ಕ್ರೀಡೆ

ಜೋಕೊವಿಕ್- ನಡಾಲ್ ಕಾದಾಟಕ್ಕೆ ಸಾಕ್ಷಿಯಾದ ಪ್ಯಾರಿಸ್ ಒಲಿಂಪಿಕ್ಸ್

ಪ್ಯಾರಿಸ್: ಒಲಿಂಪಿಕ್ಸ್ ಟೆನಿಸ್ ಸ್ಪರ್ಧೆಯ ಪುರುಷರ ಸಿಂಗಲ್ಸ್ ವಿಭಾಗ ಸೋಮವಾರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. 24 ಗ್ರಾಂಡ್ ಸ್ಲಾಂ ಚಾಂಪಿಯನ್ ಸೆರ್ಬಿಯಾದ ನೊವಾಕ್ ಜೋಕೊವಿಕ್ 2ನೇ ಸುತ್ತಿನ ಪಂದ್ಯದಲ್ಲಿ 6-1, 6-1 ನೇರ ಸೆಟ್‌ಗಳಿಂದ 22 ಗ್ರಾಂಡ್ ಸ್ಲಾಂ ವಿಜೇತ ಸ್ಪೇನ್‌ನ ರಾೆಲ್ ನಡಾಲ್ ಎದುರು ಗೆಲುವು ದಾಖಲಿಸಿದರು. ಇದರೊಂದಿಗೆ ಜೋಕೋ ಮೊದಲ ಒಲಿಂಪಿಕ್ಸ್ ಸ್ವರ್ಣ ಪದಕದ ಆಸೆ ಜೀವಂತವಿಟ್ಟರೆ, 38 ವರ್ಷದ ನಡಾಲ್ 14 ಬಾರಿ ್ರೆಂಚ್ ಓಪನ್ ಗೆದ್ದಿದ್ದ ರೋಲ್ಯಾಂಡ್ ಗ್ಯಾರಸ್‌ನ ಆವೆಮಣ್ಣಿನ ಸಿಂಗಲ್ಸ್ ಕಾದಾಟಕ್ಕೆ ಸೋಲಿನ ವಿದಾಯ ಹೇಳಿದ್ದಾರೆ. ಅವರಿನ್ನು ಡಬಲ್ಸ್‌ನಲ್ಲಿ ಯುವ ತಾರೆ ಕಾರ್ಲೋಸ್ ಅಲ್ಕರಾಜ್ ಜತೆಗೂಡಿ ಆಡಲಿದ್ದಾರೆ.

ಎರಡು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನಡಾಲ್ ಗಾಯದ ಸಮಸ್ಯೆ ನಡುವೆಯೂ ಕಣಕ್ಕಿಳಿಯುವ ಮೂಲಕ ಗಮನ ಸೆಳೆದರು. ಇದು ನಡಾಲ್-ಜೋಕೋ ನಡುವಿನ ಒಟ್ಟಾರೆ 60ನೇ ಮುಖಾಮುಖಿ ಆಗಿದೆ. ಇದರಲ್ಲಿ ಜೋಕೋ 31-29 ರಿಂದ ಮೇಲುಗೈ ಸಾಧಿಸಿದ್ದಾರೆ. ಮುಕ್ತ ಟೆನಿಸ್ ಯುಗದಲ್ಲಿ ಇವರಿಬ್ಬರು ಪರಸ್ಪರ ಎದುರಾದಷ್ಟು ಬೇರಾರೂ ಮುಖಾಮುಖಿಯಾಗಿಲ್ಲ. ಎರಡು ವರ್ಷದ ಬಳಿಕ ಇವರಿಬ್ಬರು ಮುಖಾಮುಖಿಯಾದ ಪಂದ್ಯ ಇದಾಗಿದೆ.

3ನೇ ಸುತ್ತಿಗೇರಿದ 37 ವರ್ಷದ ಜೋಕೊವಿಕ್‌ಗೆ ಯಾವುದೇ ಹಂತದಲ್ಲೂ ನಡಾಲ್ ಸವಾಲು ಎನಿಸಲಿಲ್ಲ. ಆದರೆ 2ನೇ ಗೇಮ್‌ನಲ್ಲಿ 4-0 ಹಿನ್ನಡೆಯಲ್ಲಿದ್ದ ನಡಾಲ್, 4-4 ಸಮಬಲದೊಂದಿಗೆ ಕಂಬ್ಯಾಕ್ ಮಾಡುವ ಸೂಚನೆ ನೀಡಿದರು. ಆದರೆ ಜೋಕೋ ಪಂದ್ಯದಲ್ಲಿ ಹಿಡಿತ ಸಾಧಿಸಿ ಗೆಲುವು ಒಲಿಸಿಕೊಂಡರು. ನಡಾಲ್ 2008 (ಸಿಂಗಲ್ಸ್) ಹಾಗೂ 2016ರಲ್ಲಿ (ಡಬಲ್ಸ್) ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದರು.