ನವದೆಹಲಿ: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿದ್ದಾರೆ. ನೀರಜ್ ಎಲ್ಲಿ ಕಂಡರೂ ಸೆಲ್ಫಿ, ಆಟೋಗ್ರಾಫ್‌ಗಾಗಿ ಅಭಿಮಾನಿಗಳುಕಾಯುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ನೀರಜ್ ಜೊತೆ ಇಬ್ಬರು ಮಹಿಳೆಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಫೋಟೋ ಕ್ಲಿಕ್ಕಿಸಿಕೊಂಡ ನಂತರ ನಿಮ್ಮ ಫೋನ್ ನಂಬರ್ ನನಗೆ ಕೊಡುತ್ತೀರಾ? ಎಂದು ಯುವತಿ ನೀರಜ್‌ನನ್ನು ಕೇಳಿದಳು. ನೀರಜ್ ಈ ಅನಿರೀಕ್ಷಿತ ಪ್ರಶ್ನೆಯಿಂದ ಸ್ವಲ್ಪ ಗೊಂದಲಕ್ಕೊಳಗಾದರು ಮತ್ತು ನಂತರ ನಿಧಾನವಾಗಿ ಪ್ರಶ್ನೆಯನ್ನು ಬಿಟ್ಟು ನಗುತ್ತಾ ಮುಂದೆ ಸಾಗುತ್ತಾರೆ. ಈ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಇದು ಯಾವಾಗ ಮತ್ತು ಎಲ್ಲಿ ಸಂಭವಿಸಿತು ಎಂಬುದು ತಿಳಿದಿಲ್ಲ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವು ನೆಟಿಜನ್‌ಗಳು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ಸಂದರ್ಭದಲ್ಲಿ ನಡೆದಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ವಿಷಯ ಶೂಟರ್ ಮನು ಭಾಕರ್ ಗೆ ತಿಳಿದರೆ ಚೆನ್ನಾಗಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಒಲಿಂಪಿಕ್ಸ್ ವೇಳೆ ನೀರಜ್ ಮತ್ತು ಮನು ಹತ್ತಿರವಾಗಿದ್ದರು ಮತ್ತು ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಗಳು ಬಂದಿದ್ದವು. ನೀರಜ್ ಮತ್ತು ಮನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಈ ಹಿಂದೆ ಮನು ಭಾಕರ್ ಪ್ರತಿಕ್ರಿಯೆ ನೀಡಿದ್ರು.. ಹಾಗಂತ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ನೀರಜ್ ಬಗ್ಗೆ ಮಾತನಾಡುತ್ತಾ, ಅವರು ಒಬ್ಬ ಮಹಾನ್ ವ್ಯಕ್ತಿ ಮತ್ತು ಅನೇಕ ಜನರಿಗೆ ಸ್ಫೂರ್ತಿ ಎಂದು ಹೊಗಳಿದರು.