ಸಂತೋಷ್​ ಟ್ರೋಫಿ ಫುಟ್​ಬಾಲ್: ಕರ್ನಾಟಕ ಶುಭಾರಂಭ 
ಫುಟ್ಬಾಲ್

ಸಂತೋಷ್​ ಟ್ರೋಫಿ ಫುಟ್​ಬಾಲ್: ಕರ್ನಾಟಕ ಶುಭಾರಂಭ

ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ಪ್ರತಿಷ್ಠಿತ ದೇಶೀಯ ಫುಟ್​ಬಾಲ್​ ಟೂರ್ನಿ ಸಂತೋಷ್​ ಟ್ರೋಫಿ (Santosh Trophy ) 79ನೇ ಆವೃತ್ತಿಯ ಎಚ್​ ಗುಂಪಿನಲ್ಲಿ ಗೆಲುವಿನ ಆರಂಭ ಕಂಡಿದೆ. ನಿಖಿಲ್​ ರಾಜ್​ ಮುರುಗೇಶ್​ ಸಾರಥ್ಯದ ರಾಜ್ಯ ತಂಡ ತನ್ನ ಮೊದಲ ಪಂದ್ಯದಲ್ಲಿ ಲಕ್ಷದ್ವೀಪ ತಂಡದ ವಿರುದ್ಧ 3-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.

ಬೆಂಗಳೂರು ಫುಟ್​ಬಾಲ್​ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಪರ ನಾಯಕ ನಿಖಿಲ್​ ರಾಜ್​ ಮುರುಗೇಶ್​ (8ನೇ ನಿಮಿಷ, ಪೆನಾಲ್ಟಿ ಮತ್ತು 43ನೇ ನಿಮಿಷ) ಅವಳಿ ಗೋಲು ಸಿಡಿಸಿದರೆ, ಕಾರ್ತಿಕ್​ ಗೋವಿಂದ್​ (90+3) ಮತ್ತೊಂದು ಗೋಲು ಬಾರಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಸರ್ವೀಸಸ್​ 4-0ಯಿಂದ ಗೋವಾ ವಿರುದ್ಧ ಜಯಿಸಿತು. ಕರ್ನಾಟಕ ತಂಡ ಇನ್ನು ಸೋಮವಾರ ಸರ್ವೀಸಸ್​ ವಿರುದ್ಧ ಸೆಣಸಲಿದೆ.