ಓಮನ್: ನಾಯಕ ತಿಲಕ್ ವರ್ಮ (44 ರನ್, 35 ಎಸೆತ, 2 ಬೌಂಡರಿ, 2 ಸಿಕ್ಸರ್) ಬಿರುಸಿನಾಟ ಮತ್ತು ಅಂಶುಲ್ ಕಂಬೋಜ್ (33ಕ್ಕೆ 3) ಬಿಗಿ ದಾಳಿ ನೆರವಿನಿಂದ ಭಾರತ ಎ ತಂಡ ಎಮರ್ಜಿಂಗ್ ಏಷ್ಯಾಕಪ್ ಟಿ20 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ಎದುರು 7 ರನ್ಗಳಿಂದ ರೋಚಕ ಗೆಲುವು ಸಾಧಿಸಿ ಶುಭಾರಂಭ ಕಂಡಿದೆ.
ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ ಎ ತಂಡ 8 ವಿಕೆಟ್ಗೆ 183 ರನ್ ಕಲೆಹಾಕಿತು. ಪ್ರತಿಯಾಗಿ ಪಾಕಿಸ್ತಾನ 7 ವಿಕೆಟ್ಗೆ 176 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ಎ: 8 ವಿಕೆಟ್ಗೆ 183 (ಅಭಿಷೇಕ್ 36, ಪ್ರಭ್ಸಿಮ್ರನ್ 36, ತಿಲಕ್ 44, ನೇಹಾಲ್ 25, ಬಡೋನಿ 2, ರಮಣ್ದೀಪ್ 17, ನಿಶಾಂತ್ 6, ಸುಫಿಯಾನ್ 28ಕ್ಕೆ 2). ಪಾಕಿಸ್ತಾನ: 7 ವಿಕೆಟ್ಗೆ 176 (ಯಾಸಿರ್ ಖಾನ್ 33, ಮಿನ್ಹಾಸ್ 41, ಸಮದ್ 25, ಕಂಬೋಜ್ 33ಕ್ಕೆ 3, ರಸಿಕ್ ಸಲಾಂ 30ಕ್ಕೆ 2, ನಿಶಾಂತ್ ಸಂಧು 15ಕ್ಕೆ 2).