ಹೈದರಾಬಾದ್: ಕಳೆದ ಭಾನುವಾರ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಉದ್ಯಮಿ ವೆಂಕಟ ದತ್ತ ಸಾಯಿ ದಂಪತಿಗೆ ಮಂಗಳವಾರ ರಾತ್ರಿ ಹೈದರಾಬಾದ್ನಲ್ಲಿ ನಡೆದ ಆರತಕ್ಷತೆಯಲ್ಲಿ ಗಣ್ಯರು ಶುಭಹಾರೈಸಿದರು.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಚಿತ್ರರಂಗದ ತಾರೆಯರಾದ ಚಿರಂಜೀವಿ, ನಾಗಾರ್ಜುನ, ಅಜಿತ್ ಕುಮಾರ್, ಅರ್ಜುನ್ ಸರ್ಜಾ, ಮೃಣಾಲ್ ಠಾಕೂರ್, ರೋಜಾ, ಗಾಯಕಿ ಮಂಗ್ಲಿ, ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್ ತಾರೆಯರಾದ ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ಸಹಿತ ಅನೇಕರು ನವದಂಪತಿಯನ್ನು ಹರಸಿದರು.
29 ವರ್ಷದ ಸಿಂಧು ಮದುವೆಯ ನಂತರವೂ ಬ್ಯಾಡ್ಮಿಂಟನ್ನಲ್ಲಿ ಮುಂದುವರಿಯಲಿದ್ದು, 2027ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ವರೆಗೆ ಆಡುವ ಹಂಬಲ ಹೊಂದಿದ್ದಾರೆ.