ಕ್ರೀಡೆ

ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್​ಗೆ ಶಾಕ್​! ಸ್ಟಾರ್​ ಆಲ್‌ರೌಂಡರ್ ಔಟ್: ಅಷ್ಟಕ್ಕೂ ಆಗಿದ್ದೇನು.? | Ben Stokes

Ben Stokes: ಗುರುವಾರ (ಜು.31) ದಿ ಓವಲ್‌ನಲ್ಲಿ ಮೈದಾನದಲ್ಲಿ ನಡೆಯಲಿರುವ ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ನಾಯಕ ಬೆನ್ ಸ್ಟೋಕ್ಸ್ ಭುಜದ ಗಾಯದಿಂದಾಗಿ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿರುವುದಾಗಿ ವರದಿಯಾಗಿದೆ.

ನಿರ್ಣಾಯಕ ಪಂದ್ಯಕ್ಕೂ ಮುನ್ನ ಸ್ಟೋಕ್ಸ್ ಅಲಭ್ಯತೆ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ತಂಡವನ್ನು ಓಲಿ ಪೋಪ್ ಮುನ್ನಡೆಸಲಿದ್ದಾರೆ. ಐದನೇ ಟೆಸ್ಟ್​ಗೆ ಇಂಗ್ಲೆಂಡ್ ನಾಲ್ಕು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಸ್ಟೋಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್ ಮತ್ತು ಬ್ರೈಡನ್ ಕಾರ್ಸೆ ಸ್ಥಾನದಲ್ಲಿ, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಜೇಮೀ ಓವರ್ಟನ್ ಮತ್ತು ಜೋಶ್ ಟಂಗ್ ಆಡಲಿದ್ದಾರೆ.

ಈ ಸರಣಿಯಲ್ಲಿ ಸ್ಟೋಕ್ಸ್ 17 ವಿಕೆಟ್‌ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​​ ಆಗಿದ್ದು, ಒಂದು ಶತಕ ಸೇರಿದಂತೆ 304 ರನ್‌ ಗಳಿಸಿ ಬ್ಯಾಂಟಿಗ್​​​ನಲ್ಲೂ ತಂಡಕ್ಕೆ ನೆರವಾಗಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ನಂತರ ಸರಣಿಯಲ್ಲಿ ಇಂಗ್ಲೆಂಡ್​​ 2-1 ಅಂತರದಲ್ಲಿ ಮುನ್ನಡೆಯಲ್ಲಿದೆ. ಆಲ್‌ರೌಂಡರ್ ಜಾಕೋಬ್ ಬೆಥೆಲ್ ಸೇರ್ಪಡೆ ಆಂಗ್ಲರ ಆತ್ಮ ವಿಶ್ವಾಸ ಹೆಚ್ಚಿಸಿದ್ದು, ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರೊಂದಿಗೆ, ಆತಿಥೇಯ ತಂಡದ ಏಕೈಕ ಸ್ಪಿನ್ ಆಯ್ಕೆಯೂ ಆಗಿದ್ದಾರೆ. (ಏಜೆನ್ಸೀಸ್​​)