ಕ್ರೀಡೆ

ಫುಟ್​ಬಾಲ್​ ಆಟಗಾರ ಡಿಯೆಗೊ ಮರಡೋನಾ ಇನ್ನಿಲ್ಲ

ಲಂಡನ್​: ಖ್ಯಾತ ಫುಟ್​ಬಾಲ್​ ಆಟಗಾರ ಡಿಯೆಗೊ ಮರಡೋನಾ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಕೆಲವೇ ದಿನಗಳ ಹಿಂದೆ ಮಿದುಳಿನಲ್ಲಿ ರಕ್ತಗಟ್ಟಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಬಳಿಕ ಗುಣವಾಗಿ ಮನೆಗೆ ಮರಳಿದ್ದರು.

1986ರ ವಿಶ್ವಕಪ್​ ಪಂದ್ಯದಲ್ಲಿ ಅವರು ಅರ್ಜೆಂಟೀನಾಗೆ ವಿಜಯ ಲಭಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರ್ಜೆಂಟೀನಾ ಫುಟ್​ಬಾಲ್​ ತಂಡದ ಮಿಡ್​ಫೀಲ್ಡರ್ ಹಾಗೂ ಮ್ಯಾನೇಜರ್ ಕೂಡ ಆಗಿದ್ದ ಮರಡೋನಾ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದೆನಿಸಿಕೊಂಡಿದ್ದರು. (ಏಜೆನ್ಸೀಸ್)