ಕ್ರೀಡೆ

ಪ್ಯಾರಿಸ್​ ಒಲಿಂಪಿಕ್ಸ್​ ಫೈನಲ್​ ಸ್ಪರ್ಧೆಯ ವೇಳೆ ನೀರಜ್ ಚೋಪ್ರಾ​ ಧರಿಸಿದ್ದ ವಾಚ್​ ಬೆಲೆ ಎಷ್ಟು ಗೊತ್ತೇ?

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ರಜತ ಪದಕ ಜಯಿಸಿದ ನೀರಜ್​ ಚೋಪ್ರಾ ಜಾವೆಲಿನ್​ ಥ್ರೋ ಫೈನಲ್​ ವೇಳೆ ಧರಿಸಿದ್ದ ಕೈಗಡಿಯಾರದ ಬೆಲೆ 52 ಲಕ್ಷ ರೂ. ಆಗಿದೆ ಎಂದು ವರದಿಯಾಗಿದೆ.

ಸ್ವಿಸ್​ ವಾಚ್​ ಕಂಪನಿ "ಒಮೆಗಾ'ಗೆ ನೀರಜ್​ ಚೋಪ್ರಾ ಪ್ರಚಾರ ರಾಯಭಾರಿಯಾಗಿದ್ದು, ಅದೇ ಕಂಪನಿ ನೀಡಿರುವ ವಾಚ್​ ಧರಿಸಿ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದಾರೆ ಎನ್ನಲಾಗಿದೆ.

ನೀರಜ್ ಫೈನಲ್​ ವೇಳೆ ಧರಿಸಿದ್ದ ವಾಚ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗಳು ನಡೆದ ಬಳಿಕ ಅದರ ಬ್ರ್ಯಾಂಡ್​ ಮತ್ತು ಮೌಲ್ಯ ಬೆಳಕಿಗೆ ಬಂದಿದೆ. "ಒಮೆಗಾ' ಕಂಪನಿ ಪ್ಯಾರಿಸ್​ ಒಲಿಂಪಿಕ್ಸ್​ನ ಅಧಿಕೃತ "ಟೈಮ್​ಕೀಪರ್​' ಕೂಡ ಆಗಿತ್ತು.