ಪುಣೆ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಸರಣಿಯ (Test Series) ಮೊದಲ ಪಂದ್ಯದಲ್ಲಿ ಆತಿತೇಯರು ಹೀನಾಯ ಸೋಲು ಕಂಡಿದ್ದು, ಸರಣಿಯ ಎರಡನೇ ಹಾಗೂ ಮೂರನೇ ಪಂದ್ಯದ ಮೂಲಕ ಕಮ್ಬ್ಯಾಕ್ ಮಾಡಬೇಕೆಂದು ಪಣತೊಟ್ಟು ಕಠಿಣ ಅಭ್ಯಾಸ್ ನಡೆಸುತ್ತಿದೆ. ಅಕ್ಟೋಬರ್ 24ರಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಸರಣಿಯ ಎರಡನೇ ಪಂದ್ಯ ನಡೆಯಲಿದ್ದು, ಪ್ರವಾಸಿ ತಂಡಕ್ಕೆ ಶಾಕ್ ಕೊಡಬೇಕೆಂಬ ನಿಟ್ಟಿನಲ್ಲಿ ಟೀಮ್ ಇಂಡಿಯಾ (Team India) ಯೋಜನೆ ರೂಪಿಸಿದೆ.
ಇನ್ನೂ ಸರಣಿಯ ಮೊದಲ ಪಂದ್ಯದಲ್ಲಿ ಆದ ಎಡವಟ್ಟುಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ತಂಡದಲ್ಲಿ (Team India) ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದ್ದು, ಶುಭಮನ್ ಗಿಲ್ (Shubman Gill) ತಂಡಕ್ಕೆ ಕಮ್ಬ್ಯಾಕ್ ಮಾಡಬಹುದು ಎಂದು ಹೇಳಲಾಗಿದೆ. ಕತ್ತು ನೋವು ಕಾಣಿಸಿಕೊಂಡಿದ್ದರಿಂದ ಸರಣಿಯ ಮೊದಲ ಪಂದ್ಯದಲ್ಲಿ ಹೊರಗುಳಿದಿದ್ದ ಗಿಲ್ ಇದೀಗ ಫಿಟ್ ಆಗಿದ್ದು, ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದಾರೆ. ಶುಭಮನ್ ಗಿಲ್ ತಂಡಕ್ಕೆ ವಾಪಸ್ ಆದರೆ, ರಾಹುಲ್ (KL Rahul) ಅಥವಾ ಸರ್ಫರಾಜ್ರನ್ನು (Sarfaraz) ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆ ಮಾಡಲಾಗುತ್ತಿದ್ದು, ಕೋಚ್ ಗೌತಮ್ ಗಂಭೀರ್ (Coach Gautam Gambhir) ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಏನು ಬರುತ್ತದೆ ಎಂಬುದು ಮುಖ್ಯವಲ್ಲ. ನಮಗೆ ತಂಡದ ತಂಡದ ನಿರ್ವಹಣೆ, ನಾಯಕತ್ವ ಮತ್ತು ತಂಡ ಹೇಗೆ ಆಡುತ್ತದೆ ಎಂಬುದು ನಮಗೆ ಬಹಳ ಮುಖ್ಯವಾಗಿದೆ. ನಮ್ಮವರು ಉತ್ತಮ ಲಯದಲ್ಲಿದ್ದು, ಕಾನ್ಪುರದಲ್ಲಿ ನಡೆದ ಟೆಸ್ಟ್ ಅದಕ್ಕೆ ಉದಾಹರಣೆಯಾಗಿದೆ. ಸದ್ಯದ ಮಟ್ಟಿಗೆ ಎಲ್ಲರೂ ಲಯದಲ್ಲಿದ್ದು, ದೊಡ್ಡ ಸ್ಕೋರ್ ಗಳಿಸುತ್ತಾರೆ ಎಂಬುದು ನನಗೆ ಖಚಿತವಾಗಿದೆ. ಅಂತಿಮವಾಗಿ ತಂಡ ಆಯ್ಕೆ ಮಾಡುವುದು ನಮಗೆ ಬಿಟ್ಟಿದ್ದು ಎಂದು ಕೋಚ್ ಗೌತಮ್ ಗಂಭೀರ್ (Coach Gautam Gambhir) ಹೇಳಿದ್ದಾರೆ.
ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕದೊಂದಿಗೆ ತಂಡಕ್ಕೆ ನೆರವಾಗಿದ್ದ ಸರ್ಫರಾಜ್ ಖಾನ್ ದ್ವಿತೀಯ ಪಂದ್ಯದಲ್ಲೂ ಸ್ಥಾನ ಪಡೆಯುವುದು ಖಚಿತವಾಗಿದೆ. ಬೆಂಗಳೂರು ಟೆಸ್ಟ್ನಲ್ಲಿ ರನ್ ಗಳಿಸಲು ವಿಫಲರಾಗಿದ್ದ ರಾಹುಲ್ ಬದಲಿಗೆ ಗಿಲ್ ಆಯ್ಕೆಯಾಗುವುದು ಖಚಿತವಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸರ್ಫರಾಜ್ ಬದಲಿಗೆ ರಾಹುಲ್ಗೆ ಚಾನ್ಸ್ ಕೊಡಲಾಗುತ್ತದೆ ಎಂಬ ಪೋಸ್ಟ್ ವೈರಲ್ ಆಗಿದ್ದು, ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.