ಕ್ರೀಡೆ

ಚೆಸ್​ ವಿಶ್ವಕಪ್​ನ ಫೈನಲ್​ಗೆ ತಲುಪಿದ ಭಾರತದ ಪ್ರಜ್ಞಾನಂದ

ನವದೆಹಲಿ: ಭಾರತದ ಯುವ ಆಟಗಾರ ಆರ್​. ಪ್ರಜ್ಞಾನಂದ ಚೆಸ್​ ವಿಶ್ವಕಪ್​ ಟೂರ್ನಿಯ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ. ಅಜೇರ್​ಬೈಜಾನ್​ನ ಬಾಕುನಲ್ಲಿ ಇಂದು ನಡೆದ ಪಂದ್ಯದಲ್ಲಿ ವಿಶ್ವದ ನಂ. 3 ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಅಂತಿಮ ಹಣಾಹಣಿಗೆ ಪ್ರವೇಶ ಪಡೆದಿದ್ದಾರೆ.

ಟೈಬ್ರೇಕ್‌ಗಳ ನಂತರ 3.5-2.5 ಅಂತರದಿಂದ ಅಮೆರಿಕದ ಆಟಗಾರನನ್ನು ಸೋಲಿಸುವಲ್ಲಿ ಭಾರತದ ಪ್ರಜ್ಞಾನಂದ ಯಶಸ್ವಿಯಾದರು. ಅಂತಿಮ ಹಣಾಹಣಿಯಲ್ಲಿ ಇವರು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎದುರಿಸಲಿದ್ದಾರೆ.

17 ವರ್ಷದ ಪ್ರಜ್ಞಾನಂದ ಮುಂದಿನ ವರ್ಷದ ಅಭ್ಯರ್ಥಿಗಳ ಸ್ಪರ್ಧೆಯಲ್ಲಿ ಈಗಾಗಲೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಹೀಗೆ ಸ್ಥಾನ ಪಡೆದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.