ಕ್ರೀಡೆ

ನಿಶ್ಚಿತಾರ್ಥ ಮಾಡಿಕೊಂಡ ಮಹಿಳಾ ಕ್ರಿಕೆಟ್​​​ ಆಟಗಾರ್ತಿಯರು; ಇದು ಇಂಗ್ಲೆಂಡ್​-ಆಸ್ಟ್ರೇಲಿಯಾ ತಂಡದ ಸಲಿಂಗಿ ಜೋಡಿ ಪ್ರೀತಿ

ಇಂಗ್ಲೆಂಡ್​​: ಇಂಗ್ಲೆಂಡ್​​, ಆಸ್ಟ್ರೇಲಿಯಾ ಮಹಿಳಾ ಸ್ಟಾರ್​ ಕ್ರಿಕೆಟಿಗರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್​ ವಿಕೆಟ್​ ಕೀಪರ್​ ಆಮಿ ಜೋನ್ಸ್​ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್​​​ ಆಟಗಾರ್ತಿ ಪೈಪಾ ಕ್ಲಿಯರಿ ಪ್ರೀತಿಸುತ್ತಿದ್ದಾರೆ.

ಉಂಗುರಗಳನ್ನು ಬದಲಾಯಿಸಿಕೊಂಡ ಈ ಸಲಿಂಗ ಜೋಡಿ ತಮ್ಮ ಸಂಬಂಧದ ಕುರಿತಾಗಿ ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ. ಷಾಂಪೇನ್​​ ತುಂಬಿದ ಗ್ಲಾಸ್​ ಹಿಡಿದುಕೊಂಡು ‘‘ಚಿಯರ್ಸ್​ ಟು ಫಾರೆವರ್​​’’ ಎಂದು ಬರೆದುಕೊಂಡಿದ್ದಾರೆ.

ಆಮಿ ಜೋನ್ಸ್ 2019 ರಲ್ಲಿ ಇಂಗ್ಲೆಂಡ್​ನ ಕ್ರಿಕೆಟ್​ ಆಟಗಾರ್ತಿ. 1993 ಜೂನ್ 13ರಂದು ವೆಸ್ಟ್ ಮಿಡ್ಲ್ಯಾಂಡ್ಸ್​ನಲ್ಲಿ ಜನಿಸಿದರು. 31 ವರ್ಷ ವಯಸ್ಸಿನ ಅವರು ಇಂಗ್ಲೆಂಡ್​​ ತಂಡದ ಮಹಿಳಾ ಟೆಸ್ಟ್ ಮತ್ತು ODI ಪಂದ್ಯಗಳಲ್ಲಿ ಆಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ 6 ಟೆಸ್ಟ್ ಮತ್ತು 91 ODI ಪಂದ್ಯಗಳನ್ನು ಆಡಿದ್ದಾರೆ. ಎರಡು ಆಟಗಳಲ್ಲಿ 116 ಮತ್ತು 1951 ರನ್ ಗಳಿಸಿದ್ದಾರೆ.

ಪೈಪಾ ಕ್ಲಿಯರಿ 1996 ಜುಲೈ 17ರಲ್ಲಿ ಜನಿಸಿದರು. ಆಮಿಗಿಂತ 3 ವರ್ಷ ಚಿಕ್ಕವರು. ಈಗಾಗಲೇ ಪೈಪಾರವರು ಸ್ಕಾರ್ಚರ್ಸ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ವುಮೆನ್‌ ತಂಡಗಳಿಗಾಗಿ ಆಡಿದ್ದಾರೆ. ಇವರು ಬಲಗೈ ಮಧ್ಯಮ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

ಆಮಿಯವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್‌ಗಾಗಿ ಆಡುತ್ತಿರುವಾಗ ಆಸ್ಟ್ರೇಲಿಯಾದ ಪೈಪಾ ಕ್ಲಿಯರಿ ಅವರನ್ನು ಭೇಟಿಯಾದರು. ಇವರ ಭೇಟಿ ಕೊನೆಗೆ ಸ್ನೇಹಕ್ಕೆ ತಿರುಗಿತು. ನಂತರ ಪ್ರೀತಿಯಾಗಿ ಈ ಜೋಡಿ ಈಗ ಒಂದಾಗಿ ಜೀವನ ನಡೆಸಲು ಸಿದ್ಧರಾಗಿದ್ದಾರೆ.