ಅಲ್ ಅಮರತ್: ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ಎ ತಂಡ ಎಮರ್ಜಿಂಗ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಸೋಮವಾರ ನಡೆದ ತನ್ನ 2ನೇ ಪಂದ್ಯದಲ್ಲಿ ತಿಲಕ್ ವರ್ಮ ಸಾರಥ್ಯದ ಭಾರತ ಎ ತಂಡ ಯುಎಇ ವಿರುದ್ಧ 7 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಭಾರತ ಮೊದಲ ಪಂದ್ಯದಲ್ಲಿ ಪಾಕ್ ಎದುರು ಗೆದ್ದಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಯುಎಇ, ಭಾರತೀಯರ ಬಿಗಿ ದಾಳಿ ಎದುರು 16.5 ಓವರ್ಗಳಲ್ಲಿ 107 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಅಭಿಷೇಕ್ ಶರ್ಮ (58 ರನ್, 24 ಎಸೆತ, 6 ಬೌಂಡರಿ, 4 ಸಿಕ್ಸರ್) ಬಿರುಸಿನ ಅರ್ಧಶತಕದ ಬಲದಿಂದ ಭಾರತ 10.5 ಓವರ್ಗಳಲ್ಲೇ 3 ವಿಕೆಟ್ಗೆ 111 ರನ್ ಗಳಿಸಿ ಜಯಿಸಿತು. ಈ ಮೂಲಕ ಭಾರತ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಭಾರತ ಎ ತಂಡ ತನ್ನ ಮುಂದಿನ ಪಂದ್ಯದಲ್ಲಿ ಬುಧವಾರ ಆತಿಥೇಯ ಓಮನ್ ವಿರುದ್ಧ ಆಡಲಿದೆ.
ಯುಎಇ: 16.5 ಓವರ್ಗಳಲ್ಲಿ 107 (ರಾಹುಲ್ ಚೋಪ್ರಾ 50, ಬಸಿಲ್ 22, ರಸಿಕ್ 15ಕ್ಕೆ 3, ರಮಣ್ದೀಪ್ 7ಕ್ಕೆ 2, ಅಭಿಷೇಕ್ 0ಗೆ 1, ಕಂಬೋಜ್ 17ಕ್ಕೆ 1). ಭಾರತ ಎ: 10.5 ಓವರ್ಗಳಲ್ಲಿ 3 ವಿಕೆಟ್ಗೆ 111 (ಅಭಿಷೇಕ್ ಶರ್ಮ 58, ತಿಲಕ್ 21, ಬಡೋನಿ 12*, ಶಫಿ 32ಕ್ಕೆ 1).