ಕ್ರೀಡೆ

10 ವರ್ಷವ ಏಳು ಬೀಳು...Border-Gavaskar ಟ್ರೋಫಿ ಶುರುವಾಗುವುದಕ್ಕೂ ಮುನ್ನ ಶಾಕಿಂಗ್​ ಪೋಸ್ಟ್​ ಹಂಚಿಕೊಂಡ Virat Kohli

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್​, ದಾಖಲೆಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ (Virat Kohli)  ವಿಶ್ವದಾದ್ಯಂತರ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದು, ಇವರ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ ಕ್ಷಣಾರ್ಧದಲ್ಲೇ ವೈರಲ್​ ಆಗುತ್ತವೆ. ಪೋಸ್ಟ್​ ಒಂದನ್ನು ಕೋಟಿಗಟ್ಟಲೇ ಸಂಭಾವನೆ ಪಡೆಯುವ ವಿರಾಟ್​ ಬಾರ್ಡರ್​-ಗವಾಸ್ಕರ್​ ಟ್ರೋಫಿಗೂ ಮುನ್ನ ಅಭಿಮಾನಿಗಳ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ್ದು, ಚಿಂತೆಗೆ ದೂಡಿದೆ.

2024 ಯಾಕೋ ವಿರಾಟ್​ ಕೊಹ್ಲಿ (Virat Kohli) ಅಂದುಕೊಂಡಂತೆ ನಡೆಯುತ್ತಿಲ್ಲ. ಐಪಿಎಲ್​ (IPl) ಹಾಗೂ ಟಿ20 ವಿಶ್ವಕಪ್​ನಲ್ಲಿ (T20 WorldCup) ಉತ್ತಮ ಪ್ರದರ್ಶನ ನೀಡಿದರಾದರು ಟೆಸ್ಟ್​ (Test) ಮತ್ತು ಏಕದಿನ ಮಾದರಿಯಲ್ಲಿ (ODI Format) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಬಳಿಕ ಟಿ20ಯಂತೆ ಟೆಸ್ಟ್​ ಮಾದರಿಗೂ ವಿರಾಟ್​ ನಿವೃತ್ತಿ ಘೋಷಿಸುತ್ತಾರೆ ಎಂದು ಅಂದಾಜಿಸುತ್ತಿರುವ ನಡುವೆಯೇ ಕೊಹ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಈ ಪೋಸ್ಟ್ ಓದಿದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಪೋಸ್ಟ್​ನಲ್ಲಿ ಅಂತಹದೇನಿದೆ? 

ವಿರಾಟ್​ ಕೊಹ್ಲಿ ಕ್ರಿಕೆಟ್​ ಜತೆಗೆ ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ Wrogn ಹೆಸರಿನ ಬ್ರಾಂಡ್​ಅನ್ನು ಸಹ ನಡೆಸುತ್ತಿದ್ದಾರೆ. ಈ ಸಂಸ್ಥೆ ಶುರುವಾಗಿ 10 ವರ್ಷಗಳಾಗಿದ್ದು, ಈ ಹತ್ತು ವರ್ಷಗಳ ಪಯಣದಲ್ಲಿ ಏಳು, ಬೀಳುಗಳ ಬಗ್ಗೆ ಕೊಹ್ಲಿ ಬರೆದುಕೊಂಡಿದ್ದಾರೆ. ಆದರೆ ಆರಂಭದಲ್ಲಿ ಕೊಹ್ಲಿಯ ಈ ಪೋಸ್ಟ್ ನೋಡಿದ ಅಭಿಮಾನಿಗಳು, ಈ ಪೋಸ್ಟ್ ಅನ್ನು ಪೂರ್ಣವಾಗಿ ಓದದೆ, ಕೊಹ್ಲಿ ಕ್ರಿಕೆಟ್​ಗೆ ವಿದಾಯ ಹೇಳಿರಬಹುದೆಂದು ಬಾವಿಸಿ, ಕೊಹ್ಲಿ ಮಾಡಿರುವ ಪೋಸ್ಟ್​ಗೆ ತರೆಹವಾರಿ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಅಭಿಮಾನಿಗಳು ಆತಂಕ ಬೀಳಲು ಕಾರಣವೂ ಇದೆ, ಅದೇನೆಂದರೆ ಈ ಹಿಂದೆ ಕೊಹ್ಲಿ ತಮ್ಮ ಟಿ20 ನಾಯಕತ್ವಕ್ಕೆ ವಿದಾಯ ಹೇಳುವ ಸಮಯದಲ್ಲಿ ಇದೇ ರಿತಿಯ ವೈಟ್ ಬ್ಯಾಕ್ ಗ್ರೌಂಡ್ ಇರುವ ಪೋಸ್ಟ್​ವೊಂದನ್ನು ಹಂಚಿಕೊಳ್ಳುವ ಮೂಲಕ ತಾನು ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದರು. ಕೊಹ್ಲಿಯ ಈ ನಿರ್ಧಾರದ ಪೋಸ್ಟ್​ ಅಭಿಮಾನಿಗಳನ್ನು ಆಘಾತಕ್ಕೆ ತಳ್ಳಿತ್ತು. ಇದೀಗ ಇದೇ ರೀತಿಯ ಪೋಸ್ಟ್​ ಮಾಡಿರುವ ಕೊಹ್ಲಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆದರೆ ಕೊಹ್ಲಿ ಮಾಡಿರುವ ಪೂರ್ಣ ಪೋಸ್ಟ್ ಓದಿದ ಬಳಿಕ ಅಭಿಮಾನಿಗಳು ನಿರಾಳರಾಗಿದ್ದಾರೆ.