ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ
- ಫಿಫಾ 2026ರ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಬಾರಿ ಟ್ರೋಫಿ ಎತ್ತಿಹಿಡಿಯುವ ಅವಕಾಶ ಮಿಸ್
- ಅರ್ಜೆಂಟೀನಾ ತಂಡಕ್ಕೆ ರೆಫರಿ, ಫಿಫಾ ಸಪೋರ್ಟ್ ಪೂರ್ತಿಯಾಗಿತ್ತು ಎಂಬ ಆರೋಪ
- ಇತ್ತೀಚೆಗಿನ ವಿವಾದ ಬೆನ್ನಲ್ಲೇ ಆನ್ಲೈನ್ ಅರ್ಜಿಯಲ್ಲಿ ಬ್ಯಾನ್ಗೆ ಆಗ್ರಹ
Argentina: ಇತ್ತೀಚೆಗಷ್ಟೇ ಸ್ಪೇನ್ ಗೆಲುವಿನ ಮೂಲಕ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡ ಫಿಫಾ 2026ರ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಸತತ ಎರಡನೇ ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಕಳೆದುಕೊಂಡಿತು. ಈ ಸೋಲಿನ ಬೆನ್ನಲ್ಲೇ ಮೈದಾನದಲ್ಲಿ ದಿಗ್ಗಜ ಲಿಯೋನೆಲ್ ಮೆಸ್ಸಿ ಕಣ್ಣೀರಿಟ್ಟರು. ಆದರೀಗ, ಫ್ಯಾನ್ಸ್ ಮಾತ್ರ ಮೆಸ್ಸಿ ಪಡೆ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಹೊರಿಸಿ, ಮುಂಬರುವ ವಿಶ್ವಕಪ್‌ನಿಂದ ಅರ್ಜೆಂಟೀನಾವನ್ನು ಕಿತ್ತುಬಿಸಾಡುವಂತೆ ಆಗ್ರಹಿಸಿದ್ದಾರೆ.
ಟೂರ್ನಿ ಆರಂಭದಿಂದಲೂ ಅರ್ಜೆಂಟೀನಾ ವಿರುದ್ಧ ಅಸಮಾಧಾನ ಹೊಂದಿದ್ದ ಫುಟ್ಬಾಲ್ ಪ್ರೇಮಿಗಳು, ಫಿಫಾ ಮತ್ತು ಆಯಾ ಪಂದ್ಯಗಳ ರೆಫರಿಗಳು ಅರ್ಜೆಂಟೀನಾ ಪರವಾಗಿದ್ದರು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಎಲ್ಲಿಯೂ ಅಷ್ಟಾಗಿ ಪಟ್ಟು ಹಿಡಿದು ವಾದಿಸಿರಲಿಲ್ಲ. ಆದ್ರೆ, ಫೈನಲ್ ಪಂದ್ಯದ ಕೊನೆಯಲ್ಲಿ ಅರ್ಜೆಂಟೀನಾದ ಸ್ಟಾರ್ ಪರೆಡೆಸ್, ಸ್ಪ್ಯಾನಿಷ್ ಆಟಗಾರರನ್ನು ಥಳಿಸಿದ ವಿಚಾರ ಈಗ ಜೋರಾಗಿದೆ. ಪರೆಡೆಸ್ ಸ್ಪ್ಯಾನಿಷ್ ಡಿಫೆಂಡರ್ ಎರಿಕ್ ಗಾರ್ಸಿಯಾ ಅವರನ್ನು ಹೊಡೆದು ನೆಲಕ್ಕೆ ತಳ್ಳಿದ್ದನ್ನು ಫ್ಯಾನ್ಸ್ ಒಪ್ಪಲು ರೆಡಿಯಿಲ್ಲ.
ಈ ಕಾರಣವನ್ನು ಮುಂದಿಟ್ಟು ಮುಂದಿನ ವಿಶ್ವಕಪ್ ಟೂರ್ನಿಗಳಿಂದ ಅರ್ಜೆಂಟೀನಾ ತಂಡವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಗಳು ಕೇಳಿಬಂದಿವೆ. ಅಸಲಿಗೆ, ಫಿಫಾ ಮತ್ತು ರೆಫರಿಗಳು ಮೆಸ್ಸಿ ತಂಡದೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಬೂದಿ ಮುಚ್ಚಿದ ಕೆಂಡದಂತಿತ್ತು. ಆದರೀಗ, ಅದು ಇದೊಂದು ವಿವಾದಿಂದ ಜ್ವಾಲೆಯಂತೆ ಸಿಡಿದಿದ್ದು, ಆನ್ಲೈನ್ ಅರ್ಜಿ ಮೂಲಕ ಬರೋಬ್ಬರಿ 23 ಮಿಲಿಯನ್ ಮಂದಿ ಡಿಜಿಟಲ್ ಸಹಿ ಹಾಕಿ ಅರ್ಜೆಂಟೀನಾವನ್ನು ಹೊರಗಟ್ಟುವಂತೆ ಒತ್ತಾಯಿಸಿದ್ದಾರೆ.
ಇದು ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಹಿ ಮಾಡಿದ ಅರ್ಜಿಗಳಲ್ಲಿ ಒಂದಾಗಿದೆ ಮತ್ತು ಗಿನ್ನಿಸ್ ವಿಶ್ವ ದಾಖಲೆಗೆ ಪ್ರವೇಶಿಸಲು ಸನ್ನಿಹಿತವಾಗಿದೆ. ಹಲವಾರು ಯುರೋಪಿಯನ್ ಮಾಧ್ಯಮಗಳ ವರದಿಗಳ ಪ್ರಕಾರ, ಅರ್ಜೆಂಟೀನಾವನ್ನು ಹೊರಹಾಕಬೇಕು ಎಂಬ ಟೈಟಲ್ ಇರುವ ಅರ್ಜಿಯು ಸುಮಾರು 170 ದೇಶಗಳಿಂದ 23,316,108 ಸಹಿಗಳನ್ನು ಸ್ವೀಕರಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಅರ್ಜಿಯಲ್ಲಿ ಆರೋಪಗಳೇನು?
ರೆಫರಿ ಪಕ್ಷಪಾತದ ಆರೋಪಗಳ ನಡುವೆ ಅರ್ಜೆಂಟೀನಾ ವಿರುದ್ಧ ಅರ್ಜಿಯನ್ನು ಪ್ರಾರಂಭಿಸಿದ ಅಭಿಮಾನಿಗಳು, ವಿಜೇತರು ಮೊದಲೇ ಫಿಕ್ಸ್ ಆಗುವುದಾದರೆ, ಉಳಿದ ತಂಡಗಳು ಟೂರ್ನಿಯಲ್ಲಿ ಆಡುವ ಅವಶ್ಯಕತೆ ಏನಿದೆ? ಅರ್ಜೆಂಟೀನಾವನ್ನು ವಿಶ್ವಕಪ್‌ನಿಂದ ಹೊರಹಾಕಿ ಎಲ್ಲರಿಗೂ ನ್ಯಾಯಯುತ ಅವಕಾಶ ನೀಡಿ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).