ಮ್ಯಾಂಚೆಸ್ಟರ್: ಮಳೆ ಅಡಚಣೆ ಎದುರಿಸಿದ ಟೆಸ್ಟ್ ಸರಣಿಯ ನಂತರ ಇಂಗ್ಲೆಂಡ್ ಮತ್ತು ಪ್ರವಾಸಿ ಪಾಕಿಸ್ತಾನ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಗೆ ವೇದಿಕೆ ಸಜ್ಜಾಗಿದೆ. ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಶುಕ್ರವಾರ ಮೊದಲ ಟಿ20 ಪಂದ್ಯ ನಡೆಯಲಿದೆ.
ಕರೊನಾ ಕಾಲದಲ್ಲಿ ಆಡಿದ 3 ಸರಣಿಗಳಲ್ಲೂ (ವಿಂಡೀಸ್ ವಿರುದ್ಧ ಟೆಸ್ಟ್, ಐರ್ಲೆಂಡ್ ವಿರುದ್ಧ ಏಕದಿನ, ಪಾಕ್ ವಿರುದ್ಧ ಟೆಸ್ಟ್) ಜಯ ದಾಖಲಿಸಿರುವ ಇಂಗ್ಲೆಂಡ್ ತಂಡ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದ್ದರೆ, ಪಾಕ್ ತಂಡ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದೆ. ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಿದ್ದ ತಂಡದ ಯಾವ ಆಟಗಾರರೂ ಇಂಗ್ಲೆಂಡ್ ಟಿ20 ತಂಡದಲ್ಲಿಲ್ಲ.
ಇದು ಟೆಸ್ಟ್ ಮಾನ್ಯತೆಯ ತಂಡಗಳ ನಡುವೆ 169 ದಿನಗಳ ನಂತರ ನಡೆಯುತ್ತಿರುವ ಅಂತಾರಾಷ್ಟ್ರೀಯ ಟಿ20 ಪಂದ್ಯವೆನಿಸಿದೆ. ಮಾರ್ಚ್ 11ರಂದು ಕೊನೆಯದಾಗಿ ಬಾಂಗ್ಲಾದೇಶ-ಜಿಂಬಾಬ್ವೆ ನಡುವೆ ಟಿ20 ಪಂದ್ಯ ನಡೆದಿತ್ತು.
ಇದನ್ನೂ ಓದಿ: ಪೇಪರ್ ಹಾಕುತ್ತಿದ್ದ ಹುಡುಗನಿಗೆ ಈಗ ಖೇಲ್ರತ್ನ ಗೌರವ
ಸ್ಫೋಟಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಅವರು ಈ ವಾರ ಜೈವಿಕ ಸುರಕ್ಷಾ ವಾತಾವರಣದೊಳಗೆ ಅಭ್ಯಾಸದ ವೇಳೆ ಗಾಯಗೊಂಡಿದ್ದರು.
ತಂಡಗಳು:
ಇಂಗ್ಲೆಂಡ್: ಇವೊಯಿನ್ ಮಾರ್ಗನ್ (ನಾಯಕ), ಮೊಯಿನ್ ಅಲಿ, ಜಾನಿ ಬೇರ್‌ಸ್ಟೋ (ವಿ.ಕೀ), ಟಾಮ್ ಬಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಟಾಮ್ ಕರ‌್ರನ್, ಜೋಯಿ ಡೆನ್ಲಿ, ಲೆವಿಸ್ ಗ್ರೇಗೋರಿ, ಕ್ರಿಸ್ ಜೋರ್ಡಾನ್, ಸಕಿಬ್ ಮಹಮೂದ್, ಡೇವಿಡ್ ಮಲಾನ್, ಆದಿಲ್ ರಶೀದ್, ಡೇವಿಡ್ ವಿಲ್ಲಿ.
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಖರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರವ್ೂ, ಇಫ್ತಿಕಾರ್ ಅಹ್ಮದ್, ಇಮಾದ್ ವಾಸಿಂ, ಖುಶ್‌ದಿಲ್ ಷಾ, ಮೊಹಮದ್ ಹಫೀಜ್, ಮೊಹಮದ್ ಹಸ್‌ನೈನ್, ಮೊಹಮದ್ ರಿಜ್ವಾನ್, ಮೊಹಮದ್ ಆಮೀರ್, ನಸೀಮ್ ಷಾ, ರ್ಸ್ರಾಜ್ ಅಹ್ಮದ್, ಶಾದಾಬ್ ಖಾನ್, ಶಹೀನ್ ಷಾ ಅಫ್ರಿದಿ, ಶೋಯಿಬ್ ಮಲಿಕ್, ವಹಾಬ್ ರಿಯಾಜ್.
ಪಂದ್ಯ ಆರಂಭ: ರಾತ್ರಿ 10.30
ನೇರಪ್ರಸಾರ: ಸೋನಿ ಸಿಕ್ಸ್