IND vs ENG: ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಬೆನ್ ಸ್ಟೋಕ್ಸ್ ಪಡೆ 387 ರನ್ಗೆ ಆಲ್ಔಟ್ ಆಗಿದೆ. ತಂಡದ ಪರ ಜೋ ರೂಟ್ ಶತಕ ಬಾರಿಸಿದ್ದೇ ಆದರೂ ಉಳಿದ ಆಟಗಾರರು ರೂಟ್ ಇನ್ನಿಂಗ್ಸ್ಗೆ ಸಾಥ್ ನೀಡುವಲ್ಲಿ ವಿಫಲರಾದರು.
ಇದನ್ನೂ ಓದಿ:ತಿಂಗಳಿಗೆ 17 ಲಕ್ಷ ರೂ. ಆದಾಯ; ರಾಧಿಕಾ ಕೊಲೆಗೈದ ದೀಪಕ್ ಶ್ರೀಮಂತಿಕೆ ಗ್ರಾಮಸ್ಥರಿಗೆ ಗೊತ್ತಿತ್ತು | Radhika Yadav
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್, 387 ರನ್‌ಗಳಿಗೆ ಆಲೌಟ್ ಆಗಿದೆ. ಎರಡನೇ ದಿನದಾಟವನ್ನು 251/4 ಸ್ಕೋರ್‌ನೊಂದಿಗೆ ಆರಂಭಿಸಿದ ಇಂಗ್ಲೆಂಡ್ ಬ್ಯಾಟರ್ಗಳಿಗೆ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಬುಮ್ರಾ ದುಃಸ್ವಪ್ನದಂತೆ ಕಾಡಿದ್ದಾರೆ. ಬರೋಬ್ಬರಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಂಡದ ಪರ ಬುಮ್ರಾ ಮಿಂಚಿದ್ದಾರೆ.
ಉಳಿದಂತೆ ನಿತೀಶ್ ಕುಮಾರ್ ರೆಡ್ಡಿ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಪರ ಜೋ ರೂಟ್ ಶತಕದಾಟ (104) ತೋರುವ ಮೂಲಕ ಸ್ಟಾರ್ ಆಗಿ ಅಬ್ಬರಿಸಿದರೆ, ಕಾರ್ಸಿ (56) ಮತ್ತು ಜೇಮಿ ಸ್ಮಿತ್ (51) ಅರ್ಧಶತಕಗಳೊಂದಿಗೆ ಮಿಂಚಿದ್ದಾರೆ. ಇನ್ನು ಕ್ಯಾಪ್ಟನ್ ಬೆನ್ ಸ್ಟೋಕ್ಸ್ (44) ಮತ್ತು ಓಲಿ ಪೋಪ್ (44) ರನ್ ಗಳಿಸಿದ್ದಾರೆ,(ಏಜೆನ್ಸೀಸ್).