ಕ್ರೀಡೆ

ನಾನು ಹೇಳಲು ತುಂಬಾ ಇದೆ, ಆದ್ರೆ ಮೌನವಾಗಿದ್ದೇನೆ; ಪಾಕ್​ ಕ್ರಿಕೆಟಿಗನಿಂದ ದೂರವಾದ ಸಾನಿಯಾ

ನವದೆಹಲಿ: ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ  ಸುದ್ದಿಯಲ್ಲಿರುವುದು ಗೊತ್ತೇ ಇದೆ. ಒಂದು ಕಾಲದಲ್ಲಿ ತಮ್ಮ ಆಟದ ಶೈಲಿಯಿಂದಲೇ ಸುದ್ದಿಯಾಗಿದ್ದ ಸಾನಿಯಾ ಈಗ ತಮ್ಮ ವೈಯಕ್ತಿಕ ಜೀವನದಲ್ಲೂ ಸುದ್ದಿಯಾಗಿದ್ದಾರೆ.

ಸಾನಿಯಾ, ಶೋಯೆಬ್ 2010ರಲ್ಲಿ ವಿವಾಹವಾದರು. 2018 ರಲ್ಲಿ ಇಜಾನ್ ಮಿರ್ಜಾ ಮಲಿಕ್ ಎಂಬ ಮಗನಿಗೆ ಜನ್ಮ ನೀಡುತ್ತಾರೆ  . ಅದರ ನಂತರ ದಂಪತಿ  ವಿಚ್ಛೇದನ ಪಡೆದರು. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜತೆಗಿನ ಸಾನಿಯಾ ಬ್ರೇಕ್ಅಪ್ ಮತ್ತು ಶೋಯೆಬ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗಿದ್ದನು. ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ ಅವರ ಮಧ್ಯೆ ಮಧ್ಯೆ ಒಂದಿಲ್ಲೊಂದು ಪೋಸ್ಟ್​​ಗಳು ಎಲ್ಲರ ಗಮನ ಸೆಳೆಯುತ್ತಿವೆ.

ಶೋಯೆಬ್ ಜತೆಗಿನ ವಿಚ್ಛೇದನದ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದ ಸಾನಿಯಾ, ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷವಾಗಿ ಪೋಸ್ಟ್ ಮಾಡುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಇನ್​ಸ್ಟಾಗ್ರಾಮ್​ನಲ್ಲಿ ಕೆಲವು ಇಂಟರೆಸ್ಟಿಂಗ್ ಪೋಸ್ಟ್​​ಗಳನ್ನು ಮಾಡಿರುವ ಸಾನಿಯಾ, ಇತ್ತೀಚೆಗಷ್ಟೇ ಮತ್ತೊಂದು ಇಂಟರೆಸ್ಟಿಂಗ್ ಪೋಸ್ಟ್ ಮಾಡಿದ್ದಾರೆ.

'ನಾನು ಇದನ್ನು ಮೊದಲೇ ಹೇಳಲು ಬಯಸಲಿಲ್ಲ. ಆದರೆ ನಾನು ಹೇಳಿದ್ದು ಬಹಳ ಕಡಿಮೆ. ಹೇಳಲು ಬಹಳಷ್ಟಿದೆ. ಆದರೆ ನಾನು ಮೌನವಾಗಿದ್ದೇನೆ' ಎಂಬರ್ಥದ ಕೊಟೇಶನ್ ಹಂಚಿಕೊಂಡಿದ್ದಾರೆ. ಇದೀಗ ಪೋಸ್ಟ್ ವೈರಲ್ ಆಗುತ್ತಿದೆ.

ಈ ಪೋಸ್ಟ್ ಅನ್ನು ಏಕೆ ಮಾಡಿದ್ದೇನೆ ಎಂಬುದರ ಕುರಿತು ಸಾನಿಯಾ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ನೆಟ್ಟಿಗರು ಸಾನಿಯಾ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.