GOAT India Tour 
ಫುಟ್ಬಾಲ್

GOAT India Tour: ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸದಿಂದ ಗಳಿಸಿದ್ದೆಷ್ಟು? ಮಾಹಿತಿ ಬಹಿರಂಗ..

ನವದೆಹಲಿ: ಲಿಯೋನೆಲ್ ಮೆಸ್ಸಿ GOAT ಇಂಡಿಯಾ ಟೂರ್ 2025 ಅವರ ಭಾರತದ ಪ್ರಚಾರ ಮತ್ತು ಅಭಿಮಾನಿ ಸಂವಾದ ಕಾರ್ಯಕ್ರಮದ ಭಾಗವಾಗಿ ಡಿಸೆಂಬರ್ 13ರಿಂದ 15ರವರೆಗೆ ನಾಲ್ಕು ನಗರಗಳಲ್ಲಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು. ಅದಾಗ್ಯೂ, ಮೆಸ್ಸಿ ಭಾರತ ಪ್ರವಾಸ ಹಿನ್ನೆಲೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಕೂತುಹಲ ಮೂಡಿಸಿತ್ತು. ಇದೀಗ ಈ ಬಗ್ಗೆ ರೀವಿಲ್​ ಆಗಿದೆ.
ಹೌದು, ಲಿಯೋನೆಲ್ ಮೆಸ್ಸಿ ಅವರ GOAT India Tour 2025ರಿಂದ ಒಟ್ಟು 100 ಕೋಟಿ ಪಡೆದಿದ್ದು, ಅದರಲ್ಲಿ 11 ಕೋಟಿ ಭಾರತ ಸರ್ಕಾರಕ್ಕೆ ತೆರಿಗೆಯಾಗಿ ಪಾವತಿಸಲಾಗಿದ್ದು, ನಿವ್ವಳ 89 ಕೋಟಿ ಗಳಿಕೆಯಾಗಿದೆ ಎಂದು ಭಾನುವಾರ ವರದಿ ಆಗಿದೆ.
ಈ ಪ್ರವಾಸದ ಮುಖ್ಯ ಆಯೋಜಕ ಸತದ್ರು ದುತ್ತಾ (ಕೋಲ್ಕತ್ತಾ ಮೂಲದ ಇವೆಂಟ್ ಮ್ಯಾನೇಜರ್) ಅವರು ಡಿಸೆಂಬರ್ 13, 2025ರಂದು ಬಂಧನಕ್ಕೊಳಗಾಗಿದ್ದು, ಕೋಲ್ಕತ್ತಾ ಲೆಗ್‌ನಲ್ಲಿ ನಡೆದ ಅವ್ಯವಸ್ಥೆ ಮತ್ತು ಮೋಸದ ಆರೋಪಗಳ ಕುರಿತು ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ (SIT) ತನಿಖೆ ನಡೆಸುತ್ತಿದೆ.
ದುತ್ತಾ ಅವರ ಬ್ಯಾಂಕ್ ಅಕೌಂಟ್‌ಗಳಲ್ಲಿ 20 ಕೋಟಿ ಫ್ರೀಜ್ ಮಾಡಲಾಗಿದೆ, ಮತ್ತು ಪ್ರವಾಸದ ಫಂಡಿಂಗ್ ಟಿಕೆಟ್ ಸೇಲ್ಸ್ (30%), ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ (30%) ಮತ್ತು ಇತರ ಮೂಲಗಳಿಂದ ಬಂದಿದೆ ಎಂದು ಹೇಳಲಾಗಿದೆ.
ಈ ಪ್ರವಾಸ ಕೋಲ್ಕತ್ತಾದಲ್ಲಿ ದುರಂತದೊಂದಿಗೆ ಕೊನೆಗೊಂಡಿದ್ದು, ಟಿಕೆಟ್ ಮಾರಾಟ ಮತ್ತು ಸ್ಪಾನ್ಸರ್‌ಷಿಪ್ ಕುರಿತು ತನಿಖೆ ಮುಂದುವರಿದಿದೆ.
ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ನವದೆಹಲಿ. ಇದು ಮೆಸ್ಸಿ ಅವರ 2011ರ ನಂತರದ ಮೊದಲ ಭಾರತ ಪ್ರವಾಸವಾಗಿದ್ದು, ಅವರೊಂದಿಗೆ ಇಂಟರ್ ಮಿಯಾಮಿ ತಂಡದ ಸಹೋದ್ಯೋಗಿಗಳಾದ ಲುಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಕೂಡ ಭಾಗವಹಿಸಿದ್ದರು,(ಏಜೆನ್ಸೀಸ್).