ಈ ಬಾರಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ 18 ವರ್ಷಗಳ ನಂತರ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.
IPL 2025ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಆರಂಭದಿಂದಲೂ ಬಲಿಷ್ಠವಾಗಿದೆ. ಪ್ರತಿ ಪಂದ್ಯದಲ್ಲಿ ಪ್ರತಿ ಆಟಗಾರರು ಅಧ್ಬುತ ಪ್ರದರ್ಶನ ನೀಡುವ ಮೂಲಕ ಫೈನಲ್ಗೇರಿದ ತಂಡ ಆರ್‌ಸಿಬಿ. ಫೈನಲ್ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಕಪ್ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರ್‌ಸಿಬಿ ಮಾಲೀಕರು ಯಾರು..?
ಈಗ, ಐಪಿಎಲ್‌ನಲ್ಲಿ ಆಟಗಾರರಲ್ಲದೆ, ತಂಡದ ಮಾಲೀಕರು ಸಹ ಪ್ರತಿ ಬಾರಿಯಂತೆ ಸುದ್ದಿಯಲ್ಲಿದ್ದರು. ಮುಂಬೈ ಇಂಡಿಯನ್ಸ್‌ನ ಮಾಲಕಿ ನೀತಾ ಅಂಬಾನಿ, ಹೈದರಾಬಾದ್‌ನ ಕಾವ್ಯಾ ಮಾರನ್, ಪಂಜಾಬ್‌ನ ಪ್ರೀತಿ ಜಿಂಟಾ ಮತ್ತು ಕೋಲ್ಕತ್ತಾದ ಶಾರುಖ್ ಖಾನ್... ಇವರೆಲ್ಲರೂ ಕ್ರೀಡಾಂಗಣದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದರು. ಆರ್‌ಸಿಬಿ ಐಪಿಎಲ್ ಗೆದ್ದ ನಂತರ, ಈಗ ಎಲ್ಲಾ ಅಭಿಮಾನಿಗಳು ಮತ್ತು ಇತರ ಕ್ರಿಕೆಟ್ ಪ್ರಿಯರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇದೆ, ಆರ್‌ಸಿಬಿಯ ಮಾಲೀಕರು ಯಾರು?
ಇದನ್ನೂ ಓದಿ:IRCTC ತತ್ಕಾಲ್ ಟಿಕೆಟ್ ಹಗರಣ ಬಯಲು; ರೈಲು ಟಿಕೆಟ್ಗಳು ಕೆಲವೇ ನಿಮಿಷಗಳಲ್ಲಿ ಮಾಯವಾಗಲು ಇದೇ ಕಾರಣ| IRCTC
ಆರ್‌ಸಿಬಿ ಬಗ್ಗೆ ಚರ್ಚೆಯಾದಾಗಲೆಲ್ಲಾ ವಿಜಯ್ ಮಲ್ಯ ಅವರ ಹೆಸರು ಬರುತ್ತದೆ, ಆದರೆ ಮಲ್ಯ ಕಳೆದ ಹಲವು ವರ್ಷಗಳಿಂದ ಆರ್‌ಸಿಬಿಯ ಮಾಲೀಕರಲ್ಲ. ಆರ್‌ಸಿಬಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಕಂಪನಿಯ ಒಡೆತನದಲ್ಲಿದೆ. ಅದು ದೊಡ್ಡ ಮದ್ಯ ತಯಾರಿಕಾ ಕಂಪನಿಯಾಗಿದೆ.
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಅಧ್ಯಕ್ಷರು ಮಹೇಂದ್ರ ಕುಮಾರ್ ಶರ್ಮಾ (ಎಂ.ಕೆ. ಶರ್ಮಾ), ಅಂದರೆ ಅವರು ಆರ್‌ಸಿಬಿಯ ಪ್ರಸ್ತುತ ಮಾಲೀಕರು. ಆರ್‌ಸಿಬಿಯ ಒಟ್ಟು ನಿವ್ವಳ ಮೌಲ್ಯವು ಈ ಕಂಪನಿಯ ಖಾತೆಗೆ ಹೋಗುತ್ತದೆ.(ಏಜೆನ್ಸೀಸ್)