ಪಾಕಿಸ್ತಾನದಲ್ಲೂ ಫಿಫಾ ವಿಶ್ವಕಪ್ ಆಯೋಜನೆ ಸಾಧ್ಯ ಎಂದ ಸಂಸದ ನಬೀಲ್ ಗಬೋಲ್ 
ಫುಟ್ಬಾಲ್

ನಮ್ಮಲ್ಲೂ ಮೈದಾನ ಇದೆ, ನಾವೇ FIFA ಆಯೋಜಿಸೋಣ: ಪಾಕ್​ ಸಂಸದ ನಬೀಲ್ ಗಬೋಲ್ ಹೇಳಿಕೆ ವೈರಲ್​! Nabil Gabol on FIFA

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದಲ್ಲೂ ಫಿಫಾ ವಿಶ್ವಕಪ್ ಆಯೋಜನೆ ಸಾಧ್ಯ ಎಂದ ಸಂಸದ ನಬೀಲ್ ಗಬೋಲ್
  • ನಮ್ಮ ಲಿಯಾರಿಯಲ್ಲಿ ಮೈದಾನವಿದೆ ಎಂದ ಪಾಕ್ ಸಂಸದ
  • ಸೋಷಿಯಲ್​ ಮೀಡಿಯಾನಲ್ಲಿ ಸಂಸದನ ಹೇಳಿಕೆ ವೈರಲ್​​
ಇಸ್ಲಾಮಾಬಾದ್​: ಸದ್ಯ ಪ್ರಪಂಚದಲ್ಲಿ ಎಲ್ಲಿ ನೋಡಿದರೂ ಫಿಫಾ ಫುಟ್ಬಾಲ್​ನದ್ದೇ ಸದ್ದು ಕೇಳಿ ಬರುತ್ತಿದೆ. ಈ ಭಾರಿಯ ಫಿಫಾ ವಿಶ್ವಕಪ್​ನ್ನು ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ಮೂವರು ಸೇರಿಕೊಂಡು ಆಯೋಜನೆ ಮಾಡುತ್ತಿದ್ದಾರೆ. ಫಿಫಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂರು ದೇಶಗಳು ಸೇರಿಕೊಂಡು ಫಿಫಾ ವಿಶ್ವಕಪ್​ನ್ನು ಆಯೋಜನೆ ಮಾಡಿತ್ತಿವೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಸಂಸದರೊಬ್ಬರು ನಮ್ಮ ದೇಶದಲ್ಲಿ ಕೂಡ ಮೈದಾನವಿದೆ, ನಾವೇಕೆ ಫಿಫಾ ವಿಶ್ವಕಪ್​(Nabil Gabol on FIFA)ನ್ನು ಆಯೋಜನೆ ಮಾಡಬಾರದೆಂದು ಸಂಸತ್ತಿನಲ್ಲಿ ಹೇಳಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಲಿಯಾರಿನಲ್ಲಿ ಆಯೋಜನೆ ಮಾಡೋಣ!

ಬಾಲಿವುಡ್​​ನ ಖ್ಯಾತ ಸಿನಿಮಾ ಧುರಂಧರ್​ನಲ್ಲಿ ಜಮೀಲ್​ ಜಮಾಲಿ ಪಾತ್ರದ ಪ್ರೇರಣೆ ಎಂದು ಹೇಳಲಾಗುವ ಲಿಯಾರಿ ಎಂಪಿ ನಬೀಲ್​ ಗಬೋಲ್​, ಪಾಕ್​ ಸಂಸತ್ತಿನಲ್ಲಿ ನಮ್ಮ ಲಿಯಾರಿನಲ್ಲಿ ಅದ್ಭುತವಾದ ಕ್ರೀಡಾಂಗಣವಿದೆ. ನಾವು ಕೂಡ ಫಿಫಾ ವಿಶ್ವಕಪ್​ನ್ನು ಆಯೋಜನೆ ಮಾಡಬಹುದು ಎಂದು ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಫುಟ್ಬಾಲ್​ ಸಂಬಂಧ ಬಹಳ ಪುರಾತನವಾಗಿದ್ದು, ನಮ್ಮಲ್ಲಿ ಸಹ ಉತ್ತಮ ಆಟಗಾರರಿದ್ದಾರೆ, ನಮ್ಮಲ್ಲಿ ಸಹ ಉತ್ತಮವಾದ ಮೈದಾನಗಳಿವೆ. ನಾವು ಫಿಫಾವನ್ನು ಆಯೋಜನೆ ಮಾಡಿದರೆ ಜಾಗತಿಕ ಮೌಲ್ಯ ವೃದ್ಧಿಯಾಗುತ್ತೆ ಎಂದು ಹೇಳಿದ್ದಾರೆ.

ಫಿಫಾದಲ್ಲಿ ಪಾಕಿಸ್ತಾನದ ಫುಟ್ಬಾಲ್​ಗಳು!

ಫಿಫಾ ವಿಶ್ವಕಪ್​ 2026 ರಲ್ಲಿ ಬಳಕೆಯಾಗುತ್ತಿರುವ ಅಧಿಕೃತ ಚೆಂಡನ್ನು ಟ್ರಿಯೋಂಡಾ ಎಂದು ಕರೆಯಲಾಗುತ್ತಿದೆ. ಟ್ರಿಯೋಂಡಾ ಎಂದರೆ ಈ ಭಾರಿ ಫಿಫಾ ವಿಶ್ವಕಪ್​ನ್ನು ಆಯೋಜಿಸುತ್ತಿರುವ ದೇಶ( ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ)ಗಳ ಸಂಗಮ ಎಂಬರ್ಥದಲ್ಲಿ ವಿನ್ಯಾಸ ಮಾಡಲಾಗಿದೆ.
ಈ ಟ್ರಿಯೋಂಡಾ ಚೆಂಡನ್ನು ಪಾಕಿಸ್ತಾನದ ಸಿಲಾಕೋಟ್​ನಲ್ಲಿ ತಯಾರು ಮಾಡಲಾಗುತ್ತಿದೆ ಮತ್ತು ಪಾಕಿಸ್ತಾನದಲ್ಲಿ ತಯಾರಾಗುವ ಚೆಂಡಗಳನ್ನು 1982 ರಿಂದ ನಡೆಯುವ ಎಲ್ಲಾ ಫಿಫಾ ವಿಶ್ವಕಪ್​ಗಳಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದಲ್ಲಿರುವ ಸಿಲಾಕೋಟ್​, ಜಾಗತಿಕ ಫುಟ್ಬಾಲ್​ ತಯಾರಿಕೆಯಲ್ಲಿ ಭಾರಿ ಖ್ಯಾತಿಯನ್ನು ಗಳಸಿದೆ. ಇಲ್ಲಿ ತಯಾರಾಗುವ ಹೆಚ್ಚಿನ ಚೆಂಡುಗಳನ್ನು ವಿದೇಶಗಳಲ್ಲಿ ನಡೆಯುವ ಫುಟ್ಬಾಲ್​ ಟೂರ್ನಿಗಳಲ್ಲಿ ಬಳಸಲಾಗುತ್ತದೆ.
ಸ್ವಾತಂತ್ರಪೂರ್ವ ಕಾಲದಿಂದ ಸಿಲಾಕೋಟ್​ನಲ್ಲಿ ಫುಟ್ಬಾಲ್​ ತಯಾರಿಕೆ ನಡೆಯುತ್ತಿದ್ದು, ಇಲ್ಲಿ ಹೆಚ್ಚಾಗಿ ಚೆಂಡುಗಳನ್ನು ಕೈಯಿಂದ ತಯಾರಿಸುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಪಡೆದಿದೆ ಎಂದು ಹೇಳಲಾಗುತ್ತದೆ. ಹೀಗೆ ಫಿಫಾ ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸದಿದ್ದರೂ ಸಹ ಅಲ್ಲಿ ತಯಾರಾದ ಚೆಂಡು ಮೈದಾನಲ್ಲಿ ಮೋಡಿ ಮಾಡುತ್ತಿದೆ ಎಂದರೆ ತಪ್ಪಾಗದು, (ಏಜನ್ಸೀಸ್​).