ನ್ಯೂಯಾರ್ಕ್: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಸೌಹಾರ್ದಯುತ ಗಾಲ್ಫ್ ಪಂದ್ಯವಾಡಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಧೋನಿ, ಟ್ರಂಪ್ ಆಹ್ವಾನದ ಮೇರೆಗೆ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್ಗೆ ತೆರಳಿ ಗಾಲ್ಫ್ ಆಡಿದ್ದಾರೆ. ಇದರ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಮುನ್ನ ಯುಎಸ್ ಓಪನ್ ಟೂರ್ನಿಗೂ ಹಾಜರಾಗಿದ್ದ ಧೋನಿ, ಅಲ್ಕರಾಜ್-ಜ್ವೆರೇವ್ ನಡುವಿನ ಕ್ವಾರ್ಟರ್ಫೈನಲ್ ಪಂದ್ಯ ವೀಕ್ಷಿಸಿದ್ದರು.