಿವಾಣ ಹಾಕಲು ಬಿಗ್​ಬಾಸ್ ಮುಂದಾಗಿದೆ. ಸ್ಪರ್ಧಿಗಳು ಮನೆಯಲ್ಲಿ ನಡುದುಕೊಳ್ಳುವ ವರ್ತನೆ ಬಗ್ಗೆ ಪ್ಯಾನಲಿಸ್ಟ್​​ಗಳು ಪ್ರಶ್ನೆ ಕೇಳಬಹುದಾಗಿದೆ.