ಕ್ರೀಡೆ

ಜೋಕೋ ಜಯಭೇರಿ; ಭಾರತದ ಬೋಪಣ್ಣ ಜೋಡಿ ಮುನ್ನಡೆ

ನ್ಯೂಯಾರ್ಕ್: ಸೆರ್ಬಿಯಾದ ತಾರೆ ನೊವಾಕ್ ಜೋಕೊವಿಕ್ ಮೂರು ಸೆಟ್‌ಗಳ ಸುಲಭ ಗೆಲುವಿನೊಂದಿಗೆ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರೆ, ಮಹಿಳೆಯರ ವಿಭಾಗದ ಹಾಲಿ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕಿತೆ ಇಗಾ ಸ್ವಿಯಾಟೆಕ್ ನಾಲ್ಕನೇ ಸುತ್ತಿನಲ್ಲಿ ಆಘಾತ ಎದುರಿಸಿದ್ದಾರೆ. ಇದರಿಂದ ಸ್ವಿಯಾಟೆಕ್ ವಿಶ್ವ ನಂ. 1 ಪಟ್ಟವನ್ನೂ ಕಳೆದುಕೊಂಡಿದ್ದಾರೆ. ನಿವೃತ್ತಿ ಹಿಂಪಡೆದು ಪುನರಾಗಮನ ಕಂಡಿದ್ದ ಮಾಜಿ ವಿಶ್ವ ನಂ. 1 ಕ್ಯಾರೊಲಿನ್ ವೋಜ್ನಿಯಾಕಿ ಓಟವೂ 4ನೇ ಸುತ್ತಿನಲ್ಲಿ ಕೊನೆಗೊಂಡಿದೆ. ಉಳಿದಂತೆ ಆತಿಥೇಯ ತಾರೆಯರಾದ ಟೇಲರ್ ಫ್ರಿಟ್ಜ್, ಬೆನ್ ಶೆಲ್ಟನ್, ಮಹಿಳೆಯರ ವಿಭಾಗದಲ್ಲಿ ತಾರೆಯರಾದ ಕ್ಯಾರೊಲಿನಾ ಮುಚೋವಾ, ಜೆಲೆನಾ ಒಸ್ತಾಪೆಂಕೊ, ರೊಮೇನಿಯಾದ ಸೊರನಾ ಕ್ರಿಸ್ಟಿಯಾ, ಯುವತಾರೆ ಕೋಕೋ ಗ್ೌ ಎಂಟರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೋಕೋ ಜಯಭೇರಿ: 3ನೇ ಸುತ್ತಿನಲ್ಲಿ 5 ಸೆಟ್‌ಗಳ ಸೆಣಸಾಟ ನಡೆಸಿ ದಣಿದಿದ್ದ ಮೂರು ಬಾರಿಯ ಚಾಂಪಿಯನ್ ನೋವಾಕ್ ಜೋಕೊವಿಕ್ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ 6-2, 7-5, 6-4 ನೇರಸೆಟ್‌ಗಳಿಂದ ಕ್ರೊವೇಷಿಯಾದ ಬೊರ್ನಾ ಗೊಜೊ ಎದುರು ಸುಲಭ ಜಯ ಸಾಧಿಸಿದರು. 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯ ಹಂಬಲದಲ್ಲಿರುವ ಜೋಕೋ, 2 ಗಂಟೆ 26 ನಿಮಿಷಗಳ ಹೋರಾಟದ ಬಳಿಕ ವರ್ಷದ 4ನೇ ಗ್ರಾಂಡ್ ಸ್ಲಾಂನಲ್ಲೂ 8ರ ಘಟ್ಟಕ್ಕೇರಿದರು.

ಅಮೆರಿಕದ ಮೂವರು ಉಪಾಂತ್ಯಕ್ಕೆ

9ನೇ ಶ್ರೇಯಾಂಕಿತ ಟೇಲರ್ ಫ್ರಿಟ್ಜ್ 7-6, 6-4, 6-4 ರಿಂದ ಸ್ವಿಸ್‌ನ ಡೊಮಿನಿಕ್ ಸ್ಟ್ರೀಕರ್ ಎದುರು ಗೆಲುವು ಸಾಧಿಸಿದರು. ಅಂತಿಮ 8ರ ಘಟ್ಟದಲ್ಲಿ ಜೋಕೋ ಸವಾಲು ಎದುರಿಸಲಿದ್ದಾರೆ. ಬೆನ್ ಶೆಲ್ಟನ್ 6-4,6-3,4-6,6-4 ರಿಂದ ದೇಶಬಾಂಧವ ಟಾಮಿ ಪೌಲ್‌ರನ್ನು ಮಣಿಸಿದರೆ, 10ನೇ ಶ್ರೇಯಾಂಕಿತ ್ರಾನ್ಸಿಸ್ ಟೈಪೊ 6-4, 6-1,6-4 ರಿಂದ ಆಸ್ಟ್ರೇಲಿಯಾದ ರಿಂಕಿ ಹಿಜಿಕಟ ಎದುರು ಮೇಲುಗೈ ಸಾಧಿಸಿದರು. ಇದರೊಂದಿಗೆ 2005ರ ಬಳಿಕ ಅಮೆರಿಕದ ಮೂವರು ಆಟಗಾರರು ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸಿದರು. ಆಂಡ್ರೆ ಅಗಸ್ಸಿ, ಜೇಮ್ಸ್ ಬ್ಲೇಕ್, ರಾಬಿ ಗಿನಿಪರ‌್ರಿ ಈ ಹಿಂದಿನ ಸಾಧಕರು.

ಬೋಪಣ್ಣ ಜೋಡಿ ಮುನ್ನಡೆ

ಟೂರ್ನಿಯಲ್ಲಿ ಭಾರತೀಯರ ಪಾಲಿಗೆ ಏಕೈಕ ಆಶಾಕಿರಣ ಎನಿಸಿರುವ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. 6ನೇ ಶ್ರೇಯಾಂಕಿತ ಜೋಡಿ ಮೂರನೇ ಸುತ್ತಿನಲ್ಲಿ 6-4,6-7,7-6 ರಿಂದ ಬ್ರಿಟನ್‌ನ ಜೂಲಿಯನ್ ಕಾಶ್ -ಹೆನ್ರಿ ಪ್ಯಾಟೆನ್ ಎದುರು 2 ಗಂಟೆ 22 ನಿಮಿಷಗಳ ಕಠಿಣ ಹೋರಾಟದಲ್ಲಿ ಗೆದ್ದಿತು. ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಇಂಡೋನೇಷ್ಯಾದ ಅಲ್ಡಿಲಾ ಸುಟ್ಜಿಯಾಡಿ ಜತೆ ನಿರಾಸೆ ಅನುಭವಿಸಿತು.