FIFA WorldCup 2026: ಟೂರ್ನಿ ಸ್ವರೂಪ, 48 ತಂಡ, 12 ಗುಂಪುಗಳ ವಿವರ ಹೀಗಿದೆ...
ಮೆಕ್ಸಿಕೋ ಸಿಟಿ: ಜಗತ್ತನ್ನೇ ಒಂದು ಚೆಂಡಿನ ಮೇಲೆ ಕಣ್ಣಿಡುವಂತೆ ಮಾಡುವ ಫುಟ್ಬಾಲ್ ಮಹಾಸಮರ ಮತ್ತೆ ಬಂದಿದೆ. ಈ ಬಾರಿ ಉತ್ತರ ಅಮೆರಿಕದ ರಾಷ್ಟ್ರಗಳಾದ ಅಮೆರಿಕ-ಮೆಕ್ಸಿಕೋ-ಕೆನಡಾ 23ನೇ ಆವೃತ್ತಿಯ ಫಿಫಾ ವಿಶ್ವಕಪ್ (FIFA WorldCup 2026) ಟೂರ್ನಿಗೆ ಆತಿಥ್ಯ ವಹಿಸಲಿದೆ. ಸಹ-ಆತಿಥೇಯ ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಗುರುವಾರ ರಾತ್ರಿ ಮೆಕ್ಸಿಕೋ ಸಿಟಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದೊಂದಿಗೆ ವಿಶ್ವದ ಅತ್ಯಂತ ರಂಜನೀಯ, ಕೌಶಲಭರಿತ, ತಂತ್ರಗಾರಿಕೆ, ದೈಹಿಕ ಕ್ಷಮತೆಯ ಮತ್ತು ಗ್ಲಾಮರಸ್ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. ಫುಟ್ಬಾಲ್ ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ದುಬಾರಿ ಟೂರ್ನಿಯೂ ಇದಾಗಿದೆ. ಇನ್ನು 39 ದಿನಗಳ ಕಾಲ ಜಗತ್ತು ಕಾಲ್ಚೆಂಡು ತಾರೆಯರ ಕಾಲ್ಚಳಕಕ್ಕೆ ಸಾಯಾಗಲಿದೆ.
48 ತಂಡಗಳ ಮೊದಲ ವಿಶ್ವಕಪ್
ಇದು 48 ತಂಡಗಳು ಸ್ಪರ್ಧಿಸುವ ಮೊದಲ ಫಿಫಾ ವಿಶ್ವಕಪ್ ಆಗಿದೆ. 1998ರಿಂದ 2022ರವರೆಗೆ 32 ತಂಡಗಳು ಭಾಗವಹಿಸುತ್ತಿದ್ದವು. ಅದಕ್ಕೆ ಮುನ್ನ 1982ರಿಂದ 1994ರವರೆಗೆ 24 ತಂಡಗಳಿದ್ದರೆ, 1954ರಿಂದ 1978ರವರೆಗೆ 16 ತಂಡಗಳು ಆಡಿದ್ದವು. 1950ರಲ್ಲಿ 13, 1938ರಲ್ಲಿ 15, 1934ರಲ್ಲಿ 16 ಮತ್ತು 1930ರಲ್ಲಿ 13 ತಂಡಗಳು ಸ್ಪರ್ಧಿಸಿದ್ದವು. 2030ರಲ್ಲಿ ತಂಡಗಳ ಸಂಖ್ಯೆ 64ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ.
ಟೂರ್ನಿಯಲ್ಲಿ ಆಡುವ 48 ತಂಡಗಳನ್ನು ತಲಾ 4ರಂತೆ 12 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಮತ್ತು 3ನೇ ಸ್ಥಾನ ಪಡೆದ 8 ಅತ್ಯುತ್ತಮ ತಂಡಗಳು ನಾಕೌಟ್ ಹಂತಕ್ಕೇರಲಿವೆ. ಈ ಬಾರಿ 32ರ ಘಟ್ಟದಿಂದಲೇ ನಾಕೌಟ್ ಹಂತ ಶುರುವಾಗಲಿದ್ದು, ನಂತರ ಪ್ರಿ ಕ್ವಾರ್ಟರ್ಫೈನಲ್, ಕ್ವಾರ್ಟರ್ಫೈನಲ್, ಸೆಮಿಫೈನಲ್, ಫೈನಲ್ ನಡೆಯಲಿವೆ. ಲೀಗ್ ಹಂತದಲ್ಲಿ ಡ್ರಾಗೊಂಡ ಪಂದ್ಯದಲ್ಲಿ ತಂಡಗಳು ಅಂಕ ಹಂಚಿಕೊಳ್ಳಲಿವೆ. ನಾಕೌಟ್ನಲ್ಲಿ 30 ನಿಮಿಷಗಳ ಹೆಚ್ಚುವರಿ ಆಟ ಮತ್ತು ಪೆನಾಲ್ಟಿ ಶೂಟೌಟ್ ನಡೆಯಲಿದೆ.
ಚಾಂಪಿಯನ್ಸ್:
ಬ್ರೆಜಿಲ್: 5 (1958, 1962, 1970, 1994, 2002)
ಜರ್ಮನಿ: 4 (1954, 1974, 1990, 2014)
ಇಟಲಿ: 4 (1934, 1938, 1982, 2006)
ಅರ್ಜೆಂಟೀನಾ: 3 (1978, 1986, 2022)
್ರಾನ್ಸ್: 2 (1998, 2018)
ಉರುಗ್ವೆ: 2 (1930, 1950)
ಇಂಗ್ಲೆಂಡ್: 1 (1966)
ಸ್ಪೇನ್: 1 (2010)
ಎ: ಸಹ-ಆತಿಥೇಯ ಮೆಕ್ಸಿಕೋ ಸುಲಭ ಗುಂಪಿನಲ್ಲಿದ್ದು, ಅಗ್ರಸ್ಥಾನಕ್ಕೇರುವ ಫೇವರಿಟ್ ತಂಡವಾಗಿದೆ. ದಕ್ಷಿಣ ಕೊರಿಯಾ, ಜೆಕ್ ಗಣರಾಜ್ಯ ತಂಡಗಳು ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸಬಹುದು. ದಕ್ಷಿಣ ಆಫ್ರಿಕಾ ತಂಡವೂ ಮೊದಲ ಬಾರಿ ನಾಕೌಟ್ ಹಂತಕ್ಕೇರಲು ಪ್ರಯತ್ನಿಸಬಹುದು.
ಸ್ಟಾರ್ಸ್: ರೌಲ್ ಜಿಮೆನೆಜ್, ಎಡ್ಸನ್ ಅಲ್ವಾರೆಜ್, ಗಿಲ್ಬರ್ಟೊ ಮೊರಾ.
ಬೆಸ್ಟ್: 2 ಬಾರಿ ಕ್ವಾರ್ಟರ್ಫೈನಲ್
ಸ್ಟಾರ್ಸ್: ರಾನ್ವೆನ್ ವಿಲಿಯಮ್ಸ್, ಟೆಬೊಹೊ ಮೊಕೊಯೆನಾ, ಲೈಲ್ ಫೋಸ್ಟರ್.
ಬೆಸ್ಟ್: 3 ಬಾರಿ ಗುಂಪು ಹಂತ
ಸ್ಟಾರ್ಸ್: ಸನ್ ಹೆಯುಂಗ್-ಮಿನ್, ಕಿಮ್ ಮಿನ್-ಜೇ, ಲೀ ಕಾಂಗ್-ಇನ್.
ಕೋಚ್: ಹಾಂಗ್ ಮ್ಯುಂಗ್-ಬೋ
ಬೆಸ್ಟ್: 2002ರಲ್ಲಿ 4ನೇ ಸ್ಥಾನ
ನಿಕ್ನೇಮ್: ಟೇಗೆಕ್ ವಾರಿಯರ್ಸ್
ಸ್ಟಾರ್ಸ್: ಪ್ಯಾಟ್ರಿಕ್ ಶಿಕ್, ಟೊಮಾಸ್ ಸೌಕೆಕ್, ಪಾವೆಲ್ ಸಲ್ಕ್.
ಕೋಚ್: ಮಿರೋಸ್ಲಾವ್ ಕೌಬೆಕ್
ಬೆಸ್ಟ್: 2 ಬಾರಿ ರನ್ನರ್ಅಪ್
ಬಿ: ಸ್ವಿರ್ಜಲೆಂಡ್ ಗುಂಪಿನ ಬಲಿಷ್ಠ ತಂಡ. ಆದರೆ ಸಹ-ಆತಿಥೇಯ ಕೆನಡಾ ಮತ್ತು ಬೋಸ್ನಿಯಾವನ್ನೂ ಲುವಾಗಿ ಪರಿಗಣಿಸುವಂತಿಲ್ಲ. ಇಟಲಿ ಹಿಂದಿಕ್ಕಿ ಬೋಸ್ನಿಯಾ ಅರ್ಹತೆ ಗಳಿಸಿದೆ ಎಂಬುದನ್ನು ಮರೆಯಬಾರದು. ಕಳೆದ ಆವೃತ್ತಿಯ ಆತಿಥೇಯ ಕತಾರ್ ಖಾತೆ ತೆರೆದರೆ ಅದೇ ಸಾಧನೆಯಾಗಲಿದೆ.
ಸ್ಟಾರ್ಸ್: ಅಲ್ಪೋನ್ಸೊ ಡೇವಿಸ್, ಜೊನಾಥನ್ ಡೇವಿಡ್, ಸ್ಟೀನ್ ಯುಸ್ಟಾಕ್ವಿಯೊ.
ಬೆಸ್ಟ್: 2 ಬಾರಿ ಗುಂಪು ಹಂತ
ಸ್ಟಾರ್ಸ್: ಎಡಿನ್ ಡಿಜೆಕೊ, ಎರ್ಮೆಡಿನ್ ಡೆಮಿರೊವಿಕ್, ಕೆರಿಮ್ ಅಲಾಜ್ಬೆಗೊವಿಕ್.
ಕೋಚ್: ಸೆರ್ಗೆಜ್ ಬಾರ್ಬರೆಜ್
ಬೆಸ್ಟ್: 2014ರಲ್ಲಿ ಗುಂಪು ಹಂತ
ಸ್ಟಾರ್ಸ್: ಅಕ್ರಮ್ ಅಫಿಫ್, ಅಲ್ ಸಾಡ್, ಹೋಮಮ್ ಅಲ್-ಅಮಿನ್.
ಕೋಚ್: ಜೂಲೆನ್ ಲೋಪೆಟೆಗುಯಿ
ಬೆಸ್ಟ್: 2022ರಲ್ಲಿ ಗುಂಪು ಹಂತ
ಸ್ಟಾರ್ಸ್: ಗ್ರಾನಿಟ್ ರಕಾ, ಬ್ರಿಲ್ ಎಂಬೊಲೊ, ಮ್ಯಾನುಯೆಲ್ ಅಕಾಂಜಿ.
ಬೆಸ್ಟ್: 3 ಬಾರಿ ಕ್ವಾರ್ಟರ್ಫೈನಲ್
ನಿಕ್ನೇಮ್: ಶ್ವೀಜರ್ ನಾಟಿ
ಸಿ: ಟೂರ್ನಿ ಇತಿಹಾಸದ ಯಶಸ್ವಿ ತಂಡವಾಗಿದ್ದರೂ, ಬ್ರೆಜಿಲ್ ಕೊನೇ ಪ್ರಶಸ್ತಿ ಗೆದ್ದು 24 ವರ್ಷಗಳೇ ಕಳೆದಿವೆ. ಅಗ್ರ 10 ರ್ಯಾಂಕ್ ಒಳಗಿನ 2 ತಂಡಗಳು ಒಂದೇ ಗುಂಪಿನಲ್ಲಿದ್ದು, ಬ್ರೆಜಿಲ್-ಮೊರಾಕ್ಕೊ ಅಗ್ರಸ್ಥಾನಕ್ಕೆ ಫೈಟ್ ನಡೆಸಲಿವೆ. ಸ್ಕಾಟ್ಲೆಂಡ್, ಹೈಟಿ ನಾಕೌಟ್ ಹಂತಕ್ಕೇರುವುದು ಸುಲಭವಿಲ್ಲ.
ಸ್ಟಾರ್ಸ್: ನೇಮರ್, ವಿನಿಸಿಯಸ್ ಜೂನಿಯರ್, ರಫಿನ್ಹಾ.
ಬೆಸ್ಟ್: 5 ಬಾರಿ ಚಾಂಪಿಯನ್
ಸ್ಟಾರ್ಸ್: ಅಚ್ರಾಫ್ ಹಕಿಮಿ, ಬ್ರಾಹಿಂ ಡಿಯಾಜ್, ಅಯ್ಯುಬ್ ಬೌಡ್ಡಿ.
ಬೆಸ್ಟ್: 2022ರಲ್ಲಿ 4ನೇ ಸ್ಥಾನ
ನಿಕ್ನೇಮ್: ಅಟ್ಲಾಸ್ ಲಯನ್ಸ್
ಸ್ಟಾರ್ಸ್: ಜಾನಿ ಪ್ಲಾಸೈಡ್, ಜೀನ್&ರಿಕ್ನರ್ ಬೆಲ್ಲೆಗಾರ್ಡ್, ವಿಲ್ಸನ್ ಇಸಿಡೋರ್.
ಕೋಚ್: ಸೆಬಾಸ್ಟಿಯನ್ ಮಿಗ್ನೆ
ಬೆಸ್ಟ್: 1974ರಲ್ಲಿ ಗುಂಪು ಹಂತ
ನಿಕ್ನೇಮ್: ಲೆಸ್ ಗ್ರೆನೇಡಿಯರ್ಸ್
ಸ್ಟಾರ್ಸ್: ಸ್ಕಾಟ್ ಮೆಕ್ಟೊಮಿನೆ, ಆಂಡಿ ರಾರ್ಬಟ್ಸನ್, ಜಾನ್ ಮೆಕ್ಗಿನ್.
ಬೆಸ್ಟ್: 8 ಬಾರಿ ಗುಂಪು ಹಂತ
ನಿಕ್ನೇಮ್: ಟಾರ್ಟನ್ ಆರ್ಮಿ
ಡಿ: ಸಹ-ಆತಿಥೇಯ ಅಮೆರಿಕ ಈ ಗುಂಪಿನ ಅಗ್ರ ಶ್ರೇಯಾಂಕಿತ ತಂಡವಾಗಿದ್ದು, ತವರಿನ ಲಾಭವೂ ಸಿಗಲಿದೆ. ಟರ್ಕಿ ಗುಂಪಿನ 2ನೇ ಸ್ಥಾನ ಪಡೆಯುವ ನೆಚ್ಚಿನ ತಂಡವೆನಿಸಿದೆ. ಈ ಹಿಂದೆ ನಾಕೌಟ್ ಹಂತಕ್ಕೇರಿದ ದಾಖಲೆ ಹೊಂದಿರುವ ಪರಾಗ್ವೆ, ಆಸ್ಟ್ರೆಲಿಯಾ ತಂಡಗಳನ್ನೂ ಕಡೆಗಣಿಸಲಾಗದು.
ಸ್ಟಾರ್ಸ್: ವೆಸ್ಟನ್ ಮೆಕೆನ್ನಿ, ಕ್ರಿಶ್ಚಿಯನ್ ಪುಲಿಸಿಕ್, ಫೋಲಾರಿನ್ ಬೊಲೊಗನ್.
ಕೋಚ್: ಮೌರಿಸಿಯೋ ಪೊಚೆಟ್ಟಿನೊ
ಬೆಸ್ಟ್: 1930ರಲ್ಲಿ ಸೆಮಿಫೈನಲ್
ನಿಕ್ನೇಮ್: ಸ್ಟಾರ್ಸ್ ಆಂಡ್ ಸ್ಟ್ರೆಪ್ಸ್
ಸ್ಟಾರ್ಸ್: ಜೂಲಿಯೊ ಎನ್ಸಿಸೊ, ಮಿಗುಯೆಲ್ ಅಲ್ಮಿರಾನ್, ರಾಕ್ ಒಮರ್.
ಬೆಸ್ಟ್: 2010ರಲ್ಲಿ ಕ್ವಾರ್ಟರ್ಫೈನಲ್
ಸ್ಟಾರ್ಸ್: ಮ್ಯಾಥ್ಯೂ ರಯಾನ್, ಹ್ಯಾರಿ ಸೌಟರ್, ಕ್ರಿಶ್ಚಿಯನ್ ವೊಲ್ಪಾಟೊ.
ಬೆಸ್ಟ್: 2 ಬಾರಿ ಪ್ರಿ ಕ್ವಾರ್ಟರ್ಫೈನಲ್
ಸ್ಟಾರ್ಸ್: ಅರ್ಡಾ ಗುಲರ್, ಕೆನಾನ್ ಯಿಲ್ಡಿಜ್, ಹಕನ್ ಕಾಲ್ಹನೋಗ್ಲು.
ಕೋಚ್: ವಿನ್ಸೆಂಜೊ ಮಾಂಟೆಲ್ಲಾ
ಬೆಸ್ಟ್: 2002ರಲ್ಲಿ 3ನೇ ಸ್ಥಾನ
ನಿಕ್ನೇಮ್: ಕ್ರೆಸೆಂಟ್ ಸ್ಟಾರ್ಸ್
ಇ: ಕಳೆದ 2 ಆವೃತ್ತಿಯಲ್ಲಿ ಕ್ವಾರ್ಟರ್ಫೈನಲ್ ದಾಟಲು ವಿಫಲವಾಗಿದ್ದ ಜರ್ಮನಿ ಈ ಬಾರಿ ಗುಂಪಿನ ಅಗ್ರಸ್ಥಾನದೊಂದಿಗೆ ಸುಲಭ ಹಾದಿಗೆ ಪ್ರಯತ್ನಿಸಬಹುದು. ಆಫ್ರಿಕಾದ ಈಕ್ವೆಡಾರ್, ಐವರಿ ಕೋಸ್ಟ್ 2ನೇ ಸ್ಥಾನಕ್ಕೆ ಪೈಪೋಟಿಯಲ್ಲಿವೆ. ಕುರಾಕಾವೊ ಚೊಚ್ಚಲ ವಿಶ್ವಕಪ್ ಆಡಿದ್ದಕ್ಕೆ ಸಂಭ್ರಮಿಸಬಹುದು.
ಸ್ಟಾರ್ಸ್: ಮ್ಯಾನುಯೆಲ್ ನ್ಯೂಯರ್, ಫ್ಲೋರಿಯನ್ ವಿರ್ಟ್ಜ್, ಜೋಶುವಾ ಕಿಮ್ಮಿಚ್.
ಕೋಚ್: ಜೂಲಿಯನ್ ನಾಗೆಲ್ಸ್ಮನ್
ಬೆಸ್ಟ್: 4 ಬಾರಿ ಚಾಂಪಿಯನ್
ನಿಕ್ನೇಮ್: ನ್ಯಾಷನಲ್ ಇಲೆವೆನ್
ಸ್ಟಾರ್ಸ್: ತಾಹಿತ್ ಚೊಂಗ್, ಜುನಿನ್ಹೊ ಬಕುನಾ, ಲಿಯಾಂಡ್ರೊ ಬಕುನಾ.
ಸ್ಟಾರ್ಸ್: ಅಮದ್ ಡಿಯಲ್ಲೊ, ಫ್ರಾಂಕ್ ಕೆಸ್ಸಿ, ಯಾನ್ ಡಿಯೊಮಾಂಡೆ.
ಬೆಸ್ಟ್: 3 ಬಾರಿ ಗುಂಪು ಹಂತ
ನಿಕ್ನೇಮ್: ಲೆಸ್ ಎಲಿೆಂಟ್ಸ್
ಸ್ಟಾರ್ಸ್: ಮೊಯ್ಸೆಸ್ ಕೈಸೆಡೊ, ವಿಲಿಯನ್ ಪಾಚೋ, ಪೆರ್ವಿಸ್ ಎಸ್ಟುಪಿನಾನ್.
ಕೋಚ್: ಸೆಬಾಸ್ಟಿಯನ್ ಬೆಕಾಸೆಸ್
ಬೆಸ್ಟ್: 2006ರಲ್ಲಿ ಪ್ರಿ ಕ್ವಾರ್ಟರ್ಫೈನಲ್
ಎಫ್: ಇದೊಂದು ಅತ್ಯಂತ ಸ್ಪರ್ಧಾತ್ಮಕವಾದ ಗುಂಪಾಗಿದ್ದರೂ, ನೆದರ್ಲೆಂಡ್ ಅಗ್ರಸ್ಥಾನ ಪಡೆಯಬಹುದಾದ ನೆಚ್ಚಿನ ತಂಡವಾಗಿದೆ. ಏಷ್ಯನ್ ಪವರ್ಹೌಸ್ ಜಪಾನ್, ಸ್ವೀಡನ್ ನಿಕಟ ಪೈಪೋಟಿ ನಡೆಸಬಹುದು. ಟುನೀಷಿಯಾ ಇತ್ತೀಚೆಗೆ ಉತ್ತಮ ಫಾರ್ಮ್ನಲ್ಲಿಲ್ಲ.
ಸ್ಟಾರ್ಸ್: ವರ್ಜಿಲ್ ವ್ಯಾನ್ ಡಿಜ್ಕ್, ಡಿನ್ಜೆಲ್ ಡಮ್ಫ್ರೈಸ್, ವೆುಂಫಿಸ್ ಡಿಪೇ.
ಬೆಸ್ಟ್: 3 ಬಾರಿ ರನ್ನರ್ಅಪ್
ಸ್ಟಾರ್ಸ್: ಕೌರು ಮಿಟೋಮಾ, ಟೇಕ್ಫುಸಾ ಕುಬೊ, ವಟಾರು ಎಂಡೊ.
ಬೆಸ್ಟ್: 4 ಬಾರಿ ಪ್ರಿ ಕ್ವಾರ್ಟರ್ಫೈನಲ್
ನಿಕ್ನೇಮ್: ಸಮುರಾಯ್ ಬ್ಲೂ
ಸ್ಟಾರ್ಸ್: ವಿಕ್ಟರ್ ಗೈಕೆರೆಸ್, ಅಲೆಕ್ಸಾಂಡರ್ ಇಸಾಕ್, ಆಂಟನಿ ಎಲಂಗಾ.
ಬೆಸ್ಟ್: 1958ರಲ್ಲಿ ರನ್ನರ್ಅಪ್
ಸ್ಟಾರ್ಸ್: ಎಲ್ಲೀಸ್ ಸ್ಕಿರಿ, ಹ್ಯಾನಿಬಲ್ ಮೆಜ್ಬ್ರಿ, ಅಲಿ ಅಬ್ದಿ.
ಬೆಸ್ಟ್: 6 ಬಾರಿ ಗುಂಪು ಹಂತ
ನಿಕ್ನೇಮ್: ಈಗಲ್ಸ್ ಆಫ್ ಕಾರ್ತೇಜ್
ಜಿ: ಬೆಲ್ಜಿಯಂ ಈಗ ಹಿಂದಿನಷ್ಟು ಬಲಿಷ್ಠವಲ್ಲದಿದ್ದರೂ, ಗುಂಪಿನಲ್ಲಿ ಅಗ್ರಸ್ಥಾನ ಗಳಿಸಬಹುದಾದ ಸಾಮರ್ಥ್ಯ ಹೊಂದಿದೆ. ಈಜಿಪ್ಟ್ ಜತೆಗೆ ಇರಾನ್ ಈ ಬಾರಿ ನಾಕೌಟ್ ಹಂತಕ್ಕೇರಲು ನಿಕಟ ಪೈಪೋಟಿ ನಡೆಸಬಹುದು. ನ್ಯೂಜಿಲೆಂಡ್ ಟೂರ್ನಿಯಲ್ಲಿರುವ ಅತ್ಯಂತ ಕಡಿಮೆ ರ್ಯಾಂಕ್ನ ತಂಡ.
ಸ್ಟಾರ್ಸ್: ಕೆವಿನ್ ಡಿ ಬ್ರೂಯ್ನ್, ರೊಮೆಲು ಲುಕಾಕು, ಥಿಬೌಟ್ ಕೋರ್ಟೊಯಿಸ್.
ಬೆಸ್ಟ್: 2018ರಲ್ಲಿ 3ನೇ ಸ್ಥಾನ
ನಿಕ್ನೇಮ್: ರೆಡ್ ಡೆವಿಲ್ಸ್
ಸ್ಟಾರ್ಸ್: ಮೊಹಮ್ಮದ್ ಸಲಾಹ್, ಒಮರ್ ಮಮೌರ್ಶ್, ಮಹಮೂದ್ ಹಸನ್.
ಬೆಸ್ಟ್: 3 ಬಾರಿ ಗುಂಪು ಹಂತ
ಸ್ಟಾರ್ಸ್: ಮೆಹದಿ ತರೆಮಿ, ಸಮನ್ ಘೋಡೋಸ್, ಸೈಯದ್ ಎಜಾತೊಲಾಹಿ.
ಬೆಸ್ಟ್: 6 ಬಾರಿ ಗುಂಪು ಹಂತ
ಸ್ಟಾರ್ಸ್: ಕ್ರಿಸ್ ವುಡ್, ಎಲಿ ಜಸ್ಟ್, ಮಾರ್ಕೊ ಸ್ಟಾಮೆನಿಕ್.
ಬೆಸ್ಟ್: 2 ಬಾರಿ ಗುಂಪು ಹಂತ
ಎಚ್: ಪ್ರಮುಖ ಆಟಗಾರರ ಫಿಟ್ನೆಸ್ ಸಮಸ್ಯೆಯ ನಡುವೆಯೂ ಸ್ಪೇನ್ ಗುಂಪಿನ ಫೇವರಿಟ್ ತಂಡವಾಗಿದ್ದು, ಉರುಗ್ವೆ 2ನೇ ಸ್ಥಾನ ಪಡೆಯಬಹುದು. ಸೌದಿ ಅರೇಬಿಯಾ ಅಚ್ಚರಿಯ ಫಲಿತಾಂಶ ನೀಡುವುದು ಕಷ್ಟ. ಆದರೆ ಚೊಚ್ಚಲ ವಿಶ್ವಕಪ್ ಆಡಲಿರುವ ಕೇಪ್ ವರ್ಡೆ ಎದುರು ಗೆಲ್ಲಬಹುದು.
ಸ್ಟಾರ್ಸ್: ಲ್ಯಾಮಿನ್ ಯಮಲ್, ಪೆಡ್ರಿ, ರೋಡ್ರಿ.
ಕೋಚ್: ಲೂಯಿಸ್ ಡೆ ಲಾ ಫ್ಯೂಯೆಂಟ್
ಬೆಸ್ಟ್: 2010ರಲ್ಲಿ ಚಾಂಪಿಯನ್
ಸ್ಟಾರ್ಸ್: ರಯಾನ್ ಮೆಂಡೆಸ್, ಡೈಲಾನ್ ಲಿವ್ರಮೆಂಟೊ, ಲೋಗನ್ ಕೋಸ್ಟಾ.
ನಿಕ್ನೇಮ್: ಟ್ಯೂರ್ಬಸ್ ಅಜುಯಿಸ್
ಸ್ಟಾರ್ಸ್: ಸಲೇಮ್ ಅಲ್ ದವ್ಸಾರಿ, ಸೌದ್ ಅಬ್ದುಲ್ ಹಮೀದ್, ಮುಸಾಬ್ ಅಲ್&ಜುವೈರ್.
ಕೋಚ್: ಜಾರ್ಜಿಯಸ್ ಡೋನಿಸ್
ಬೆಸ್ಟ್: 1994ರಲ್ಲಿ ಪ್ರಿ ಕ್ವಾರ್ಟರ್ೈನಲ್
ನಿಕ್ನೇಮ್: ದಿ ಗ್ರೀನ್ ಾಲ್ಕನ್ಸ್
ಸ್ಟಾರ್ಸ್: ಫೆಡೆರಿಕೊ ವಾಲ್ವರ್ಡ್, ರೊನಾಲ್ಡ್ ಅರೌಜೊ, ಡಾರ್ವಿನ್ ನೂನೆಜ್.
ಬೆಸ್ಟ್: 2 ಬಾರಿ ಚಾಂಪಿಯನ್
ಐ: ಹಾಲಿ ರನ್ನರ್ಅಪ್ ಫ್ರಾನ್ಸ್ ಈ ಸಲದ "ಗ್ರೂಪ್ ಆಫ್ ಡೆತ್'ನಲ್ಲಿದೆ. ಸರಾಸರಿ ಗರಿಷ್ಠ ರ್ಯಾಂಕ್ನ ಗುಂಪು. ಆದರೂ ಫ್ರಾನ್ಸ್ ಫೇವರಿಟ್. ಆಫ್ರಿಕಾದ ಬಲಿಷ್ಠ ಸೆನೆಗಲ್, ಎರ್ಲಿಂಗ್ ಹಾಲೆಂಡ್ ಒಳಗೊಂಡ ನಾರ್ವೆ ಕರಿಗುದುರೆಗಳು. ಇರಾಕ್ 4 ದಶಕದ ಬಳಿಕ ವಿಶ್ವಕಪ್ ಆಡುವ ಜೋಶ್ನಲ್ಲಿದೆ.
ಸ್ಟಾರ್ಸ್: ಕೈಲಿಯನ್ ಎಂಬಾಪೆ, ಔಸ್ಮಾನ್ ಡೆಂಬೆಲ್, ವೆುೃಕೆಲ್ ಒಲಿಸ್.
ಕೋಚ್: ಡಿಡಿಯರ್ ಡೆಸ್ಚಾಂಪ್ಸ್
ಬೆಸ್ಟ್: 2 ಬಾರಿ ಚಾಂಪಿಯನ್
ನಿಕ್ನೇಮ್: ಲೆಸ್ ಬ್ಲೂಸ್
ಸ್ಟಾರ್ಸ್: ಸ್ಯಾಡಿಯೊ ಮಾನೆ, ಕಾಲಿಡೌ ಕೌಲಿಬಾಲಿ, ನಿಕೋಲಸ್ ಜಾಕ್ಸನ್.
ಬೆಸ್ಟ್: 2002ರಲ್ಲಿ ಕ್ವಾರ್ಟರ್ಫೈನಲ್
ನಿಕ್ನೇಮ್: ಲಯನ್ಸ್ ಆಫ್ ಟೆರಂಗಾ
ಸ್ಟಾರ್ಸ್: ಐಮೆನ್ ಹುಸೇನ್, ಅಲಿ ಅಲ್&ಹಮಾಡಿ, ಅಮೀರ್ ಅಲ್&ಅಮ್ಮಾರಿ.
ಬೆಸ್ಟ್: 1986ರಲ್ಲಿ ಗುಂಪು ಹಂತ
ನಿಕ್ನೇಮ್: ಲಯನ್ಸ್ ಆಫ್ ಮೆಸೊಪಟ್ಯಾಮಿಯಾ
ಸ್ಟಾರ್ಸ್: ಎರ್ಲಿಂಗ್ ಹಾಲೆಂಡ್, ಮರ್ಟಿನ್ ಒಡೆಗಾರ್ಡ್, ಅಲೆಕ್ಸಾಂಡರ್ ಸೊಲೋರ್ತ್.
ಕೋಚ್: ಸ್ಟೇಲ್ ಸೋಲ್ಬಕ್ಕೆನ್
ಬೆಸ್ಟ್: 2 ಬಾರಿ ಪ್ರಿ ಕ್ವಾರ್ಟರ್ಫೈನಲ್
ಜೆ: ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಗುಂಪು ಹಂತದಲ್ಲಿ ಸುಲಭ ಹಾದಿ ಇದೆ. ಆಸ್ಟ್ರಿಯಾ-ಅಲ್ಜೀರಿಯಾ ನಡುವಿನ ಪಂದ್ಯದ ವಿಜೇತರಿಗೆ ಗುಂಪಿನ 2ನೇ ಸ್ಥಾನ ಸಿಗಬಹುದು. ಜೋರ್ಡಾನ್ ಮೊದಲ ವಿಶ್ವಕಪ್ ಆಡುವುದರಲ್ಲೇ ಸಂತಸ ಕಾಣಬಹುದು.
ಸ್ಟಾರ್ಸ್: ಲಿಯೋನೆಲ್ ಮೆಸ್ಸಿ, ಜೂಲಿಯನ್ ಅಲ್ವಾರೆಜ್, ಎಮಿಲಿಯಾನೊ ಮಾರ್ಟಿನೆಜ್.
ಕೋಚ್: ಲಿಯೋನೆಲ್ ಸ್ಕಾಲೋನಿ
ಬೆಸ್ಟ್: 3 ಬಾರಿ ಚಾಂಪಿಯನ್
ನಿಕ್ನೇಮ್: ಲಾ ಅಲ್ಬಿಸೆಲೆಸ್ಟೆ
ಸ್ಟಾರ್ಸ್: ರಿಯಾದ್ ಮೆಹ್ರೆಜ್, ರಾಯನ್ ಐಟ್&ನೂರಿ, ಅಮೈನ್ ಗೌರಿ.
ಕೋಚ್: ವ್ಲಾಡಿಮಿರ್ ಪೆಟ್ಕೋವಿಕ್
ಬೆಸ್ಟ್: 2014ರಲ್ಲಿ ಪ್ರಿ ಕ್ವಾರ್ಟರ್ಫೈನಲ್
ನಿಕ್ನೇಮ್: ಡೆಸರ್ಟ್ ವಾರಿಯರ್ಸ್
ಸ್ಟಾರ್ಸ್: ಡೇವಿಡ್ ಅಲಾಬಾ, ಮಾರ್ಸೆಲ್ ಸಬಿಟ್ಜರ್, ಕೊನ್ರಾಡ್ ಲೈಮರ್.
ಬೆಸ್ಟ್: 1954ರಲ್ಲಿ 3ನೇ ಸ್ಥಾನ
ಸ್ಟಾರ್ಸ್: ಮೌಸಾ ಅಲ್-ತಮರಿ, ಅಲಿ ಓಲ್ವಾನ್, ಯಾಜಾನ್ ಅಲ್&ಅರಬ್.
ನಿಕ್ನೇಮ್: ದಿ ಚಿವಲ್ರಸ್ ಒನ್ಸ್
ಕೆ: ಕ್ರಿಶ್ಚಿಯಾನೊ ರೊನಾಲ್ಡೊಗೆ ವಿಶ್ವಕಪ್ ಗೆಲುವಿನ ವಿದಾಯ ನೀಡುವ ಹಂಬಲದಲ್ಲಿರುವ ಪೋರ್ಚುಗಲ್ಗೆ ಗುಂಪು ಹಂತದಲ್ಲಿ ಹೆಚ್ಚಿನ ಪೈಪೋಟಿ ಇಲ್ಲ. ಕೊಲಂಬಿಯಾಗೂ 2ನೇ ಸ್ಥಾನ ಸಲೀಸು. ಕಾಂಗೋ ಡಿಆರ್, ಉಜ್ಬೇಕಿಸ್ತಾನ ಸುಲಭ ತುತ್ತಾಗುವ ನಿರೀಕ್ಷೆ ಇದೆ.
ಸ್ಟಾರ್ಸ್: ಕ್ರಿಶ್ಚಿಯಾನೊ ರೊನಾಲ್ಡೊ, ಬ್ರುನೋ ಫೆರ್ನಾಂಡಿಸ್, ಬೆರ್ನಾರ್ಡೊ ಸಿಲ್ವಾ.
ಕೋಚ್: ರಾಬರ್ಟೊ ಮಾರ್ಟಿನೆಜ್
ಬೆಸ್ಟ್: 1966ರಲ್ಲಿ 3ನೇ ಸ್ಥಾನ
ನಿಕ್ನೇಮ್: ಸೆಲೆಕಾವೊ ಡಸ್ ಕ್ವಿನಸ್
ಸ್ಟಾರ್ಸ್: ಚಾನ್ಸೆಲ್ ಎಂಬೆಂಬಾ, ಯೋನೆ ವಿಸ್ಸಾ, ಆರನ್ ವಾನ್-ಬಿಸ್ಸಾಕಾ.
ಕೋಚ್: ಸೆಬಾಸ್ಟಿಯನ್ ಡೆಸಾಬ್ರೆ
ಬೆಸ್ಟ್: 1974ರಲ್ಲಿ ಗುಂಪು ಹಂತ
ಸ್ಟಾರ್ಸ್: ಎಲ್ಡರ್ ಶೋಮುರೊಡೋವ್, ಅಬ್ದುಕೋದಿರ್ ಖುಸಾನೋವ್, ಅಬ್ಬೋಸ್ಬೆಕ್ ಫೈಜುಲ್ಲಾವ್.
ಕೋಚ್: ಫ್ಯಾಬಿಯೊ ಕ್ಯಾನವಾರೊ
ನಿಕ್ನೇಮ್: ವೈಟ್ ವೋಲ್ವ್ಸ್
ಸ್ಟಾರ್ಸ್: ಲೂಯಿಸ್ ಡಿಯಾಜ್, ಜೇಮ್ಸ್ ರೋಡ್ರಿಗಸ್, ಜಾನ್ ಏರಿಯಾಸ್.
ಬೆಸ್ಟ್: 2014ರಲ್ಲಿ ಕ್ವಾರ್ಟರ್ಫೈನಲ್
ನಿಕ್ನೇಮ್: ಲಾಸ್ ಕೆೆಟೆರೋಸ್
ಎಲ್: ಇಂಗ್ಲೆಂಡ್ ತಂಡ ಗುಂಪಿನ ಹಾಟ್ ಫೇವರಿಟ್ ಆಗಿದ್ದು, ಕ್ರೋಷಿಯಾದಿಂದ ಮಾತ್ರ ನಿಕಟ ಪೈಪೋಟಿ ಎದುರಾಗಬಹುದು. ಆದರೆ ಅಂಗ್ಲರು ಯುರೋಪ್ ಹೊರಗಿನ ವಿಶ್ವಕಪ್ನಲ್ಲಿ ಇದುವರೆಗೆ ಕ್ವಾರ್ಟರ್ಫೈನಲ್ ದಾಟಿದ ದೃಷ್ಟಾಂತವಿಲ್ಲ. ಘಾನಾ, ಪನಾಮ 3ನೇ ಸ್ಥಾನಕ್ಕೆ ಸ್ಪರ್ಧೆಯಲ್ಲಿವೆ.
ಸ್ಟಾರ್ಸ್: ಹ್ಯಾರಿ ಕೇನ್, ಜೂಡ್ ಬೆಲ್ಲಿಂಗ್ಹ್ಯಾಮ್, ಬುಕಾಯೊ ಸಕಾ.
ಬೆಸ್ಟ್: 1966ರಲ್ಲಿ ಚಾಂಪಿಯನ್
ಸ್ಟಾರ್ಸ್: ಲುಕಾ ಮಾಡ್ರಿಕ್, ಜೋಸ್ಕೊ ಗ್ವಾರ್ಡಿಯೋಲ್, ಮ್ಯಾಟಿಯೊ ಕೊವಾಸಿಕ್.
ಬೆಸ್ಟ್: 2018ರಲ್ಲಿ ರನ್ನರ್ಅಪ್
ಸ್ಟಾರ್ಸ್: ಆಂಟೊನಿ ಸೆಮೆನಿಯೊ, ಥಾಮಸ್ ಪಾರ್ಟಿ, ಇನಾಕಿ ವಿಲಿಯಮ್ಸ್.
ಕೋಚ್: ಕಾಲೋರ್ಸ್ ಕ್ವಿರೋಜ್
ಬೆಸ್ಟ್: 2010ರಲ್ಲಿ ಕ್ವಾರ್ಟರ್ಫೈನಲ್
ನಿಕ್ನೇಮ್: ಬ್ಲ್ಯಾಕ್ ಸ್ಟಾರ್ಸ್
ಸ್ಟಾರ್ಸ್: ಅಡಾಲ್ಬರ್ಟೊ ಕರಾಸ್ಕಿಲ್ಲಾ, ಅನಿಬಲ್ ಗೊಡಾಯ್, ಜೋಸ್ ಜಾರ್ಡೊ.
ಕೋಚ್: ಥಾಮಸ್ ಕ್ರಿಶ್ಚಿಯನ್ಸೆನ್
ಬೆಸ್ಟ್: 2018ರಲ್ಲಿ ಗುಂಪು ಹಂತ
ನಿಕ್ನೇಮ್: ಲಾಸ್ ಕ್ಯಾನಲೆರೋಸ್
16 ಸ್ಟೇಡಿಯಂಗಳಲ್ಲಿ 104 ಪಂದ್ಯಗಳು
ಮೆಕ್ಸಿಕೋ (3 ತಾಣ, 13 ಪಂದ್ಯ)
*ಇಸ್ಟಾಡಿಯೊ ಏಕ್ರೋನ್, ಗ್ವಾಡಲಜರ (ಆಸನ: 48,000): 4 ಪಂದ್ಯ
*ಇಸ್ಟಾಡಿಯೊ ಅಜ್ಟೆಕಾ, ಮೆಕ್ಸಿಕೋ ಸಿಟಿ (ಆಸನ: 83,000): 5 ಪಂದ್ಯ
*ಇಸ್ಟಾಡಿಯೊ ಬಿಬಿಎವಿ, ಮಾಂಟೆರ್ರಿ (ಆಸನ: 53,500): 4 ಪಂದ್ಯ
ಕೆನಡಾ (2 ತಾಣ, 13 ಪಂದ್ಯ)
*ಬಿಸಿ ಪ್ಲೇಸ್, ವ್ಯಾಂಕೋವರ್ (ಆಸನ: 54,000): 7 ಪಂದ್ಯ
*ಬಿಎಂಒ ಫೀಲ್ಡ್, ಟೊರಾಂಟೊ (ಆಸನ: 45,000): 6 ಪಂದ್ಯ
ಅಮೆರಿಕ (11 ತಾಣ, 78 ಪಂದ್ಯ)
*ಲ್ಯೂಮೆನ್ ಫೀಲ್ಡ್, ಸಿಯಾಟಲ್ (ಆಸನ: 69,000): 6 ಪಂದ್ಯ
*ಬೇ ಏರಿಯಾ ಸ್ಟೇಡಿಯಂ, ಸ್ಯಾನ್ ಫ್ರಾನ್ಸಿಸ್ಕೋ (ಆಸನ: 71,000): 6 ಪಂದ್ಯ
*ಸೋಫಿ ಸ್ಟೇಡಿಯಂ, ಲಾಸ್ ಏಂಜಲೀಸ್ (ಆಸನ: 70,000): 8 ಪಂದ್ಯ
*ಎನ್ಆರ್ಜಿ ಸ್ಟೇಡಿಯಂ, ಹ್ಯೂಸ್ಟನ್ (ಆಸನ: 72,000): 7 ಪಂದ್ಯ
*ಎಟಿ ಆಂಡ್ ಟಿ ಸ್ಟೇಡಿಯಂ, ಡಲ್ಲಾಸ್ (ಆಸನ: 94,000): 9 ಪಂದ್ಯ
*ಆರೋಹೆಡ್ ಸ್ಟೇಡಿಯಂ, ಕಾನ್ಸಾಸ್ ಸಿಟಿ (ಆಸನ: 73,000): 6 ಪಂದ್ಯ
*ಮರ್ಸಿಡಿಸ್-ಬೆಂಜ್ ಸ್ಟೇಡಿಯಂ, ಅಟ್ಲಾಂಟಾ (ಆಸನ: 75,000): 8 ಪಂದ್ಯ
*ಹಾರ್ಡ್ರಾಕ್ ಸ್ಟೇಡಿಯಂ, ಮಿಯಾಮಿ (ಆಸನ: 65,000): 7 ಪಂದ್ಯ
*ಜಿಲ್ಲೆಟ್ ಸ್ಟೇಡಿಯಂ, ಬೋಸ್ಟನ್ (ಆಸನ: 65,000): 7 ಪಂದ್ಯ
*ಲಿನ್ಕಾನ್ ಫೈನಾನ್ಸಿಯಲ್ ಫೀಲ್ಡ್, ಫಿಲಾಡೆಲ್ಫಿಯಾ (ಆಸನ: 69,000): 6 ಪಂದ್ಯ
*ಮೆಟ್ಲೈಫ್ ಸ್ಟೇಡಿಯಂ, ನ್ಯೂ ಜೆರ್ಸಿ (ಆಸನ: 82,500): 8 ಪಂದ್ಯ