ಬೆಂಗಳೂರು: ನಾಯಕಿ ಸ್ಮತಿ ಮಂದನಾ (80 ರನ್, 50 ಎಸೆತ, 10 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಆಲ್ರೌಂಡರ್ ಎಲ್ಲಿಸ್ ಪೆರ‌್ರಿ (58 ರನ್, 37 ಎಸೆತ, 4 ಬೌಂಡರಿ, 4 ಸಿಕ್ಸರ್) ಬಿರುಸಿನ ಅರ್ಧಶತಕದ ನೆರವಿನಿಂದ ರನ್ ಮಳೆ ಹರಿಸಿದ ಆರ್‌ಸಿಬಿ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ಎದುರು 23 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಜಯದ ಹಳಿಗೆ ಮರಳಿದ ಸ್ಮತಿ ಮಂದನಾ ಪಡೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಮರಳಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಚರಣದ ಕೊನೇ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ನಾಯಕಿ ಅಲಿಸ್ಸಾ ಹೀಲಿ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಇಳಿದ ಆರ್‌ಸಿಬಿ, ಸ್ಮತಿ ಮಂದನಾ ಹಾಗೂ ಎಲ್ಲಿಸ್ ಪೆರ‌್ರಿ ಭರ್ಜರಿ ಜತೆಯಾಟದ ಬಲದಿಂದ 3 ವಿಕೆಟ್‌ಗೆ 198 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಾಯಕಿ ಅಲಿಸ್ಸಾ ಹೀಲಿ (55 ರನ್, 38 ಎಸೆತ, 7 ಬೌಂಡರಿ, 3 ಸಿಕ್ಸರ್) ಅರ್ಧಶತಕ ಹಾಗೂ ಆಲ್ರೌಂಡರ್ ದೀಪ್ತಿ ಶರ್ಮ (33) ಪ್ರತಿರೋಧದ ನಡುವೆಯೂ, ಯುಪಿ ವಾರಿಯರ್ಸ್ ತಂಡ 8 ವಿಕೆಟ್‌ಗೆ 175 ರನ್‌ಗಳಿಸಲಷ್ಟೇ ಶಕ್ತವಾಯಿತು.
ಆರ್‌ಸಿಬಿ: 3 ವಿಕೆಟ್‌ಗೆ 198 ( ಸ್ಮತಿ ಮಂದನಾ 80, ಎಸ್.ಮೇಘನಾ 28, ಎಲ್ಲಿಸ್ ಪೆರ‌್ರಿ 58, ರಿಚಾ ೋಷ್ 21*, ಸೋಫಿ ಡಿವೈನ್ 2*, ಸೋಫಿ ಎಕ್ಲೆಸ್ಟೋನ್ 22ಕ್ಕೆ 1, ದೀಪ್ತಿ ಶರ್ಮ 30ಕ್ಕೆ 1).
ಯುಪಿ ವಾರಿಯರ್ಸ್: 8 ವಿಕೆಟ್‌ಗೆ 175 (ಅಲಿಸ್ಸಾ ಹೀಲಿ 55, ಕಿರಣ್ ನವಗಿರೆ 18, ಚಾಮರಿ ಅಟ್ಟಪಟ್ಟು 8, ಗ್ರೇಸ್ ಹ್ಯಾರಿಸ್ 5, ಶ್ವೇತಾ 1, ದೀಪ್ತಿ 33, ಪೂನಂ 31, ಸೋಫಿ ಡಿವೈನ್ 37ಕ್ಕೆ 2, ವಾರೆಹ್ಯಾಂ 38ಕ್ಕೆ 2).