FIFA WorldCup: ತವರಿನಿಂದ ಹೊರಗೆ ಆಡಿದ ಮೊದಲ ಆತಿಥೇಯ ದೇಶ ಕೆನಡಾ!
ಲಾಸ್ ಏಂಜಲೀಸ್: ಕೆನಡಾ ತಂಡ ಹಾಲಿ ಫಿಫಾ ವಿಶ್ವಕಪ್ನ (FIFA WorldCup) ಮೂರೂ ಲೀಗ್ ಪಂದ್ಯಗಳನ್ನು ತವರಿನಲ್ಲಿ ಆಡಿದ್ದರೆ, ತನ್ನ ಮೊದಲ ನಾಕೌಟ್ ಪಂದ್ಯವನ್ನು ತವರಿನಿಂದ ಹೊರಗೆ ಅಂದರೆ ಸಹ-ಆತಿಥೇಯ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಆಡಿತು. ಈ ಮೂಲಕ ಆತಿಥೇಯ ತಂಡವೊಂದು ತನ್ನ ತವರಿನಿಂದ ಹೊರಗೆ ಪಂದ್ಯ ಆಡಿದ ಮೊದಲ ದೃಷ್ಟಾಂತಕ್ಕೆ ಕೆನಡಾ ಸಾಕ್ಷಿಯಾಯಿತು.
ಕೆನಡಾ ಲೀಗ್ ಹಂತದಲ್ಲಿ ತನ್ನ ಕೊನೆಯ ಪಂದ್ಯವನ್ನು ಸೋತು ಗುಂಪಿನಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರಿಂದಾಗಿ ತವರಿನಿಂದ ಹೊರಗೆ 32ರ ಘಟ್ಟದ ಪಂದ್ಯ ಆಡುವ ಇಕ್ಕಟ್ಟು ಎದುರಿಸಿತು. ಕೆನಡಾ ಇನ್ನು ತನ್ನ 16ರ ಘಟ್ಟದ ಪಂದ್ಯವನ್ನೂ ಅಮೆರಿಕದಲ್ಲೇ (ಹ್ಯೂಸ್ಟನ್) ಆಡಲಿದೆ.
ಇನ್ನೆರಡು ಆತಿಥೇಯ ದೇಶಗಳಾದ ಅಮೆರಿಕ ಮತ್ತು ಮೆಕ್ಸಿಕೋ 32ರ ಘಟ್ಟದ ಪಂದ್ಯಗಳನ್ನೂ ತವರಿನಲ್ಲೇ ಆಡಲಿವೆ. ಈ ಮುನ್ನ 2002ರಲ್ಲಿ ಜಪಾನ್&ದಣ ಕೊರಿಯಾ ಜಂಟಿ ಆತಿಥ್ಯ ವಹಿಸಿದಾಗ ತವರಿನಿಂದ ಹೊರಗೆ ಪಂದ್ಯಗಳನ್ನು ಆಡಿರಲಿಲ್ಲ.