ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಘೋರ ಅವಮಾನ!
- ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಘೋರ ಅವಮಾನ!
- ಇಂಗ್ಲೆಂಡ್ ಫುಟ್‌ಬಾಲ್ ತಂಡದ ಶೂ, ನೆಟ್ ಸೇರಿದಂತೆ ಕ್ರೀಡಾ ಸಾಮಗ್ರಿಗಳಿದ್ದ ಲಾರಿ ಕಳ್ಳತನ
- ಅಮೆರಿಕ ಆತಿಥ್ಯದ ವಿರುದ್ಧ ತಜ್ಞರ ಆಕ್ರೋಶ
ಅಮೆರಿಕ: ಜಗತ್ತಿನಲ್ಲಿ ಈಗ ಎಲ್ಲಡೆ ಫಿಫಾ ವಿಶ್ವಕಪ್ (FIFA WorldCup 2026) ನದ್ದೆ ಸದ್ದಾಗಿದೆ. ಜಗತ್ತಿನ ಅತ್ಯಂತ ಹಳೆಯ ಕ್ರೀಡೆಗಳಲ್ಲಿ ಒಂದಾದ ಫುಟ್ಬಾಲ್ನ ರಸದೌತಣವನ್ನು ಪ್ರೇಕ್ಷಕರು ಕಳೆದ ಕೆಲ ದಿನಗಳಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಫಿಫಾ ವಿಶ್ವಕಪ್ನ್ನು ಈ ಭಾರಿ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಆಯೋಜಿಸುತ್ತಿದೆ. ಆದರೆ ಈ ಭಾರಿಯ ಫಿಫಾ ಮೈದಾನದಲ್ಲಿ ಸಿಡಿಯುತ್ತಿರುವ ಗೋಲುಗಳಿಗಿಂತ ವಿವಾದಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದೆ.
ಇಂಗ್ಲೆಂಡ್ ತಂಡದ ಸಾಮಾಗ್ರಿಗಳ ಕಳ್ಳತನ!
ಇಂಗ್ಲೆಂಡ್ ತಂಡ ತನ್ನ ಪಂದ್ಯಕ್ಕೂ ಮುನ್ನ ಫ್ಲೋರಿಡಾದಲ್ಲಿ ಅಭ್ಯಾಸವನ್ನು ನಡೆಸುತ್ತಿತ್ತು. ಜೂನ್ 18 ಗುರುವಾರ ಕ್ರೊಯೇಷಿಯಾ ವಿರುದ್ಧದ ಪಂದ್ಯದ ನಿಮಿತ್ತ ಇಂಗ್ಲೆಂಡ್ ಫ್ಲೋರಿಡಾದಿಂದ ಕಾನ್ಸಾಸ್ ಸಿಟಿಗೆ ಬರಬೇಕಿತ್ತು.
ಕಾನ್ಸಾಸ್ ಸಿಟಿಗೆ ಇಂಗ್ಲೆಂಡ್ ತಂಡ ತಲುಪಿದಾಗ ಅವರ ಶೂಗಳು, ಫುಟ್ಬಾಲ್, ನೆಟ್ ಸೇರಿದಂತೆ ಆಟಕ್ಕೆ ಸಂಬಂಧಿಸಿದ ಹಲವು ವಸ್ತುಗಳು ಕಾಣೆಯಾಗಿವೆ. ನಂತರ ವಿಚಾರಣೆ ನಡೆಸಿದಾಗ ಇಂಗ್ಲೆಂಡ್ ತಂಡದ ಸಮಾಗ್ರಿಗಳಿದ್ದ ವಾಹನವೇ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಕೂಡಲೇ ಪ್ರಕರಣ ದಾಖಲಿಸಿಕೊಂಡ ಅಮೆರಿಕ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಕಳ್ಳತನವಾದ ಬಹುತೇಕ ಸಾಮಾಗ್ರಿಗಳು ದೊರೆತಿವೆ ಎಂದು ಮಾಹಿತಿ ನೀಡಿದ್ದಾರೆ.
ಅಮೆರಿಕದ ಮೇಲೆ ಅಸಮಾಧಾನ
ವಿಶ್ವದ ಶ್ರೇಷ್ಟ ಹಾಗೂ ಪ್ರಖ್ಯಾತ ಟೂರ್ನಿಯೊಂದನ್ನು ಆಯೋಜಿಸುತ್ತಿರುವ ಅಮೆರಿಕದ ಮೇಲೆ ಈಗ ಪ್ರಪಂಚದಾದ್ಯಂತ ಅಸಮಾಧಾನ ಕಂಡುಬರುತ್ತಿದೆ. ಟೂರ್ನಿಯಲ್ಲಿ ಭಾಗವಹಿಸಿರುವ ಆಟಗಾರರ ಸಾಮಾಗ್ರಿಗಳ ಕಳ್ಳತನ ನಡೆದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.
ಫಿಫಾ ಇತಿಹಾಸಲ್ಲಿ ಇದೇ ಮೊದಲ ಬಾರಿಗೆ ಮೂರು ದೇಶಗಳು ಆಯೋಜನೆಯ ಜವಾಬ್ದಾರಿಯನ್ನು ಹೊತ್ತಿವೆ, ಆದರೆ ಈ ಬಾರಿ ಫಿಫಾದಲ್ಲಿ ಕೇವಲ ಸಮಸ್ಯೆಗಳೇ ಹೆಚ್ಚಿನದಾಗಿ ಹೈಲೈಟ್ ಆಗುತ್ತಿವೆ. ಇದನ್ನು ಕೂಡಲೇ ಅಮೆರಿಕ, ಕೆನಡ ಮತ್ತು ಮೆಕ್ಸಿಕೊ ಪರಿಹಾರ ಮಾಡಬೇಕು. ಇಲ್ಲದಿದ್ದರೆ ಇದು ನಾಚಿಕೆಗೇಡಿನ ಫಿಫಾ ಆಗುವದರಲ್ಲಿ ಅನುಮಾನವಿಲ್ಲ ಎನ್ನುವುದು ಫುಟ್ಬಾಲ್ ಪ್ರೇಕ್ಷಕರ ಹಾಗೂ ತಜ್ಞರ ಅಭಿಪ್ರಾಯವಾಗಿದೆ, (ಏಜನ್ಸೀಸ್).