ಕ್ರೀಡೆ

ಇಂಗ್ಲೆಂಡ್​ ಗೆಲುವಿಗೆ ಅಡ್ಡಿಯಾದ ಮಳೆ, ಡ್ರಾ ಹಾದಿಯಲ್ಲಿ ಪಂದ್ಯ

ಸೌಥಾಂಪ್ಟನ್​: ಇನಿಂಗ್ಸ್​ ಗೆಲುವಿನ ಕನಸಿನಲ್ಲಿರುವ ಅತಿಥೇಯ ಇಂಗ್ಲೆಂಡ್​ ತಂಡಕ್ಕೆ ಮಳೆ ಅಡ್ಡಿಯುಂಟಾಗಿದೆ. ರೋಸ್​ ಬೌಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದ ಅಂತಿಮ ದಿನದಾಟಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ಮಂಗಳವಾರ ದಿನದಾಟದ ಚಹಾ ವಿರಾಮದವರೆಗೂ ಒಂದೇ ಒಂದು ಎಸೆತ ಕೂಡ ಆಗಿಲ್ಲ. ಕೊನೇ ಅವಧಿ ಇರುವುದರಿಂದ ಪಂದ್ಯ ಬಹುತೇಕ ಡ್ರಾ ಹಾದಿಯಲ್ಲಿದೆ. ಪಾಕಿಸ್ತಾನ ತಂಡ ಇನಿಂಗ್ಸ್​ ಸೋಲು ತಪ್ಪಿಸಿಕೊಳ್ಳಲು 210 ರನ್​ ಗಳಿಸಬೇಕಿದೆ. ಸೋಮವಾರ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 2 ವಿಕೆಟ್​ಗೆ 100 ರನ್​ಗಳಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್​ 1-0 ಯಿಂದ ಮುನ್ನಡೆ ಸಾಧಿಸಿದೆ. ಪಂದ್ಯ ಡ್ರಾಗೊಂಡರೂ 10 ವರ್ಷಗಳ ಬಳಿಕ ತವರಿನಲ್ಲಿ ಪಾಕಿಸ್ತಾನ ಎದುರು ಸರಣಿ ಜಯಿಸಲಿದೆ. ಆದರೆ, 2-0 ಯಿಂದ ಸರಣಿ ಗೆಲುವಿನ ಇಂಗ್ಲೆಂಡ್​ ಕನಸಿಗೆ ಮಳೆ ಅಡ್ಡಿಯುಂಟಾಗಿದೆ.

ಇಂಗ್ಲೆಂಡ್​: 8 ವಿಕೆಟ್​ಗೆ 583 ಡಿಕ್ಲೇರ್​, ಪಾಕಿಸ್ತಾನ: 273 ಮತ್ತು 56 ಓವರ್​ಗಳಲ್ಲಿ 2 ವಿಕೆಟ್​ಗೆ 100 (ಅಜರ್​ ಅಲಿ 29 ಬ್ಯಾಟಿಂಗ್​)