ಮ್ಯಾಂಚೆಸ್ಟರ್: ವಿಕೆಟ್ ಕೀಪರ್- ಬ್ಯಾಟರ್ ಜಾನಿ ಬೇರ್‌ಸ್ಟೋ (86* ರನ್, 60 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ಹ್ಯಾರಿ ಬ್ರೂಕ್ (67 ರನ್, 36 ಎಸೆತ, 5 ಬೌಂಡರಿ, 5 ಸಿಕ್ಸರ್) ಬಿರುಸಿನ ಅರ್ಧಶತಕದ ಬಲದಿಂದ ಆತಿಥೇಯ ಇಂಗ್ಲೆಂಡ್ ತಂಡ 2ನೇ ಟಿ20ಯಲ್ಲಿ ಪ್ರವಾಸಿ ನ್ಯೂಜಿಲೆಂಡ್ ಎದುರು 95 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಂಡಿದೆ.
ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 4 ವಿಕೆಟ್‌ಗೆ 198 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಪದಾರ್ಪಣಾ ಪಂದ್ಯದಲ್ಲೇ ಮಿಂಚಿದ ಗಸ್ ಅಟಕಿಸನ್ (20ಕ್ಕೆ4) ದಾಳಿಗೆ ತತ್ತರಿಸಿದ ಕಿವೀಸ್, 13.5 ಓವರ್‌ಗಳಲ್ಲಿ 103 ರನ್‌ಗಳಿಗೆ ಸರ್ವಪತನ ಕಂಡಿತು. ಮೂರನೇ ಟಿ20 ಪಂದ್ಯ ಭಾನುವಾರ ನಡೆಯಲಿದೆ.
ಇಂಗ್ಲೆಂಡ್: 4 ವಿಕೆಟ್‌ಗೆ 198 (ಬೇರ್‌ಸ್ಟೋ 86*, ವಿಲ್ ಜ್ಯಾಕ್ಸ್ 19, ಹ್ಯಾರಿ ಬ್ರೂಕ್ 67, ಮೊಯಿನ್ ಅಲಿ 6, ಜೋಸ್ ಬಟ್ಲರ್ 13*, ಇಶ್ ಸೋಧಿ 44ಕ್ಕೆ 2). ನ್ಯೂಜಿಲೆಂಡ್: 13.5 ಓವರ್‌ಗಳಲ್ಲಿ 103 (ಫಿನ್ ಅಲೆನ್ 3, ಟಿಮ್ ಸೈರ್ಟ್ 39, ಗ್ಲೆನ್ ಫಿಲಿಪ್ಸ್ 22, ಚಾಪ್‌ಮನ್ 15, ಗಸ್ ಅಟಕಿಸನ್ 20ಕ್ಕೆ4, ರಶೀದ್ 18ಕ್ಕೆ 2).
ಪಂದ್ಯಶ್ರೇಷ್ಠ: ಜಾನಿ ಬೇರ್‌ಸ್ಟೋ.