FIFA WorldCup: ರೆಡ್ ಡೆವಿಲ್ಸ್ಗೆ ಬೆದರಿದ ನ್ಯೂಜಿಲೆಂಡ್
ವ್ಯಾಂಕೋವರ್: ಲಿಯಾಂಡ್ರೊ ಟ್ರೋಸಾರ್ಡ್ (28, 50ನೇ ನಿಮಿಷ) ಸಿಡಿಸಿದ ಅವಳಿ ಗೋಲು ಮತ್ತು ಸ್ಟಾರ್ ಆಟಗಾರರಾದ ಕೆವಿನ್ ಡಿ ಬ್ರುಯ್ನ್ (66), ರೊಮೆಲು ಲುಕಾಕು (86) ಸಿಡಿಸಿದ ತಲಾ ಒಂದು ಗೋಲಿನ ಬಲದಿಂದ ನ್ಯೂಜಿಲೆಂಡ್ ಎದುರು ಸಂಪೂರ್ಣ ಪ್ರಾಬಲ್ಯ ಸಾಧಿಸಿದ ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ ತಂಡ 5-1 ಅಂತರದ ಗೆಲುವಿನೊಂದಿಗೆ ಫಿಫಾ ವಿಶ್ವಕಪ್ನ (FIFA WorldCup) ಜಿ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡು 32ರ ಘಟ್ಟಕ್ಕೇರಿದೆ.
ಭಾರತೀಯ ಕಾಲಮಾನ ಪ್ರಕಾರ ಶನಿವಾರ ಬೆಳಗ್ಗೆ ನಡೆದ ಕಾದಾಟದಲ್ಲಿ ಬೆಲ್ಜಿಯಂ, ಟೂರ್ನಿಯಲ್ಲಿ ಆಡಿದ ಅತ್ಯಂತ ಕೆಳ ಶ್ರೇಯಾಂಕಿತ ತಂಡವಾಗಿದ್ದ ನ್ಯೂಜಿಲೆಂಡ್ ಎದುರು ಸಂಪೂರ್ಣ ಮೇಲುಗೈ ಸಾಧಿಸಿತು. ಎಲಿಜಾ ಜಸ್ಟ್ (84) ಕಿವೀಸ್ ಪರ ಏಕೈಕ ಗೋಲು ಬಾರಿಸಿದರೆ, ಅಲೆಕ್ಸಿಸ್ ಸೇಲ್ಮೇಕರ್ಸ್ (90+4) ಇಂಜುರಿ ಸಮಯದಲ್ಲಿ ಬೆಲ್ಜಿಯಂ ಗೆಲುವಿನ ಅಂತರ ಹಿಗ್ಗಿಸಿದರು. ಬೆಲ್ಜಿಯಂಗೆ 32ರ ಘಟ್ಟದಲ್ಲಿ ಎದುರಾಳಿ ಆಗಲಿರುವ "3ನೇ ಸ್ಥಾನಿ' ತಂಡ ಇನ್ನೂ ನಿರ್ಧಾರವಾಗಿಲ್ಲ.
ಕಳೆದ ಕತಾರ್ ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ನಿರ್ಗಮಿಸಿದ್ದ ಬೆಲ್ಜಿಯಂ ಈ ಬಾರಿ ಮೊದಲ ಪಂದ್ಯದಲ್ಲಿ ಈಜಿಪ್ಟ್ ಎದುರು ಡ್ರಾಕ್ಕೆ ತೃಪ್ತಿಪಟ್ಟಿತ್ತು. "ಆಲ್ ವೈಟ್ಸ್ ಖ್ಯಾತಿಯ ನ್ಯೂಜಿಲೆಂಡ್ ಗುಂಪಿನ ಕೊನೇ ಸ್ಥಾನಿಯಾಗಿ ನಿರ್ಗಮಿಸಿತು.
*ಲಿಯಾಂಡ್ರೊ ಟ್ರೋಸಾರ್ಡ್ (28, 50)
*ಕೆವಿನ್ ಡಿ ಬ್ರುಯ್ನ್ (66)
*ಅಲೆಕ್ಸಿಸ್ ಸೇಲ್ಮೇಕರ್ಸ್ (90+4)