ಸೌಥಾಂಪ್ಟನ್: ವೆಸ್ಟ್ ಇಂಡೀಸ್ ವೇಗಿಗಳ ದಾಳಿಗೆ ಮೊದಲ ಇನಿಂಗ್ಸ್ನಲ್ಲಿ ಆಘಾತ ಅನುಭವಿಸಿ ಹಿನ್ನಡೆ ಅನುಭವಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರತಿಹೋರಾಟದ ಸೂಚನೆ ನೀಡಿದೆ. ದ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 114 ರನ್ ಹಿನ್ನಡೆಯೊಂದಿಗೆ 1 ವಿಕೆಟ್ಗೆ 15 ರನ್ಗಳಿಂದ ನಾಲ್ಕನೇ ದಿನದಾಟ ಆರಂಭಿಸಿರುವ ಇಂಗ್ಲೆಂಡ್ ದಿನದಾಟದ ಭೋಜನ ವಿರಾಮದ ವೇಳೆಗೆ 1 ವಿಕೆಟ್ಗೆ 79 ರನ್ ಪೇರಿಸಿದ್ದು, 35 ರನ್ ಹಿನ್ನಡೆಯಲ್ಲಿದೆ.
10 ರನ್ಗಳಿಂದ ರೋರಿ ಬರ್ನ್ಸ್ ಹಾಗೂ 5 ರನ್ಗಳಿಂದ ಇನಿಂಗ್ಸ್ ಆರಂಭಿಸಿದ ಡೊಮಿನಿಕ್ ಸಿಬ್ಲೆ ಜೋಡಿ ದಿನದ ಆರಂಭದಲ್ಲೇ ಯಾವುದೇ ಅಪಾಯವಾಗಂತೆ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ಮೊದಲ ವಿಕೆಟ್ಗೆ 72 ರನ್ ಪೇರಿಸಿದ್ದ ಈ ಜೋಡಿಯನ್ನು ವಿಂಡೀಸ್ ವೇಗಿ ರೋಸ್ಟನ್ ಚೇಸ್ ಬೇರ್ಪಡಿಸಿದರು. ಬರ್ನ್ಸ್ ಚೇಸ್ ಎಸೆತದಲ್ಲಿ ಕ್ಯಾಂಪ್ಬೆಲ್ಗೆ ಕ್ಯಾಚ್ ನೀಡಿದರು. ಸಿಬ್ಲೆ (31ರನ್) ಹಾಗೂ ಡೆನ್ಲೆ (1) ವಿಕೆಟ್ ಕ್ರೀಸ್ನಲ್ಲಿದ್ದಾರೆ. ಇಂಗ್ಲೆಂಡ್ ಮೊದಲ ಇನಿಂಗ್ಸ್ 204 ರನ್ಗಳಿಸಿದ್ದರೆ, ವೆಸ್ಟ್ ಇಂಡೀಸ್ 318 ರನ್ಗಳಿಸಿ 114 ರನ್ ಮುನ್ನಡೆ ಸಾಧಿಸಿತ್ತು.
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ : 204 ಮತ್ತು ದ್ವೀತಿಯ ಇನಿಂಗ್ಸ್ : 4ನೇ ದಿನದಾಟದ ಭೋಜನ ವಿರಾಮದ ವೇಳೆಗೆ 1 ವಿಕೆಟ್ಗೆ 79 (ರೋರಿ ಬರ್ನ್ಸ್ 42, ಡೊಮಿನಿಕ್ ಸಿಬ್ಲೆ 31, ರೋಸ್ಟನ್ ಚೇಸ್ 17ಕ್ಕೆ 1). ವೆಸ್ಟ್ ಇಂಡೀಸ್ ಪ್ರಥಮ ಇನಿಂಗ್ಸ್: 318