- ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೋಲು ನೋಡದ ಅರ್ಜೆಂಟೀನಾ ತಂಡ
- ಮೆಸ್ಸಿ ತಂಡದ ಗೆಲುವಿನ ಹಿಂದಿದೆ 500 ಕೆಜಿ ಮಾಂಸದ ಕಥೆ
FIFA World Cup: ಪ್ರಸಕ್ತ ಆತಿಥೇಯ ಅಮೆರಿಕದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಸೋಲು ನೋಡದೆ, ಸರಣಿ ಗೆಲುವಿನ ಓಟದಲ್ಲಿರುವ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ, ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ, ತಂಡವು 500 ಕೆಜಿ ಮಾಂಸವನ್ನು ತರಿಸಿಕೊಂಡ ವಿಚಾರ ಸದ್ಯ ಫುಟ್ಬಾಲ್ ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ.
ಅತ್ತ ರೋಚಕ ಪಂದ್ಯಗಳಲ್ಲಿ ಮೆಸ್ಸಿ ಹೊಡೆಯುತ್ತಿರುವ ಅದ್ಭುತ, ದಾಖಲೆಯ ಗೋಲುಗಳು ಅರ್ಜೆಂಟೀನಾ ತಂಡ ಸೆಮಿಫೈನಲ್‌ಗೆ ಲಗ್ಗೆಯಿಡಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ. ಆದರೆ, ಈ ಯಶಸ್ಸಿನ ಹಿಂದೆ ಮೈದಾನದ ಹೊರತಾಗಿ ಒಂದು ರೋಚಕ ವಿಷಯ ಅಡಗಿರುವುದು 500 ಕೆಜಿ ಮಾಂಸದಲ್ಲಿ ಎಂಬ ವಿಷಯ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
ಅಮೆರಿಕದಲ್ಲಿ ನಡೆಯುತ್ತಿರುವ ಈ ಬಿಗ್ ಟೂರ್ನಿಯಲ್ಲಿ ತಮ್ಮ ಆಟಗಾರರಿಗೆ ತಾಯ್ನಾಡಿನ ಫೀಲ್ ಕೊಡಲು ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಯು ಬರೋಬ್ಬರಿ 500 ಕೆಜಿ ಮಾಂಸವನ್ನು ಕನ್ಸಾಸ್ ಸಿಟಿಯಲ್ಲಿರುವ ತನ್ನ ಬೇಸ್ ಕ್ಯಾಂಪ್ಗೆ ಶಿಪ್ ಮಾಡಿಸಿಕೊಂಡಿದೆ ಎಂಬ ಕುತೂಹಲಕಾರಿ ಮಾಹಿತಿ ಈಗ ಹೊರಬಿದ್ದಿದೆ. ಇದಕ್ಕೆ ಮುಂಚಿತವಾಗಿಯೇ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ.
ಆಟಗಾರರ ಫಿಟ್‌ನೆಸ್ ಮತ್ತು ಡಯಟ್ ವಿಷಯಕ್ಕೆ ಬಂದರೆ ಅರ್ಜೆಂಟೀನಾ ತಂಡ ಮೊದಲ ಆದ್ಯತೆ ನೀಡುತ್ತದೆ. ಅಮೆರಿಕದ ಕಠಿಣ ಕಸ್ಟಮ್ಸ್ ಮತ್ತು ನೈರ್ಮಲ್ಯ ನಿಯಮಗಳನ್ನು ಮೀರಿ ಈ ಪೋಷಕಾಂಶಭರಿತ ಆಹಾರವನ್ನು ತರಲು ತಂಡದ ಮ್ಯಾನೇಜ್‌ಮೆಂಟ್ ತಿಂಗಳುಗಟ್ಟಲೆ ಮುಂಚಿತವಾಗಿಯೇ ಪ್ಲ್ಯಾನ್ ಮಾಡಿದ್ದಾಗಿ ವರದಿಯಾಗಿದೆ.
ಒತ್ತಡ ದೂರವಿಡಲು ಬಾರ್ಬಿಕ್ಯೂ ಪಾರ್ಟಿ
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋಗಳಲ್ಲಿ, ಅರ್ಜೆಂಟೀನಾ ಆಟಗಾರರು ಪಂದ್ಯಕ್ಕೂ ಮುನ್ನ ಹಾಗೂ ಪಂದ್ಯದ ಬಳಿಕ ತಮ್ಮ ಕ್ಯಾಂಪ್‌ನಲ್ಲಿ ಒಟ್ಟಿಗೆ ಕುಳಿತು ಬಾರ್ಬಿಕ್ಯೂ ಸವಿಯುತ್ತಾ ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ. ಈ ರೀತಿಯ ಔತಣಕೂಟ, ಪಾರ್ಟಿಗಳು ಆಟಗಾರರಲ್ಲಿ ಒತ್ತಡ ಇಳಿಸುತ್ತೆ ಮತ್ತು ತಂಡದಲ್ಲಿ ಸ್ನೇಹಪರ ವಾತಾವರಣ ಮೂಡಿಸುತ್ತೆ ಎಂಬುದು ಮ್ಯಾನೇಜ್‌ಮೆಂಟ್ ನಂಬಿಕೆ,(ಏಜೆನ್ಸೀಸ್).