ನವದೆಹಲಿ: ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್ ಚಟುವಟಿಕೆಗಳಿಂದ ದೂರವಿರುವ ಧವನ್‌ಗೆ ಸಾಮಾಜಿಕ ಜಾಲತಾಣವೇ ಪ್ರಮುಖ ಅಸವಾಗಿದೆ. ಟೈಮ್ ಪಾಸ್‌ಗಾಗಿ ಒಂದಿಲೊಂದು ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಧವನ್, ಇದೀಗ ಕಲರ್ ಹೇರ್‌ಸ್ಟೈಲ್ ಮಾಡಿಕೊಂಡಿದ್ದಾರೆ. ಅರೇ ಇದೇನಿದು, ಧವನ್ ತಲೆಯಲ್ಲಿ ಕೂದಲೇ ಇಲ್ಲದಿದ್ದರೂ ಹೇರ್‌ಸ್ಟೈಲ್ ಹೆಂಗೆ ಅಂತೀರಾ. ಇದನ್ನು ಸ್ವತಃ ಧವನ್ ಇನ್‌ಸ್ಟಾಗ್ರಾಂನಲ್ಲಿ ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ವೇಳೆ ಕಡೆಗೂ ನನಗೆ ಹೇರ್ ಸ್ಟೈಲ್ ಬಂತು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನೊವಾಕ್ ಜೋಕೊವಿಕ್ ಬೆಂಬಲಕ್ಕೆ ನಿಂತ ಸೆರ್ಬಿಯಾ ಪ್ರಧಾನಿ
ಮನೆಯಲ್ಲಿ ಪತ್ನಿ ಮಗನೊಂದಿಗೆ ಕಾಲಕಳೆಯುತ್ತಿರುವ ಧವನ್, ಅವರೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಳ್ಳುವುದು ಉಂಟು. ಸೋಮವಾರ ಫೋಟೋವೊಂದನ್ನು ಪ್ರಕಟಿಸಿರುವ ಧವನ್, ಕಲರ್ ಬ್ಯಾಂಡ್‌ವೊಂದನ್ನು ತಲೆ ಸುತ್ತಿಕೊಂಡು, ಕಡೆಗೂ ನನಗೂ ತಲೆ ಕೂದಲು ಬಂತು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಹಲವು ಮಂದಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕರೊನಾ ವೈರಸ್ ಭೀತಿಯಿಂದಾಗಿ 13ನೇ ಆವೃತ್ತಿಯ ಐಪಿಎಲ್ ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ. ಧವನ್ ತವರು ದೆಹಲಿ ಕ್ಯಾಪಿಟಲ್ಸ್ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಇತ್ತೀಚೆಗಷ್ಟೇ ಎರಡು ನಾಯಿ ಮರಿಗಳನ್ನು ಕೊಂಡುಕೊಂಡಿರುವುದಾಗಿ ಹೇಳಿದ್ದರು. ನನ್ನ ಕುಟುಂಬಕ್ಕೆ ಇಬ್ಬರು ಹೊಸ ಸದಸ್ಯರ ಆಗಮನವಾಗಿದೆ ಎಂದು ಹೇಳಿದ್ದರು.