ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್ ಗುರುವಾರ ವಿದಾಯ ಘೋಷಿಸಿದ್ದಾರೆ. ಬಡತನದ ನಡುವೆ ಹಾಕಿ ಕ್ರೀಡೆಯಲ್ಲಿ ವಿಶೇಷ ಸಾಧನೆ ಮೆರೆದ ಹರಿಯಾಣದ ಸಣ್ಣ ಹಳ್ಳಿಯ ಬಂಡಿ ಎಳೆಯುವವನ ಪುತ್ರಿ, 16 ವರ್ಷಗಳ ವೃತ್ತೀಜಿವನ ಕೊನೆಗೊಳಿಸಿದ್ದಾರೆ.
30 ವರ್ಷದ ರಾಣಿ ಭಾರತ 254 ಪಂದ್ಯಗಳಲ್ಲಿ 205 ಗೋಲು ಸಿಡಿಸಿದ ಸಾಧಕಿಯಾಗಿದ್ದಾರೆ. 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ವಲ್ಪದರಲ್ಲೇ ಪದಕ ವಂಚಿತವಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಭಾರತ ತಂಡದ ನಾಯಕಿಯಾಗಿದ್ದರು. ರಾಣಿ ಅವರ 28 ನಂ. ಜೆರ್ಸಿ ನಿವೃತ್ತಿಗೊಳಿಸಿ ಗೌರವಿಸಿರುವ ಹಾಕಿ ಇಂಡಿಯಾ, 10 ಲಕ್ಷ ರೂ. ಬಹುಮಾನವನ್ನೂ ವಿತರಿಸಿದೆ.
"ಇದೊಂದು ಅಮೋ ಜರ್ನಿ. ಇಷ್ಟು ಸುದೀರ್ ಕಾಲ ಭಾರತ ಪರ ಆಡುವೆ ಎಂಬ ಯೋಚನೆಯನ್ನೂ ಮಾಡಿರಲಿಲ್ಲ. ಬಾಲ್ಯದಲ್ಲಿ ಸಾಕಷ್ಟು ಬಡತನ ನೋಡಿದ್ದೆ. ಆದರೆ ದೇಶವನ್ನು ಪ್ರತಿನಿಧಿಸುವುದೇ ಸದಾ ನನ್ನ ಧ್ಯೇಯವಾಗಿತ್ತು' ಎಂದು ರಾಣಿ ಹೇಳಿದ್ದಾರೆ. 2008ರಲ್ಲಿ 14ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಹಾಕಿ ಪ್ರವೇಶಿಸಿದ್ದ ರಾಣಿ, 2020ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ಚಂದ್ ಖೇಲ್ರತ್ನ ಪ್ರಶಸ್ತಿ ಪುರಸತರಾಗಿದ್ದರು. ಅದೇ ವರ್ಷ 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಕೂಡ ಒಲಿದಿತ್ತು.
ಇತ್ತೀಚೆಗೆ ಸಬ್-ಜೂನಿಯರ್ ಮಹಿಳಾ ತಂಡದ ಕೋಚ್ ಆಗಿ ನೇಮಕಗೊಂಡಿರುವ ರಾಣಿ ಮುಂಬರುವ ಮಹಿಳಾ ಹಾಕಿ ಇಂಡಿಯಾ ಲೀಗ್ನಲ್ಲಿ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳನ್ನು ಪ್ರತಿನಿಧಿಸಲಿರುವ ಸೂರ್ಮ ಹಾಕಿ ಕ್ಲಬ್ನ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ರಾಣಿ ತಂದೆ ರಾಂಪಾಲ್ ಕೇವಲ 80 ರೂ. ದಿನಗೂಲಿ ಹೊಂದಿದ್ದ ಕಾರಣ ಹಾಕಿ ಸ್ಟಿಕ್ ಕೂಡ ತೆಗೆದುಕೊಡಲು ಅಶಕ್ತರಾಗಿದ್ದರು. ಆದರೆ ಮುರಿದ ಹಾಕಿ ಸ್ಟಿಕ್ ಒಂದರಲ್ಲೇ ಅಭ್ಯಾಸ ನಡೆಸಿದ್ದ ರಾಣಿ, 6ನೇ ವಯಸ್ಸಿನಲ್ಲೇ ಸ್ಥಳಿಯ ತಂಡವೊಂದರಲ್ಲಿ ಸ್ಥಾನ ಪಡೆದಿದ್ದರು. ರಾಣಿ ಹಾಕಿ ಆಡಲು ಅಜ್ಜ ಸ್ಫೂರ್ತಿ ತುಂಬಿದ್ದರು ಮತ್ತು ಅನಕ್ಷರಸ್ತರಾಗಿದ್ದ ಅವರು, ಮೊಮ್ಮಗಳ ಸಾಧನೆಯ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕ ಅದನ್ನು ಓದುವ ಸಲುವಾಗಿ ಹಿಂದಿ ಭಾಷೆಯ ಅಕ್ಷರಗಳನ್ನು ಕಲಿತಿದ್ದರು.