ಕ್ರೀಡೆ

ಗಿಲ್​ ಪಡೆಗೆ ಸೋಲಿನ ಕಹಿ; ಫಲಿಸಿತು ಬೆನ್​ ಡಕೆಟ್​ ಭರ್ಜರಿ ಶತಕ! ಇಂಗ್ಲೆಂಡ್​ಗೆ​ 5 ವಿಕೆಟ್​ಗಳ ಜಯ | IND vs ENG

ಮೋಹನ್​ ಶೆಟ್ಟಿ

IND vs ENG Test: ಪ್ರಸಕ್ತ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ ಐದು ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಇಂದು ಐದನೇ ಹಾಗೂ ಕೊನೆ ದಿನದಂದು ಭಾರತ ನೀಡಿದ್ದ 371 ರನ್​ ಗುರಿಯನ್ನು ಬೆನ್ನತ್ತಿದ ಆಂಗ್ಲರ ಪಡೆಗೆ ಬೆನ್​ ಡಕೆಟ್​ ಸಿಡಿಸಿದ ಭರ್ಜರಿ ಶತಕ ಗೆಲುವಿನ ಹಾದಿ ತೋರಿಸಿತು.

ಇಂಗ್ಲೆಂಡ್​ಗೆ ಬೆನ್​ ಡಕೆಟ್​ ಶತಕ, ಜ್ಯಾಕ್​ ಕ್ರಾಲಿ ಮತ್ತು ಜೋ ರೂಟ್​ ಅರ್ಧ ಶತಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಿತು. ಕಡೆಯವರೆಗೂ ಕ್ರೀಸ್​ಗೆ ಅಂಟಿ ನಿಂತ ರೂಟ್​, ಜೇಮಿ ಸ್ಮಿತ್​ ಜೊತೆಗೆ ಅಜೇಯರಾಗಿ ಉಳಿದರು. ಇಂಗ್ಲೆಂಡ್​ ಬ್ಯಾಟರ್​ಗಳ ವಿಕೆಟ್​ ಕಬಳಿಸಲು ತೀರ ಪರದಾಡಿದ ಟೀಮ್ ಇಂಡಿಯಾ ಬೌಲರ್​ಗಳು, ಬೌಲಿಂಗ್​ನಲ್ಲಿ ಕಮಾಲ್ ಮಾಡಲು ವಿಫಲರಾದರು.

ಅಂತಿಮವಾಗಿ ಐದು ವಿಕೆಟ್​ಗಳಿಂದ ಇಂಗ್ಲೆಂಡ್​ ಜಯ ಸಾಧಿಸಿದರೆ, ಅತ್ತ ಗಿಲ್​ ಪಡೆ ಮೊದಲ ಟೆಸ್ಟ್​ನಲ್ಲೇ ಭಾರೀ ಮುಖಭಂಗ ಅನುಭವಿಸಿದೆ. ಇದು ಭಾರತೀಯ ಕ್ರಿಕೆಟ್​ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.