ನವದೆಹಲಿ: ಹಾಲಿ IPL ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಸೋಲುಂಡಿದ್ದು ನಾಯಕ ಡೇವಿಡ್ ವಾರ್ನರ್ಗೆ ನೀವು ಆಡದೇ ಇರುವುದು ಸೂಕ್ತ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಲಹೆ ನೀಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಸೋಲಿನ ಕುರಿತು ಮಾತನಾಡಿರುವ ಸೆಹ್ವಾಗ್ ಡೇವಿಡ್ ಅವರೇ ನೀವು ಯಶಸ್ವಿ ಜೈಸ್ವಾಲ್ ತರಹ 25 ಬಾಲ್ಗಳಲ್ಲಿ 50ರನ್ ಗಳಿಸಿ. ಅದು ಸಾಧ್ಯವಾಗದಿದ್ದಲ್ಲಿ IPL ಆಡುವುದನ್ನು ಬಿಟ್ಟು ಬಿಡಿ.
ತಂಡದ ದೊಡ್ಡ ಹಿಟರ್ಗಳಾದ ರೋಮೆನ್ ಪೊವೆಲ್ ಹಾಗೂ ಇಶಾನ್ ಪೊರೆಲಗ್ ದೊಡ್ಡ ಹಿಟರ್ಗಳಾಗಿದ್ದು ಡೇವಿಡ್ ವಾರ್ನರ್ 65 ರನ್ ಗಳಿಸುವ ಬದಲು 30 ರನ್ ಗಳಿಸಿದ್ದರೆ ಸಾಕಾಗುತ್ತಿತ್ತು.
ನೀವು ಔಟ್ ಆದ ವೇಳೆಗೆ ಹೆಚ್ಚಿನ ರನ್ ಹಾಗೂ ಕಡಿಮೆ ಬಾಲ್ಗಳು ಇದ್ದ ಕಾರಣ ತಂಡ ಗೆಲ್ಲಲು ಸಾದ್ಯವಾಗಲಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಖಾಯಂ ನಾಯಕ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ನೇತೃತ್ವದಲ್ಲಿ ಕಣಕ್ಕಿಳಿದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ಮೂರು ಸೋಲುಗಳೊಂದಿಗೆ ತನ್ನ ಆಭಿಯಾನವನ್ನು ಶುರು ಮಾಡಿರುವುದು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಮೊದಲ ಪಂದ್ಯದಲ್ಲಿ LSG ವಿರುದ್ಧ 50 ರನ್ಗಳ ಸೋಲು, ಎರಡನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ 6 ವಿಕೆಟ್, ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್ಗಳ ಸೋಲನ್ನು ಕಂಡಿದೆ.