ಕೋಲ್ಕತ: ಎಡ್ಮಂಡ್ ಲಾಲ್ರಿಂಡಿಕ (11, 22, 44ನೇ ನಿಮಿಷ) ಹ್ಯಾಟ್ರಿಕ್ ಗೋಲು ಸಾಧನೆಯ ನೆರವಿನಿಂದ ಈಸ್ಟ್ ಬೆಂಗಾಲ್ ತಂಡ ಪ್ರತಿಷ್ಠಿತ ಡುರಾಂಡ್ ಕಪ್ (
Durand Cup
) ಟೂರ್ನಿಯಲ್ಲಿ 17ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡ ಮೋಹನ್ ಬಾಗನ್ ವಿರುದ್ಧ 4-1 ಅಂತರದಿಂದ ಗೆಲುವು ದಾಖಲಿಸಿತು. ಇದರಿಂದ ಈಸ್ಟ್ ಬೆಂಗಾಲ್ ತಂಡ 135 ವರ್ಷಗಳ ಇತಿಹಾಸವಿರುವ ಟೂರ್ನಿಯಲ್ಲಿ 22 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಾಧನೆ ಮಾಡಿತು.
2004ರಲ್ಲಿ ಕೊನೆಯದಾಗಿ ಮೋಹನ್ ಬಾಗನ್ ತಂಡವನ್ನೇ ಮಣಿಸಿ ಚಾಂಪಿಯನ್ ಆಗಿದ್ದ ಈಸ್ಟ್ ಬೆಂಗಾಲ್ ತಂಡ, ಸರ್ವಾಧಿಕ 17 ಬಾರಿ ಡುರಾಂಡ್ ಕಪ್ ಗೆದ್ದಿರುವ ಮೋಹನ್ ಬಾಗನ್ ದಾಖಲೆಯನ್ನೂ ಸರಿಗಟ್ಟಿತು.