ಮುಲ್ತಾನ್: ಎಡಗೈ ಬ್ಯಾಟರ್ ಬೆನ್ ಡಕೆಟ್ (114 ರನ್, 129 ಎಸೆತ, 16 ಬೌಂಡರಿ) ಬಿರುಸಿನ ಶತಕ ನಡುವೆಯೂ ಮಧ್ಯಮ ಕ್ರಮಾಂಕ ಕುಸಿತದಿಂದ ಪ್ರವಾಸಿ ಇಂಗ್ಲೆಂಡ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಇನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ. ಪಂದ್ಯದ 2ನೇ ದಿನವಾದ ಬುಧವಾರ ಬೆಳಗ್ಗೆ 5 ವಿಕೆಟ್‌ಗೆ 259 ರನ್‌ಗಳಿಂದ ದಿನದ ಆಟ ಆರಂಭಿಸಿದ ಪಾಕ್, ಭೋಜನ ವಿರಾಮದ ಬಳಿಕ 123.3 ಓವರ್‌ಗಳಲ್ಲಿ 366 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು.
ಪ್ರತಿಯಾಗಿ ಓವರ್‌ಗೆ 5.12ರ ಸರಾಸರಿಯಲ್ಲಿ 3 ವಿಕೆಟ್‌ಗೆ 211 ರನ್‌ಗಳಿಸಿ ಸುಸ್ಥಿಯಲ್ಲಿದ್ದ ಇಂಗ್ಲೆಂಡ್, ಸ್ಪಿನ್ನರ್ ಸಾಜೀದ್ ಖಾನ್ (86ಕ್ಕೆ 4) ದಾಳಿಗೆ ದಿಢೀರ್ ಕುಸಿತ ಕಂಡಿತು. ದಿನದಂತ್ಯಕ್ಕೆ 53 ಓವರ್‌ಗಳಲ್ಲಿ 6 ವಿಕೆಟ್‌ಗೆ 239 ರನ್ ಕಲೆಹಾಕಿದ್ದು, ಸದ್ಯ 127 ರನ್ ಹಿನ್ನಡೆಯಲ್ಲಿದೆ. ಜೆಮಿ ಸ್ಮಿತ್ (12*) ಜತೆಯಾಗಿ ಬ್ರೈಡಸ್ ಕರ್ಸ್ (2*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಾಕ್: 123.3 ಓವರ್‌ಗಳಲ್ಲಿ 366 (ಸಲ್ಮಾನ್ ಆಘಾ 31, ಅಮಿರ್ ಜಮಾಲ್ 37,ನೂಮನ್ 32, ಜಾಕ್ ಲೀಚ್ 114ಕ್ಕೆ 4, ಕರ್ಸ್ 50ಕ್ಕೆ 3). ಇಂಗ್ಲೆಂಡ್: 6 ವಿಕೆಟ್‌ಗೆ 239 (ಕ್ರೌಲಿ 27, ಡಕೆಟ್ 114, ಪೋಪ್ 29, ರೂಟ್ 34, ಬ್ರೂಕ್ 9, ಸ್ಟೋಕ್ಸ್ 1, ಸ್ಮಿತ್ 12*, ಸಾಜೀದ್ 86ಕ್ಕೆ 4, ನೂಮನ್ 75ಕ್ಕೆ 2).