ಕ್ರೀಡೆ

VIDEO: ನ್ಯೂಜಿಲೆಂಡ್ ಆಟಗಾರರ ಜತೆಗೆ ಫುಟ್ಬಾಲ್ ಆಡಿದ ಟೀಂ ಇಂಡಿಯಾ ಆಟಗಾರರು…

ವೆಲ್ಲಿಂಗ್ಟನ್: ಭಾರತ-ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಪಂದ್ಯ ರದ್ದಾಗುತ್ತಿದ್ದಂತೆ, ಎರಡೂ ದೇಶಗಳ ತಂಡದ ಆಟಗಾರರು ಫುಟ್​​ಬಾಲ್ ಆಡಿ, ಎಂಜಾಯ್ ಮಾಡಿದ್ದಾರೆ. ಇದೀಗ ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಭಾರತ-ನ್ಯೂಜಿಲೆಂಡ್​ ನಡುವಣ ಮೊದಲ ಟಿ-20 ಪಂದ್ಯ ವೆಲ್ಲಿಂಗ್ಟನ್ ಮೈದಾನದಲ್ಲಿ ನಿಗಧಿಯಾಗಿತ್ತು. ಆದರೆ ವಿಪರೀತ ಮಳೆಯಿಂದಾಗಿ ಟಾಸ್​ ಪ್ರಕ್ರಿಯೆ ಕೂಡಾ ನಡೆಯದೆ ಮೊದಲ ಪಂದ್ಯ ರದ್ದಾಗಿದೆ. ಪಂದ್ಯ ರದ್ದಾಗುತ್ತಿದ್ದಂತೆ ಎರಡೂ ತಂಡಗಳ ನಾಯಕರು ಹಸ್ತಲಾಘವ ಮಾಡಿಕೊಂಡರು.

ಟಿ-20 ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ, ಟೀಮ್ ಮ್ಯಾನೇಜ್​ಮೆಂಟ್ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆ.ಎಲ್​.ರಾಹುಲ್​ಗೆ ವಿಶ್ರಾಂತಿ ನೀಡಿತ್ತು. ಹೀಗಾಗಿ ಯುವ ಆಟಗಾರರಾದ ಶುಭಮನ್ ಗಿಲ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್ ಮುಂತಾದ ಆಟಗಾರರು ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ದರು. (ಏಜೆನ್ಸೀಸ್)