FIFA WorldCup: ಜಪಾನ್ ಎದುರು ಆಘಾತದಿಂದ ಪಾರಾದ ಬ್ರೆಜಿಲ್; ಸತತ 11ನೇ ಬಾರಿ 16ರ ಘಟ್ಟ ಪ್ರವೇಶ!
ಹ್ಯೂಸ್ಟನ್: ಗೇಬ್ರಿಯಲ್ ಮಾರ್ಟಿನೆಲ್ಲಿ (90+5ನೇ ನಿಮಿಷ) ಇಂಜುರಿ ಸಮಯದಲ್ಲಿ ಸಿಡಿಸಿದ ಗೋಲಿನ ನೆರವಿನಿಂದ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡ ಫಿಫಾ ವಿಶ್ವಕಪ್ (FIFA WorldCup) 32ರ ಘಟ್ಟದಲ್ಲಿ ಏಷ್ಯಾದ ನಂ. 1 ಜಪಾನ್ ಎದುರು 2-1 ಅಂತರದಿಂದ ಗೆದ್ದು ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ದ್ವೀತಿಯಾರ್ಧದಲ್ಲಿ ತಿರುಗೇಟು ನೀಡಿದ ಸಾಂಬಾ ನಾಡಿನ ತಂಡ ಆಘಾತಕಾರಿ ಲಿತಾಂಶದಿಂದ ಪಾರಾಯಿತು. ಬ್ರೆಜಿಲ್ಗೆ 16ರ ಘಟ್ಟದಲ್ಲಿ ಐವರಿ ಕೋಸ್ಟ್ ಅಥವಾ ನಾರ್ವೆ ಎದುರಾಗಲಿದೆ.
ಭಾರತೀಯ ಕಾಲಮಾನ ಪ್ರಕಾರ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕೈಶು ಸಾನೋ 29ನೇ ನಿಮಿಷದಲ್ಲಿ ಸಿಡಿಸಿದ ಆಕರ್ಷಕ ಗೋಲಿನಿಂದ ಜಪಾನ್ 1&0 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು. ಮಿಡ್ಫೀಲ್ಡ್ನಲ್ಲಿ ಪಾಸ್ ವೇಳೆ ಬ್ರೆಜಿಲ್ ಆಟಗಾರರ ಮಾಡಿದ ತಪ್ಪಿನಿಂದ ಲಾಭ ಪಡೆದು ಕೈಶು ಗೋಲು ಬಾರಿಸಿದರು. ಬಳಿಕ ದ್ವೀತಿಯಾರ್ಧದಲ್ಲಿ ಕ್ಯಾಸೆಮಿರೊ (56ನೇ ನಿಮಿಷ) ಹೆಡರ್ ಮೂಲಕ ಬ್ರೆಜಿಲ್ಗೆ ಸಮಬಲ ತಂದುಕೊಟ್ಟರು. ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಿಸುವ ಹಂತದಲ್ಲಿ ಮಾರ್ಟಿನೆಲ್ಲಿ ಗೆಲುವಿನ ಗೋಲು ಸಿಡಿಸಿದರು.
25 ವರ್ಷದ ಮಾರ್ಟಿನೆಲ್ಲಿ 65ನೇ ನಿಮಿಷದಲ್ಲಿ ಮ್ಯಾಥ್ಯೂಸ್ ಕುನ್ಹಾಗೆ ಬದಲಿಗರಾಗಿ ಮೈದಾನ ಪ್ರವೇಶಿಸಿದ್ದರು. ಬ್ರೆಜಿಲ್ ಸ್ಟಾರ್ ಆಟಗಾರ ನೇಮರ್ ಜೂನಿಯರ್ ಮತ್ತೊಮ್ಮೆ ಇಡೀ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಲೀಗ್ ಹಂತದಲ್ಲಿ 4 ಗೋಲು ಸಿಡಿಸಿದ್ದ ವಿನಿಶಿಯಸ್ ಜೂನಿಯರ್ ಈ ಬಾರಿ 58ನೇ ನಿಮಿಷದಲ್ಲಿ ಗೋಲು ಗಳಿಸುವ ಅತ್ಯುತ್ತಮ ಅವಕಾಶವೊಂದನ್ನು ಕೈಚೆಲ್ಲಿದರು.
*11: ಬ್ರೆಜಿಲ್ ವಿಶ್ವಕಪ್ನಲ್ಲಿ ಸತತ 11ನೇ ಬಾರಿ 16ರ ಟ್ಟಕ್ಕೇರಿದೆ.
*88: ಬ್ರೆಜಿಲ್ ವಿಶ್ವಕಪ್ ನಾಕೌಟ್ನಲ್ಲಿ 88 ವರ್ಷಗಳ ಬಳಿಕ ಆರಂಭಿಕ ಹಿನ್ನಡೆಯ ಬಳಿಕ ಗೆಲುವು ಸಾಧಿಸಿತು. 1938ರಲ್ಲಿ ಕೊನೆಯದಾಗಿ ಜೆಕೋಸ್ಲೋವಾಕಿಯಾ ವಿರುದ್ಧ ಈ ಸಾಧನೆ ಮಾಡಿತ್ತು.
0: ಜಪಾನ್ ವಿಶ್ವಕಪ್ ನಾಕೌಟ್ನಲ್ಲಿ ಒಂದೂ ಪಂದ್ಯ ಗೆಲ್ಲದ ನಿರಾಸೆ ಮುಂದುವರಿದಿದೆ. 2018, 2022ರ 16ರ ಟ್ಟದಲ್ಲೂ ಜಪಾನ್ ಆರಂಭಿಕ ಮುನ್ನಡೆಯ ಬಳಿಕ ಸೋತಿತ್ತು.
*ಗೇಬ್ರಿಯಲ್ ಮಾರ್ಟಿನೆಲ್ಲಿ (90+5)
*2: ಕ್ಯಾಸೆಮಿರೊ (34 ವರ್ಷ, 126 ದಿನ) ವಿಶ್ವಕಪ್ನಲ್ಲಿ ಬ್ರೆಜಿಲ್ನ 2ನೇ ಅತಿಹಿರಿಯ ಗೋಲು ಸ್ಕೋರರ್ ಎನಿಸಿದರು. ಬೆಬೆಟೊ (34 ವರ್ಷ, 137 ದಿನ) 1998ರಲ್ಲಿ ಅತಿಹಿರಿಯರೆನಿಸಿದ್ದರು.