ಫುಟ್ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಅವರದೆಂದು ಬೇರೆ ಮದುವೆಗೆ ನುಗ್ಗಿದ 2 ಸಾವಿರ ಅಭಿಮಾನಿಗಳು!
ಲಿಸ್ಬನ್: ಫು
ಟ್ಬಾಲ್ ಸೂಪರ್ಸ್ಟಾರ್ ಕ್ರಿಶ್ಚಿಯಾನೊ
ರೊನಾಲ್ಡೊ (
Cristiano Ronaldo
) ಫಿಫಾ ವಿಶ್ವಕಪ್ ಬಳಿಕ ವಿವಾಹವಾಗಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿ ಹರಡಿತ್ತು. ಹೀಗಾಗಿ ಪೋರ್ಚುಗಲ್ನ ಮಡೈರಾದ ಚರ್ಚ್ವೊಂದರಲ್ಲಿ ಕಳೆದ ಸೋಮವಾರ ನಿಗದಿಯಾಗಿದ್ದ ಮದುವೆ ರೊನಾಲ್ಡೊ-ಜಾರ್ಜಿನಾ ಅವರದೆಂದು ಭಾವಿಸಿದ ಅಭಿಮಾನಿಗಳು ಅಲ್ಲಿಗೆ ತೆರಳಿದ್ದರು. ಸುಮಾರು 2 ಸಾವಿರ ಅಭಿಮಾನಿಗಳು ಒಮ್ಮೆಲೇ ಬಂದ ಕಾರಣ, ಫ್ಯಾಬಿಯೊ ರಾಮೋಸ್-ಫಾತಿಮಾ ನಿಕೋಲ್ ಕುನ್ಹಾ ಎಂಬವರ ಆ ವಿವಾಹ ಕಾರ್ಯಕ್ರಮದಲ್ಲಿ ಭಾರಿ ನೂಕುನುಗ್ಗಲು ಉಂಟಾಗಿತ್ತು.
ಹೆಚ್ಚಿನವರು ರೊನಾಲ್ಡೊರ 7 ನಂಬರ್ ಜೆರ್ಸಿ ಧರಿಸಿ ಬಂದಿದ್ದರು. ಈ ಅನಿರೀಕ್ಷಿತ ಜನಸಂದಣಿಯಿಂದ ವಧು-ವರರ ಕುಟುಂಬದವರಿಗೆ ವಿವಾಹ ಸ್ಥಳ ತಲುಪುವುದು ಕಠಿಣವಾಗಿತ್ತು. ಅಲ್ಲದೆ ಸ್ವತಃ ವಧು ಫಾತಿಮಾ ಕೂಡ ಭಾರಿ ನೂಕುನುಗ್ಗಲಿನ ನಡುವೆ ಚರ್ಚ್ ತಲುಪಿದ್ದರು. ಇದು ರೊನಾಲ್ಡೊ-ಜಾರ್ಜಿನಾ ವಿವಾಹವಲ್ಲ ಎಂದು ಸ್ಪಷ್ಟನೆ ನೀಡಿದರೂ, ಭದ್ರತಾ ಕಾರಣಗಳಿಂದ ಅವರು ಬೇರೆ ಹೆಸರಿನಲ್ಲಿ ವಿವಾಹ ಸ್ಥಳ ಬುಕ್ ಮಾಡಿರಬಹುದು ಎಂದು ಅಭಿಮಾನಿಗಳು ನಂಬಿದ್ದರು ಎನ್ನಲಾಗಿದೆ. ಬಳಿಕ ಸ್ವತಃ ರೊನಾಲ್ಡೊ, ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಸುದ್ದಿಗೆ ನಗುವಿನ ಇಮೋಜಿ ಹಾಕಿ ಪ್ರತಿಕ್ರಿಯಿಸಿದ್ದರು. ರೊನಾಲ್ಡೊ ಅವರ ಸಹೋದರಿ ಕಾಟಿಯಾ ಅವೈರೊ, ಮಡೈರಾಗೆ ಬಂದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭಿಮಾನಿಗಳ ನಡುವೆ ರೊನಾಲ್ಡೊ ವಿವಾಹದ ಸುದ್ದಿ ಹರಡಲು ಮೂಲ ಕಾರಣವಾಗಿತ್ತು.
ರೊನಾಲ್ಡೊ-ಜಾರ್ಜಿನಾ 10 ವರ್ಷಗಳ ಸಂಬಂಧಕ್ಕೆ ವಿವಾಹ ಮುದ್ರೆ
ಫುಟ್ಬಾಲ್ ಸೂಪರ್ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ತನ್ನ ಸುದೀರ್ಘ ಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರೊಂದಿಗೆ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದ ರೊನಾಲ್ಡೊ-ಜಾರ್ಜಿನಾ ಪೋರ್ಚುಗಲ್ನಲ್ಲಿ ಮಂಗಳವಾರ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಬಳಿಕ ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಉಂಗುರ ಪ್ರದರ್ಶಿಸುವ ಚಿತ್ರದೊಂದಿಗೆ ವಿವಾಹವನ್ನು ಅಧಿಕೃತವಾಗಿ ಪ್ರಕಟಿಸಿದರು. 2016ರಲ್ಲಿ ಮ್ಯಾಡ್ರಿಡ್ನಲ್ಲಿ ಇವರಿಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಆಗ ಜಾರ್ಜಿನಾ ಅಂಗಡಿಯೊಂದರಲ್ಲಿ ಸೇಲ್ಸ್ ಸಹಾಯಕಿಯಾಗಿದ್ದರು. ನಂತರ ಅವರು ರೂಪದರ್ಶಿ, ಟಿವಿ ತಾರೆ, ಉದ್ಯಮಿಯಾಗಿ ತಮ್ಮದೇ ವೃತ್ತೀಜಿವನದಲ್ಲಿ ಬೆಳೆದಿದ್ದರು.
41 ವರ್ಷದ ರೊನಾಲ್ಡೊ ಅವರ ಐವರು ಮಕ್ಕಳು ವಿವಾಹಕ್ಕೆ ಸಾಯಾಗಿದ್ದರು. ಈ ಪೈಕಿ ಕಿರಿಯ ಇಬ್ಬರು ಮಕ್ಕಳಿಗೆ 32 ವರ್ಷದ ಜಾರ್ಜಿನಾ ಜನ್ಮ ನೀಡಿದ್ದರೆ, ಮೊದಲ 3 ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆಯಲಾಗಿತ್ತು. ಜಾರ್ಜಿನಾ ಈಗಾಗಲೆ ರೊನಾಲ್ಡೊ ಮತ್ತು ಮಕ್ಕಳೊಂದಿಗೆ ವಾಸವಿದ್ದರು. ರೊನಾಲ್ಡೊ-ಜಾರ್ಜಿನಾ ಭರ್ತಿ ಒಂದು ವರ್ಷದ ಹಿಂದೆ ಆಗಸ್ಟ್ 11ರಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇತ್ತೀಚೆಗೆ ಆರನೇ ಬಾರಿ ಫಿಫಾ ವಿಶ್ವಕಪ್ನಲ್ಲಿ ಆಡಿ ಪ್ರಶಸ್ತಿ ಗೆಲುವಿಲ್ಲದೆ ನಿರಾಸೆ ಅನುಭವಿಸಿದ್ದ ರೊನಾಲ್ಡೊ, ವೃತ್ತಿಪರ ಫುಟ್ಬಾಲ್ನಲ್ಲಿ 900ಕ್ಕೂ ಅಧಿಕ ಗೋಲು ಬಾರಿಸಿದ್ದಾರೆ. ಪ್ರತಿಷ್ಠಿತ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಪರ ಆಡಿರುವ ಅವರು, ಸದ್ಯ ಸೌದಿ ಅರೇಬಿಯಾದ ಅಲ್ ನಾಸರ್ ತಂಡದ ಭಾಗವಾಗಿದ್ದಾರೆ. ಪೋರ್ಚುಗಲ್ ತಂಡದ ನಾಯಕರಾಗಿರುವ ಅವರು, ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಇನ್ನೂ 2 ವರ್ಷ ಕಾಲ ಮುಂದುವರಿಯುವ ನಿರೀಕ್ಷೆ ಇದೆ. ಕಳೆದ ವರ್ಷದ ವರದಿಯೊಂದರ ಪ್ರಕಾರ ರೊನಾಲ್ಡೊ ಅವರ ನಿವ್ವಳ ಮೌಲ್ಯ 13,346 ಕೋಟಿ ರೂ. (1.4 ಶತಕೋಟಿ ಡಾಲರ್) ಆಗಿದ್ದು, ಫುಟ್ಬಾಲ್ ಜಗತ್ತಿನ ಮೊದಲ ಬಿಲಿಯನೇರ್ ಎನಿಸಿದ್ದಾರೆ.