ಕ್ರೀಡೆ

ದೇಶೀಯ ಕ್ರಿಕೆಟ್ ಟೂರ್ನಿಗೆ ಭರ್ಜರಿ ಕಂಬ್ಯಾಕ್ ಮಾಡಿದ ಇಶಾನ್ ಕಿಶನ್

ಅನಂತಪುರ: ಟೀಮ್ ಇಂಡಿಯಾ ಯುವ ಆಟಗಾರ ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಟೂರ್ನಿಗೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಗುರುವಾರ ಆರಂಭಗೊಂಡ ದುಲೀಪ್ ಟ್ರೋಫಿ ಎರಡನೇ ಸುತ್ತಿನ ಪಂದ್ಯದಲ್ಲಿ ಎಡಗೈ ಬ್ಯಾಟರ್ ಇಶಾನ್ ಕಿಶನ್ (111 ರನ್, 126 ಎಸೆತ, 14 ಬೌಂಡರಿ, 3 ಸಿಕ್ಸರ್) ಶತಕದ ನೆರವಿನಿಂದ ಭಾರತ ಸಿ ತಂಡ, ಅಭಿಮನ್ಯು ಈಶ್ವರನ್ ನೇತೃತ್ವದ ಬಿ ತಂಡದ ಎದುರು ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದೆ.

ಅನಂತಪುರದ ಬಿ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತ ಭಾರತ ಸಿ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ದಿನದ 2ನೇ ಎಸೆತದಲ್ಲಿ ನಾಯಕ ಋತುರಾಜ್ ಗಾಯಕ್ಕೆ ತುತ್ತಾಗಿ ಪೆವಿಲಿಯನ್ ಸೇರಿದರು. ಬಳಿಕ 3ನೇ ವಿಕೆಟ್‌ಗೆ ಇಶಾನ್ ಕಿಶನ್ ಹಾಗೂ ಬಾಬಾ ಇಂದ್ರಜಿತ್ (78 ರನ್, 136 ಎಸೆತ, 9 ಬೌಂಡರಿ) ದಿಟ್ಟ ಜತೆಯಾಟದ ಬಲದಿಂದ ದಿನದಂತ್ಯಕ್ಕೆ 79 ಓವರ್‌ಗಳಲ್ಲಿ 5 ವಿಕೆಟ್‌ಗೆ 375 ರನ್ ಕಲೆಹಾಕಿದೆ. ಎರಡನೇ ದಿನಕ್ಕೆ ಋತುರಾಜ್ ಗಾಯಕ್ವಾಡ್ (46*ರನ್, 50 ಎಸೆತ, 7 ಬೌಂಡರಿ, 2 ಸಿಕ್ಸರ್) ಜತೆಯಾಗಿ ಮಾನವ್ ಸುಥಾರ್ (8*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ ಸಿ: 79 ಓವರ್‌ಗಳಲ್ಲಿ 5 ವಿಕೆಟ್‌ಗೆ 357 (ಋತುರಾಜ್ 46*, ಸಾಯಿ ಸುದರ್ಶನ್ 43, ರಜತ್ ಪಾಟೀದಾರ್ 40, ಇಶಾನ್ 111, ಇಂದ್ರಜಿತ್ 78, ಅಭಿಷೇಕ್ 12, ಸುಥಾರ್ 8*, ಮುಕೇಶ್ ಕುಮಾರ್ 76ಕ್ಕೆ 3).