Cristiano Ronaldo's Son (ಚಿತ್ರ X) 
ಫುಟ್ಬಾಲ್

27ರ ಹರೆಯದ ಸುಂದರಿಯೊಂದಿಗೆ ರೊನಾಲ್ಡೊ ಪುತ್ರ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಫೋಟೋಗಳ ಅಸಲಿ ಕಥೆ ಇಲ್ಲಿದೆ! Cristiano Ronaldo's Son

Cristiano Ronaldo's Son: ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಗಾಯಗೊಂಡ ಹಿನ್ನಲೆ ಮೈದಾನದಿಂದ ಹೊರಗಿದ್ದರೂ ಸಹ, ಅವರ ಕುಟುಂಬದ ಸುತ್ತಲಿನ ಸುದ್ದಿಗಳು ಮಾತ್ರ ಕಡಿಮೆಯಾಗುತ್ತಿಲ್ಲ. ವಿಶೇಷವಾಗಿ ಅವರ ಹಿರಿಯ ಮಗ ಕ್ರಿಸ್ಟಿಯಾನೊ ಜೂನಿಯರ್ ಅವರ ವೈಯಕ್ತಿಕ ಜೀವನದ ಬಗ್ಗೆ ಹಬ್ಬುತ್ತಿರುವ ವದಂತಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿವೆ.
ಇತ್ತೀಚೆಗೆ ಕ್ರಿಸ್ಟಿಯಾನೊ ಜೂನಿಯರ್ ಒಬ್ಬ ಯುವತಿಯೊಂದಿಗೆ ಇರುವಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಅಭಿಮಾನಿಗಳು "ರೊನಾಲ್ಡೊ ಜೂನಿಯರ್ 27 ವರ್ಷದ ಬ್ರೆಜಿಲಿಯನ್ ಮಾಡೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ" ಎಂಬ ಕಥೆಯನ್ನು ಹೆಣೆಯಲು ಆರಂಭಿಸಿದರು. 
ರೊನಾಲ್ಡೊ ಅವರ ಮಗನಿಗೆ ಕೇವಲ 15 ವರ್ಷ ವಯಸ್ಸಾಗಿದ್ದು,  ಇಂತಹ ಗಂಭೀರ ವದಂತಿಗಳು ಹರಡುತ್ತಿರುವುದು ಅನೇಕರಲ್ಲಿ ಆಶ್ಚರ್ಯ ಮತ್ತು ಆಕ್ರೋಶಕ್ಕೆ ಕಾರಣವಾಯಿತು.
ಈ ಹಿಂದೆ, ಕ್ರಿಸ್ಟಿಯಾನೊ ಜೂನಿಯರ್ ಸಂದರ್ಶನಗಳಲ್ಲಿ ಮಾತನಾಡಿದ್ದು, ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದಾಗ್ಯೂ, ರೊನಾಲ್ಡೊ ಅವರ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಒಮ್ಮೆ ಅವರನ್ನು "ಪ್ರೇಮ" ಎಂದು ಕೀಟಲೆ ಮಾಡಿದ್ದರು. ಅದು ಬರೀ ಸ್ನೇಹ ಹೊರತು ಗೆಳತಿಯಾಗಿ ಅಲ್ಲ ಎಂದು ಹೇಳಿದರು.
ಆಮ್ ಜಾರ್ಜಿನಾ ಸೀಸನ್ 3 ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಸ್ಟಿಯಾನೊ ಜೂನಿಯರ್ ಅವರ ಕ್ರಶ್ ಬಗ್ಗೆ ಮಾತನಾಡಿ, "ಅವಳು ಕೇವಲ ಸ್ನೇಹಿತೆಯಾಗಿದ್ದಳು, ಈಗ ನಾವು ಮಾತಾಡುತ್ತಿಲ್ಲ" ಎಂದು ಹೇಳುವ ಮೂಲಕ ಅವರು ಆ ವಿಷಯವನ್ನು ಬಹಳ ಸರಳವಾಗಿ ಮುಗಿಸಿದರು.
ಈ ಹಿಂದೆ, ಕೆಲವು ಅಭಿಮಾನಿಗಳು ಡೆಲ್ಫಿನಾ ಸುವಾರೆಜ್ ಮತ್ತು ಕ್ರಿಸ್ಟಿಯಾನೊ ಜೂನಿಯರ್ ಇಬ್ಬರೂ ಸಮಾನ ವಯಸ್ಕರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಫೋಟೋಗಳನ್ನು ಎಡಿಟ್ ಮಾಡಿ "ಇವರು ಡೇಟಿಂಗ್ ಮಾಡುತ್ತಿದ್ದಾರೆ" ಎಂಬ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿತ್ತು. 
ಪ್ರಸ್ತುತ, ಕ್ರಿಸ್ಟಿಯಾನೊ ರೊನಾಲ್ಡೊ ಜೂನಿಯರ್ ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. 27 ವರ್ಷದ ಬ್ರೆಜಿಲಿಯನ್ ಮಾಡೆಲ್ ಬಗ್ಗೆ ಇರುವ ಕಥೆ ಸಂಪೂರ್ಣವಾಗಿ ಕಟ್ಟುಕಥೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುವಂತೆ ಅವರ ಪ್ರಸ್ತುತ ಜೀವನವು ಫುಟ್ಬಾಲ್ ಮತ್ತು ಕುಟುಂಬದ ಮೇಲೆ ಸ್ಪಷ್ಟವಾಗಿ ಕೇಂದ್ರೀಕೃತವಾಗಿದೆ (ಏಜೆನ್ಸೀಸ್​).