Gautam Gambhir: ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಕಿಡಿಕಾರಿರುವ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ, ಗೌತಿ ಕೋಚ್ ಆದ ಬಳಿಕ ಹಿರಿಯ ಆಟಗಾರರನ್ನು ತಂಡದಿಂದ ಹೊರ ಕಳುಹಿಸಿದ್ದಾರೆ ಎಂದು ಗಂಭೀರ ಆರೋಪ ಎಸಗಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಮೆಚ್ಚುಗೆ ಗಳಿಸಿದ ಖ್ಯಾತ ಗಾಯಕಿ ಮೈಥಿಲಿ ಠಾಕೂರ್ ಬಿಹಾರ ಚುನಾವಣಾ ಕಣಕ್ಕೆ! Singer Maithili Thakur
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಕ್ರಿಕೆಟಿಗರ ನಿವೃತ್ತಿಯ ಬೆನ್ನಲ್ಲೇ ಈ ಹೇಳಿಕೆ ಬಂದಿರುವುದು ಗಮನಾರ್ಹ. ಕಳೆದ ವರ್ಷ ಟೀಮ್ ಇಂಡಿಯಾ ಕೈಗೊಂಡ ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇನ್ನು ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಮೇ 2025ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಕೆಲವೇ ವಾರಗಳು ಬಾಕಿ ಇರುವಾಗ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
'ಇನ್ಸೈಡ್ ಸ್ಪೋರ್ಟ್'ಗೆ ಮಾತನಾಡಿದ ತಿವಾರಿ, "ತಮ್ಮ ಮುಂದಾಳತ್ವ ಮತ್ತು ನಿರ್ಧಾರಗಳಿಗೆ ಯಾವುದೇ ಅಡಚಣೆ ಉಂಟಾಗಬಾರದು. ಇವರಾರು ಅದನ್ನು ಪ್ರಶ್ನಿಸಬಾರದು ಎಂಬ ನಿಟ್ಟಿನಲ್ಲಿ ಗಂಭೀರ್ ಹಿರಿಯ ಆಟಗಾರರನ್ನು ತಂಡದಿಂದ ಹೊರಗುಳಿಯುವಂತೆ ಮಾಡಿದ್ದಾರೆ. ಇದನ್ನು ಗಂಭೀರ್ ಅವರು ಕೋಚ್ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಗಮನಿಸಿದ್ದೇನೆ. ಸಾಕಷ್ಟು ವಿವಾದಗಳು ಕೂಡ ನಡೆದಿವೆ. ಹಲವಾರು ವಿಷಯಗಳು ನಡೆಯುತ್ತಿವೆ. ಅಸಲಿಗೆ ಅದ್ಯಾವುದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯ ಬೆಳವಣಿಗೆ ಅಲ್ಲ" ಎಂದಿದ್ದಾರೆ.
"ಅವರು ಕೋಚ್ ಆದಾಗಿನಿಂದ ನೋಡುವುದಾದರೆ, ಅಶ್ವಿನ್, ವಿರಾಟ್ ಹಾಗೂ ಕೊಹ್ಲಿ ನಿವೃತ್ತಿ ಪಡೆದರು. ಇನ್ನು ಸಾಕಷ್ಟು ವಿಚಾರಗಳು ಆಂತರಿಕವಾಗಿ ನಡೆದಿವೆ. ಉದಾಹರಣೆಗೆ, ಕೆಲವು ಆಟಗಾರರು ದಿಢೀರ್ ಎಂಬಂತೆ ತಂಡಕ್ಕೆ ಸೇರ್ಪಡೆಯಾಗುತ್ತಾರೆ. ಇನ್ನೂ ಕೆಲವರು ಪ್ಲೇಯಿಂಗ್ 11 ಅಲ್ಲಿ ಇರುತ್ತಾರೆ. ಇಂತಹ ಅನೇಕ ವಿಷಯಗಳು ನನ್ನ ಗಮನಕ್ಕೆ ಬಂದಿವೆ. ಅಂತಹ ವಾತಾವರಣ ಅಲ್ಲಿ ಸೃಷ್ಟಿಯಾಗಿದೆ. ವಿರಾಟ್-ರೋಹಿತ್ ಭಾರತೀಯ ಕ್ರಿಕೆಟ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಶ್ರೇಷ್ಠ ಆಟಗಾರರು. ತಮ್ಮಿಂದ ಏನೆಲ್ಲ ಸಾಧ್ಯವೋ, ಅಷ್ಟನ್ನೂ ಕೊಟ್ಟಿದ್ದಾರೆ" ಎಂದರು,(ಏಜೆನ್ಸೀಸ್).