ಪ್ರತಿಷ್ಠಿತ ಗೋಥಿಯಾ ಕಪ್ಗೆ ಬೆಂಗಳೂರಿನ ನಿಶ್ಚಲ್, ಅದ್ವಿಕ್ ಆಯ್ಕೆ
ಬೆಂಗಳೂರು: ಸ್ವೀಡನ್ನ ಗೋಥೆನರ್ಬಗ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಗೋಥಿಯಾ ಕಪ್ (Gothia Cup) ಫುಟ್ಬಾಲ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಬೆಂಗಳೂರಿನ ನಿಶ್ಚಲ್ ಎನ್. ಕರ್ಣಮ್ ಮತ್ತು ಅದ್ವಿಕ್ ದಯಾನಂದ ಆಯ್ಕೆಯಾಗಿದ್ದಾರೆ.
ಯಲಹಂಕದ ಫ್ರಾನ್ಸಿಸ್ ಕ್ಸೇವಿಯರ್ ಫುಟ್ಬಾಲ್ ಅಕಾಡೆಮಿಯ ಇವರಿಗೆ ಕ್ರಿಸ್ಟೋರ್ ಸತೀಶ್ ಮುಖ್ಯ ಕೋಚ್ ಆಗಿದ್ದಾರೆ. ನಿಶ್ಚಲ್ 14-16 ವಯೋಮಿತಿ ಮತ್ತು ಅದ್ವಿಕ್ 13 ವಯೋಮಿತಿ ವಿಭಾಗದಲ್ಲಿ ಆಡಲಿದ್ದಾರೆ. ವಿಶ್ವದೆಲ್ಲೆಡೆಯ 2 ಸಾವಿರಕ್ಕೂ ಅಧಿಕ ಕ್ಲಬ್ ತಂಡಗಳು ಆಡುವ ಗೋಥಿಯಾ ಕಪ್, ವಿಶ್ವದ ಅತಿದೊಡ್ಡ ಯೂತ್ ಫುಟ್ಬಾಲ್ ಟೂರ್ನಿ ಎನಿಸಿದೆ.