ನವದೆಹಲಿ: ಬಾರ್ಬಡೋಸ್ನಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಪಂದ್ಯದ ವೇಳೆ ಡೇವಿಡ್ ಮಿಲ್ಲರ್ ಹೊಡೆದ ಸಿಕ್ಸರ್ ಶಾಟ್ನ ಬೌಂಡರಿ ಲೈನ್ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ರೋಚಕ ಕ್ಯಾಚ್ ಬಗ್ಗೆ ವ್ಯಾಪಕ ಅನುಮಾನಗಳು ವ್ಯಕ್ತವಾಗಿವೆ. ಕೆಲವರು ಇದು ಮೋಸದಾಟ ಎಂದು ಆರೋಪಿಸಿದ್ದಾರೆ. ಕಳೆದ ಎರಡು ದಿನಗಳಿಂದ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಮೆಟ್ರಿಕ್ ನಂತರದ ವಸತಿ ನಿಲಯ ಆರಂಭಿಸಿ
ನಡೆದಿದ್ದೇನು?: ವಾಸ್ತವವಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿದ್ದಾಗ, ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿಯಲ್ಲಿದ್ದ ಸೂರ್ಯಕುಮಾರ್ ಯಾದವ್ ಯಾವುದೇ ತಪ್ಪು ಮಾಡದೆ ಅಮೋಘ ಕ್ಯಾಚ್ ಹಿಡಿದರು. ಈ ಕ್ಯಾಚ್ ಹಿಡಿಯುವಲ್ಲಿ ಸೂರ್ಯಕುಮಾರ್ ಯಾದವ್ ಸಣ್ಣ ತಪ್ಪು ಮಾಡಿದ್ದರೆ ವಿಶ್ವಕಪ್ ಕನಸು ನುಚ್ಚುನೂರಾಗುತ್ತಿತ್ತು. 'ಸ್ಕೈ' ಅದ್ಬುತ ಫೀಲ್ಡಿಂಗ್‌ಗೆ ದೇಶವ್ಯಾಪಿ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದಬಂದಿತು.
ಸದ್ಯ ಈ ಗೊಂದಲಗಳ ಕುರಿತು ಸ್ವತಃ ಸೂರ್ಯಕುಮಾರ್ ಯಾದವ್ ಅವರೇ ಪ್ರತಿಕ್ರಿಯಿಸಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಹಿಡಿಯುವಾಗ ನಾನು ಬೌಂಡರಿ ಲೈನ್ ತುಳಿದಿಲ್ಲ ಎಂಬ ವಿಷಯ ನನಗೆ ನಿಖರವಾಗಿ ತಿಳಿದಿತ್ತು. ಸಾಮಾನ್ಯವಾಗಿ ಲಾಂಗ್-ಆನ್ನಲ್ಲಿ ರೋಹಿತ್ ಅವರು ನಿಲ್ಲುವುದಿಲ್ಲ. ಬಾಲ್ ಬರುತ್ತಿದ್ದಂತೆ ರೋಹಿತ್ ಮತ್ತು ನಾನು ಪರಸ್ಪರ ಒಬ್ಬರನೊಬ್ಬರು ನೋಡಿಕೊಂಡೆವು. ರೋಹಿತ್ ಕ್ರೀಸ್ ಬಳಿ ಬಂದಿದ್ರೆ, ಕ್ಯಾಚ್ ಅವರಿಗೆ ಎಸೆಯುತ್ತಿದ್ದೆ ಎಂದರು.
ನನ್ನ ಗುರಿ ಆ ಕ್ಯಾಚ್ ಹಿಡಿಯುವುದಾಗಿತ್ತು ಅಷ್ಟೇ. ಆ ಮೂರರಿಂದ ನಾಲ್ಕು ಸೆಕೆಂಡ್ಗಳು ಏನಾಯಿತು ಎಂಬುದನ್ನು ನಿಜಕ್ಕೂ ವಿವರಿಸಲು ಅಸಾಧ್ಯ. ನಿಮ್ಮ ಪ್ರಕಾರ ಆ ಕ್ಯಾಚ್ ಸ್ಪಷ್ಟವಾಗಿರಲಿಲ್ಲವೇ ಎಂದು ತಮ್ಮನ್ನು ಪ್ರಶ್ನಿಸಿದವರಿಗೆ ಸೂರ್ಯ ತಮಾಷೆ ಮಾಡಿದರು. ಸದ್ಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).